ರಾಷ್ಟ್ರೀಯ

ಮೌನಮೆರಣಿಗೆಗಳು, ಪ್ರಾರ್ಥನೆಗಳ ಮೂಲಕ ‘ಸುನಾಮಿ’ಯ 16ನೇ ವರ್ಷಾಚರಣೆ

ಮೌನಮೆರಣಿಗೆಗಳು, ಪ್ರಾರ್ಥನೆಗಳ ಮೂಲಕ ‘ಸುನಾಮಿ’ಯ 16ನೇ ವರ್ಷಾಚರಣೆ

ಚೆನ್ನೈ, ಡಿಸೆಂಬರ್ 26: ಭೀಕರ ಸುನಾಮಿ ಅಪ್ಪಳಿಸಿ ಇಂದಿಗೆ 16 ವರ್ಷವಾಗುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನ ಕರಾವಳಿಯಲ್ಲಿ ನೈಸರ್ಗಿಕ ವಿಕೋಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಭೆಗಳನ್ನು ಆಯೋಜಿಸಲಾಗಿದೆ.

ಕರಾವಳಿಯಾದ್ಯಂತ ಮೌನ ಮೆರವಣಿಗೆಗಳು, ವಿಶೇಷ ಪೂಜೆ- ಪ್ರಾರ್ಥನೆಗಳು ಹಾಗೂ ಮೇಣದ ಬತ್ತಿ ಬೆಳಗಿಸುವುದರ ಮೂಲಕ ದಿನವನ್ನು ಆಚರಿಸಲಾಗುತ್ತಿದೆ. ಭೀಕರ ಅಲೆಗಳಿಂದ ಕೂಡಿದ ಭಾರೀ ಸುನಾಮಿ 8,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. ಕರಾವಳಿಯ ಚೆನ್ನೈ, ಕಡಲೂರು, ನಾಗಪಟ್ಟಣಂ ಮತ್ತು ಕನ್ಯಾಕುಮಾರಿ ಜಿಲ್ಲೆಗಳನ್ನು ನಾಶಪಡಿಸಿತ್ತು.

ಹೆಚ್ಚಿನ ಮೀನುಗಾರರು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದ್ದಾರೆ.

ನತದೃಷ್ಟರ ಶ್ರದ್ಧಾಂಜಲಿ ಸಲ್ಲಿಸಲು ಕೆಲ ಜಿಲ್ಲೆಗಳಲ್ಲಿ  ಮೀನುಗಾರರು ಸುಮುದ್ರಕ್ಕೆ ಇಳಿದಿಲ್ಲ.

‘ಈ ದುರಂತ ಸಂಭವಿಸಿ 16 ವರ್ಷ ಕಳೆದಿದ್ದರೂ, ಇಂದಿಗೂ ಆ ನೆನಪಿನಿಂದ ಅಳಸಿಲ್ಲ ಎಂದು ಮೀನುಗಾರಿಕೆಯಿಂದ ದೂರವಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮೀನುಗಾರರು ಹೇಳಿದ್ದಾರೆ.

ತಿರುವಳ್ಳೂರು ಜಿಲ್ಲೆಯ ಕೊರೈಕುಪ್ಪಂ ಗ್ರಾಮದಲ್ಲಿ ಹಬೀಬುಲ್ಲಾ ಎಂ ಮೀನುಗಾರನ ಕುಟುಂಬ ಸುನಾಮಿ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ತನ್ನ ಪತ್ನಿ ದೈತ್ಯ ಅಲೆಗಳಲ್ಲಿ ಕೊಚ್ಚಿ ಹೋದದ್ದನ್ನು ಹಬೀಬುಲ್ಲಾ ಸದಾ ಕಣ್ಣೀರಿಟ್ಟು ಸ್ಮರಿಸುತ್ತಾರೆ. 

2004 ರಲ್ಲಿ ಅಮಾವಾಸ್ಯೆಯ ಭಾನುವಾರದಂದು ಹಬೀಬುಲ್ಲಾ ಪತ್ನಿ ಊಟಕ್ಕೆ ಮೀನು ಖರೀದಿಸಲು  ಸಮೀಪವಿರುವ ಅಂಗಡಿಗೆ ಹೋಗಿದ್ದರು. ಆದರೆ, ಆಕೆ ಮನೆಗೆ ಹಿಂತಿರುಗಲೇ ಇಲ್ಲ. ಬಳಿಕ ಹಬೀಬುಲ್ಲಾ ನೀರಿನಲ್ಲಿ ತೇಲುತ್ತಿದ್ದ ಆಕೆಯ ಮೃತದೇಹವನ್ನಷ್ಟೇ ನೋಡಿದ್ದಾರೆ.

‘ನಾನು ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಘಟನೆ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಛೊತ್ತಿದೆ.’ ಎಂದು 16 ವರ್ಷಗಳ ನಂತರವೂ ಅವರು ಹೇಳಿದ್ದಾರೆ.

ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ನೂರಾರು ಕುಟುಂಬಗಳ ಇಂತಹ ಕಣ್ಣೀರ ಕತೆಗಳು ಈ ದಿನಕ್ಕೆ ಸಾಕ್ಷಿಯಾಗಿವೆ.

 

ಸುದ್ದಿ ಓದಿ