ಶಿಗ್ಗಾವ್

ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ

ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ

ಲೋಕದರ್ಶನ ವರದಿ 

ಶಿಗ್ಗಾವಿ : ಭಯಬಿಟ್ಟು ಪರೀಕ್ಷೆಯನ್ನು ಎದುರಿಸಬೇಕು ಯಾವುದೇ ಆತಂಕ, ಹೆದರಿಕೆ ಇರಬಾರದು. ಪರೀಕ್ಷೆ ಒಂದು ರಣರಂಗ ಎಂದು ಭಾವಿಸದೆ ಅದನ್ನೊಂದು ಆಟದ ಮೈದಾನ ಎಂಬಂತೆ ಭಾವಿಸಿ ಸಂಭ್ರಮಪಡಬೇಕು ಎಂದು ಹಾವೇರಿಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಹೆಚ್‌. ಉಮೇಶಪ್ಪ ಹೇಳಿದರು. 

ಪಟ್ಟಣದ ಶ್ರೀ ಚನ್ನಪ್ಪಕುನ್ನೂರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಏರಿ​‍್ಡಸಿದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆವರು ಶಿಸ್ತುಬದ್ಧವಾದ ಯೋಜನೆಯೊಂದನ್ನು ತಯಾರಿಸಿಕೊಳ್ಳಬೇಕು .ಅದನ್ನು ಕಾರ್ಯಗತಗೊಳಿಸಿ ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ನಾಗರಾಜ ದ್ಯಾಮನಕೊಪ್ಪ ವಿದ್ಯಾರ್ಥಿಗಳು ಓದುವುದನ್ನು ಕಷ್ಟದ ಕೆಲಸ ಎಂದು ಭಾವಿಸದೆ ಇಷ್ಟಪಟ್ಟು ಓದಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಎಂ.ಎಸ್‌. ಕುರಂದವಾಡ, ಗೀತಾ ಸಾಲ್ಮನಿ, ಅನ್ನಪೂರ್ಣಾ ಅಂಕಲಕೋಟಿ, ರುದ್ಯಯ್ಯ ಹಳ್ಳಿಕೊಪ್ಪದಮಠ, ಮೂಂತಾದವರು ಇದ್ದರು. ಪ್ರೊ.ಕೆ.ಬಸಣ್ಣ ಸ್ವಾಗತಿಸಿದರು. ಡಾ.ಕೆ. ಎಸ್‌. ಬರದೇಲಿ ವಂದಿಸಿ ನಿರೂಪಿಸಿದರು. 


ಸುದ್ದಿ ಓದಿ