ತೆಕ್ಕಲಕೋಟೆ :ಬಸ್ ನಿಲ್ದಾಣದ ಶೌಚಾಲಯ ಗಬ್ಬೆದ್ದು ದುರ್ವಾಸನೆ ವ್ಯವಸ್ಥೆ ಗೊಳಿಸಿ
ಸಿರುಗುಪ್ಪ : ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಕಚೇರಿಯ ಪಕ್ಕದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ದುವರ್ಾಸನೆಯಿಂದ ಸೊಳ್ಳೆ ಗಳ ಹಾವಳಿ ರೋಗ ರುಜನಿಗಳಿಗೆ ಆಹ್ವಾನಿಸುತ್ತಿದೆ ಬೇರೆ ಬೇರೆ ಊರುಗಳಿಂದ ಪ್ರಯಾಣಿಕರು ಸಾರ್ವಜನಿಕರಿಗೆ ಶೌಚಾಲಯ ಮುಖ್ಯವಾಗಿ ಮಹಿಳೆಯರಿಗೆ ಮತ್ತು ಪುರುಷರಿಗೆ ಇದ್ದು ಇಲ್ಲದಂತಾಗಿದೆ ಕಾರಣ ಶೌಚಾಲಯಕ್ಕೆ ಸದಾ ಬೀಗ ಹಾಕಿರುತ್ತಾರೆ ಇದರಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ ಸಾರಿಗೆ ಸಂಸ್ಥೆಯವರು ಅಥವಾ ಪಟ್ಟಣ ಪಂಚಾಯತಿಯವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಸಾರಿಗೆ ಸಂಸ್ಥೆಯವರು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರ ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ಸರಿಪಡಿಸಬೇಕು ಎಂದು ಪಟ್ಟಣ ವಾಸಿಗಳು ತಮ್ಮ ಗೋಳನ್ನು ಹೇಳಿಕೊಂಡರು ಜನ ಅಭಿಪ್ರಾಯ ಮುಖಂಡ ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ನಬಿ ಅವರು ಶೌಚಾಲಯವನ್ನು ಜನರ ಆರೋಗ್ಯದ ಪರವಾಗಿ ವ್ಯವಸ್ಥೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ .