ಭೀಕರ ಮಳೆ: ಸಿಡಿಲು ಬಡಿದು ಆಕಳು ಸಾವು
ಮುದ್ದೇಬಿಹಾಳ 07: ತಾಲೂಕಿನಲ್ಲಿ ಗುರುವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭೀಕರ ಮಳೆಗೆ ತಾರನಾಳ ಗ್ರಾಮದ ಮಡಿವಾಳಮ್ಮ ಜೊಮ್ಮಣ್ಣ ಚಲವಾದಿ, ಹಣಮಂತ ಜಟ್ಟೆಪ್ಪ ಹಂದ್ರಾಳ ಸಾ. ಅಡವಿ ಸೋಮನಾಳ, ಜಕ್ಕೇರಾಳ ಗ್ರಾಮದ ದ್ಯಾಮಣ್ಣ ಸಿದ್ದಪ್ಪ ಹಂದ್ರಾಳ, ದೇವೂರ ಗ್ರಾಮದ ದುರ್ಗವ್ವ ಭೀಮರಾಯ ಮಾದರ ಮತ್ತು ಶಂಕ್ರವ್ವ ಮುತ್ತಪ್ಪ ಮಾದರ, ಕುಂಟೋಜಿ ಗ್ರಾಮದ ಮರಲಿಂಗವ್ವ ಚಂದಪ್ಪ ಕವಡಿಮಟ್ಟಿ ಮತ್ತು ಶರಣಮ್ಮ ಮಲ್ಲಪ್ಪ ಗೊಲ್ಲರ ಇವರ ಮನೆಗಳು ಭಾಗಶಃ ಹಾನಿಯಾಗಿವೆ. ಕುಂಟೋಜಿ ಗ್ರಾಮದ ಯಲ್ಲಪ್ಪ ಬಸಪ್ಪ ಯರಜೆರಿ ಎಂಬುವರಿಗೆ ಸೇರಿದ ಆಕಳು ಸಿಡಿಲು ಬಡಿದು ಸಾವನ್ನಪ್ಪಿದೆ.
ಕಾರಣ ಸರಕಾರದಿಂದ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ಆಕಳು ಮೃತ ಪಟ್ಟರೆ 37500 ರೂಪಾಯಿ ಹಾಗೂ ಪಕ್ಕಾ ಮನೆ ಸಂಪೂರ್ಣ ಹಾನಿಯಾದರೆ 120000 ರೂಪಾಯಿಗಳು, ಪಕ್ಕಾ ಮನೆ ಶೇಕಡ 15ಅ ರಷ್ಟು ಹಾನಿಯಾದರೆ 6500 ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಹಶಿಲ್ದಾರ ಬಸವರಾಜ ನಾಗರಾಜ ತಿಳಿಸಿದರು.