ಶಿಗ್ಗಾವ್

‘ಭಾರತೀಯ ಜನತಾ ಪಕ್ಷ ಚುಕ್ಕಾಣಿಯನ್ನು ಹಿಡಿದು ಇತಿಹಾಸ ನಿರ್ಮಿಸಲಿದೆ’ : ಭೋಜರಾಜ ಕರೂದಿ

‘ಭಾರತೀಯ ಜನತಾ ಪಕ್ಷ ಚುಕ್ಕಾಣಿಯನ್ನು ಹಿಡಿದು ಇತಿಹಾಸ ನಿರ್ಮಿಸಲಿದೆ’ :  ಭೋಜರಾಜ ಕರೂದಿ

ಲೋಕದರ್ಶನ ವರದಿ 


ಶಿಗ್ಗಾವಿ 12: ತಾಲೂಕಿನ ಬಂಕಾಪೂರ ಪುರಸಭೆ ಈ ಸಲ ಭಾರತೀಯ ಜನತಾ ಪಕ್ಷ ಚುಕ್ಕಾಣಿಯನ್ನು ಹಿಡಿದು ಇತಿಹಾಸ ನಿರ್ಮಿಸಲಿದೆ ಎಂದು ಬಂಕಾಪೂರ ಪುರಸಭೆ ಉಸ್ತುವಾರಿ ಭೋಜರಾಜ ಕರೂದಿ ಹೇಳಿದರು. 

ಬಂಕಾಪೂರ ಪಟ್ಟಣದ ಭಾಜಪ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಸ್ವಕ್ಷೇತ್ರ ಆಗಿರುವುದರಿಂದ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ ಅಲ್ಲದೇ ಆಡಳಿತಾರೂಡ ಭಾರತೀಯ ಜನತಾ ಪಕ್ಷ ಕೇಂದ್ರ ಹಾಗೂ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಇರುವುದರಿಂದ ಪಟ್ಟಣದ 23 ವಾರ್ಡಗಳಲ್ಲಿ ಆಕಾಂಕ್ಷಿಗಳ ಸಂಖೈ 1 ಕ್ಕೆ ಮೂರು ಪಟ್ಟು ಹೆಚ್ಚಾಗಿದ್ದು ಅದರಲ್ಲಿ ಅಲ್ಪಸಂಖ್ಯಾತರೂ ಹೆಚ್ಚಿನ ಸಂಖೈಯಲ್ಲಿ ಭಾಜಪ ಪಕ್ಷಕ್ಕೇ ಬರುತ್ತಿರುವುದು ಸ್ವಾಗತಾರ್ಹ ಆದ್ದರಿಂದ ಪಟ್ಟಣದ ಹಿರಿಯರ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆ ಮಾಡಿ ಯೋಗ್ಯ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳಿಗೆ ಟಿಕೇಟ ನೀಡಲಾಗುತ್ತಿದ್ದು ಯಾರಿಗೆ ಟಿಕೇಟ ದೊರೆತರೂ ಸಹಿತ ಏಕೋ ಮನೋಭಾವದಿಂದ ಪಕ್ಷಕ್ಕಾಗಿ ದುಡಿಯುವ ಮತ್ತು ಪಟ್ಟಣದ ಅಭಿವೃದ್ದಿಗೋಸ್ಕರ ಕೈ ಜೋಡಿಸಿ ಎಂದರು. 

ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಧೀಪ ಮಳ್ಳೂರ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ದಿಯ ಹರಿಕಾರರು ಹಾಗೂ ಧೀಮಂತನಾಯಕರು ಅವರು ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮಾಡಬೇಕು ಎಂದು ಕನಸ್ಸು ಕಂಡವರು ಅವರ ಕನಸ್ಸು ನನಸ್ಸಾಗಲು ಬಂಕಾಪೂರ ಪುರಸಭೆ ಭಾಜಪ ಪಾಲಾಗಬೇಕು ಅಂದರೆ ಮಾತ್ರ ಸಾಧ್ಯ ಆದ್ದರಿಂದ ಯಾರಿಗೇ ಟಿಕೇಟ ಸಿಕ್ಕರೂ ಸಹಿತ ಅವರ ಪರವಾಗಿ ಸಂಘಟನೆ ಮಾಡಿ ಹೆಚ್ಚಿನ ಸಂಖೈಯಲ್ಲಿ ಭಾಜಪ ಪಕ್ಷ ಗೆಲುವಿನ ಅಂತರಗಳಿಸಬೇಕು ಎಂದರು. 

ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ತಾಲೂಕಿನಲ್ಲಿ 2008 ರಿಂದ 2021 ರವರೆಗೂ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ನುಡಿದಂತೆ ನೆಡೆದ ಬಸವರಾಜ ಬೊಮ್ಮಾಯಿಯವರು ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿರುವುದರಿಂದ ಅನೇಕ ಜನಪ್ರೀಯ ಹಾಗೂ ಸಮಗ್ರ ಅಭಿವೃದ್ದಿಗೋಸ್ಕರ ಸಂಕಲ್ಪ ಮಾಡಿದ ಅವರು ದೂರದೃಷ್ಟಿಯುಳ್ಳ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅಲ್ಲದೇ ಬಂಕಾಪೂರ ಪುರಸಭೆಯಲ್ಲಿ 23 ವಾರ್ಡಗಳಲ್ಲಿಯೂ ಸಹಿತ ಭಾಜಪ ಭಾವುಟ ಹಾರಬೇಕು ಅವಾಗ ಅನೇಕ ಅಭಿವೃದ್ದಿಪರ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದರು. 

ಈ ಸಂದರ್ಭದಲ್ಲಿ ರಾಜ್ಯ ಯುವಮೋರ್ಚಾ ಸದಸ್ಯ ನರಹರಿ ಕಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶಿವರಾಜ ರಾಯಣ್ಣವರ, ಮುಖಂಡರಾದ ಶಿವಾನಂದ ಗಚ್ಚಿನಮಠ, ಗುಡ್ಡಪ್ಪ ಮತ್ತೂರ, ರಾಘವೇಂದ್ರ ಮೇಲಗೇರಿ, ಎಂ.ಎನ್‌.ಹೊನಕೇರಿ ಬಸವರಾಜ ನಾರಾಯಣಪೂರ, ಶರೀಫಸಾಬ ನದಾಫ, ಸತೀಶ ವನಹಳ್ಳಿ, ಬಾಪನಗೌಡ ಪಾಟೀಲ, ವಿನಯ ಹಲಗೇರಿ, ಖಾಜಾ ಖಲೀಫಾ, ರೇಣುಕನಗೌಡ ಪಾಟೀಲ, ಕಾಶೀನಾಥ ಕಳ್ಳೀಮನಿ ಸೇರಿದಂತೆ ತಾಲೂಕ ಮಂಡಲದ ಎಲ್ಲ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ಬಸವರಾಜ ನಾರಾಯಣಪೂರ ಕಾರ್ಯಕ್ರಮ ನಿರ್ವಹಿಸಿದರು, ಮಧು ಜಂಗಲಿ ವಂದಿಸಿದರು. 


ಸುದ್ದಿ ಓದಿ