ತಾಳೂರು ಶಿವಶರಣ ಮಾಚಿದೇವರ ಜಯಂತ್ಯೋತ್ಸವ
ಸಿರುಗುಪ್ಪ 26: ಸಮುದಾಯದ ಅಭಿವೃದ್ಧಿಗೆ ಪ್ರಮುಖ ಅಂಶ ಶಿಕ್ಷಣ ಆರ್ಥಿಕ ರಾಜಕೀಯವಾಗಿ ಮಡಿವಾಳರು ಹಿಂದುಳಿದಿದ್ದಾರೆ ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಚಿತ್ರದುರ್ಗ ಮಾಚಿದೇವ ಸಂಸ್ಥಾನ ಮಠದ ಗುರು ಬಸವ ಮಾಚಿದೇವ ಸ್ವಾಮೀ ಅವರು ಹೇಳಿದರು.
ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಶಿವಶರಣ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತಾಲ್ಲೂಕು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಗಾದಿಲಿಂಗಪ್ಪ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ ಹೆಚ್ ಡಿ ಡಾ. ಎ ಗಂಗಪ್ಪ, ಉಪನ್ಯಾಸಕ ಮಂಜುನಾಥ ವಿಜಯ ನಗರ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಎ ಹನುಮಂತಪ್ಪ, ಬಳ್ಳಾರಿ ವಿಮ್ಸ್ ವೈದ್ಯಾಧಿಕಾರಿ ಡಾ ಅಯ್ಯಪ್ಪ,ಹಾಗಲೂರು ದ್ಯಾವಣ್ಣ ಸಮುದಾಯದ ಮುಖಂಡರು ಗಣ್ಯರು ಭಾಗವಹಿಸಿದ್ದರು.