ಚಿಕ್ಕೋಡಿ

ಅಂಬೇಡ್ಕರರು ಬರೆದ ಸಂವಿಧಾನ ಜಗತ್ತಿಗೆ ಮಾದರಿ: ಭಾತೆ

ಅಂಬೇಡ್ಕರರು ಬರೆದ ಸಂವಿಧಾನ ಜಗತ್ತಿಗೆ ಮಾದರಿ: ಭಾತೆ
ತಾಲೂಕಿನ ಕರೋಶಿ ಗ್ರಾಮದಲ್ಲಿ ನಿರ್ಮಾಣವಾದ ಡಾ,ಬಿ.ಆರ್.ಅಂಬೇಡ್ಕರ ಭವನವನ್ನು ಯುವ ಧುರೀಣ ಅರುಣ ಐಹೊಳೆ ಹಾಗೂ ಮಹೇಶ ಭಾತೆ

ಚಿಕ್ಕೋಡಿ 21: ಅಂಬೇಡ್ಕರ ಆಚಾರ-ವಿಚಾರ ಪಾಲಿಸುವುದರೊಂದಿಗೆ ಸಂವಿಧಾನ ಗೌರವಿಸಲು ನಾವೆಲ್ಲರೂ ಬದ್ಧರಾಗಬೇಕು. ಅಂಬೇಡ್ಕರ ಬರೆದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಮಹೇಶ ಭಾತೆ ಹೇಳಿದರು.

ತಾಲೂಕಿನ ಜೈನಾಪೂರ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಭವನ ಉದ್ಘಾಟಿಸಿ ಅವರು ಮಾತನಾಡಿದರು. 

ಯುವ ಧುರೀಣ ಅರುಣ ಐಹೊಳೆ ಮಾತನಾಡಿ, ಅಂಬೇಡ್ಕರ ಬರೆದ ಸಂವಿಧಾನ ಇಡೀ ಜಗತ್ತಿನಲ್ಲಿ ಚರಿತ್ರೆಯಾಗಿ ಹೋಗಿದೆ. ಹೀಗಾಗಿ ಮಹಾನ್ ವ್ಯಕ್ತಿಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಮ್ಮ ತಂದೆ ದುರ್ಯೋಧನ ಐಹೊಳೆ ತಮ್ಮ ಶಾಸಕರ ಅನುದಾನದಲ್ಲಿ ಮಂಜೂರಾದ ಹಣದಲ್ಲಿ ಭವನ ನಿರ್ಮಿಸಲಾಗಿದೆ. ಸಮುದಾಯ ಬಾಂಧವರು ಭವನದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜೈನಾಪೂರ ಗ್ರಾಮ ವ್ಯಾಪ್ತಿಯ ಮಾಜಿ ಶಾಸಕ ಮನೋಹರ ಕಟ್ಟಿಮನಿ ತೋಟದವರೆಗೆ ರಸ್ತೆ ನಿರ್ಮಾಣ ಹಾಗೂ ಬಿದರೋಳ್ಳಿ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ತಲಾ 10 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಅರುಣ ಐಹೊಳೆ ಚಾಲನೆ ನೀಡಿದರು.

ಡಾ.ಸಿದ್ದಲಿಂಗಸ್ವಾಮಿಗಳು. ಮಾಜಿ ಶಾಸಕ ಮನೋಹರ ಕಟ್ಟಿಮನಿ. ಧುರೀಣ ಅಣ್ಣಾಸಾಹೇಬ ಖೇಮಲಾಪೂರೆ, ಗ್ರಾಪಂ ಅಧ್ಯಕ್ಷ ಸುರೇಶ ಗರಬುಡೆ, ಅಶೋಕ ನಿಂಗನೂರೆ, ರಾಯಗೌಡ ಗೆಳಗಿನಮನಿ, ವಿಜಯ ಕೋಠಿವಾಲೆ, ಅನೀಲ ಪಾಟೀಲ, ರವಿ ಹಿರೇಕೊಡಿ, ತಾಪಂ ಸದಸ್ಯ ಕಲ್ಮೇಶ್ವರ ರಾಚನ್ನವರ ಇದ್ದರು.

ಸುದ್ದಿ ಓದಿ