ತಹಶೀಲ್ದಾರ ದಿಢೀರ್ ಸಿಟಿ ರೌಂಡ್ಸ : ಸ್ವಚ್ಚತೆ ಬಗ್ಗೆ ಕ್ರಮ ಕೈಕೊಳ್ಳಲು ಅಧಿಕಾರಿಗಳಿಗೆ ಸೂಚನೆ
ತಾಳಿಕೋಟೆ 07: ಪಟ್ಟಣದ ಪ್ರಮುಖ ವಾರ್ಡಗಳಿಗೆ ಬುಧವಾರ ಬೆಳ್ಳಂಬೆಳಿಗ್ಗೆ ತಹಶಿಲ್ದಾರ ಕೀರ್ತಿ ಚಾಲಕ ಧಿಡೀರ ಬೇಟಿ ನೀಡಿ ಸ್ವಚ್ಚತೆ ಬಗ್ಗೆ ಪರೀಶೀಲನೆಯನ್ನು ನಡೆಸಿದರು.
ಪಟ್ಟಣದ ಸ್ವಚ್ಚತೆ ಬಗ್ಗೆ ಪುರಸಭೆ ಅಧಿಕಾರಿಗಳು ಹಾಗು ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹಿನ್ನಲೆಯಲ್ಲಿ ಧಿಡೀರಾಗಿ ಹಲವು ಪ್ರದೇಶಗಳಿಗೆ ಬೇಟಿ ನೀಡಿ ಸ್ವಚ್ಚತೆ ಕೈಕೊಳ್ಳುವ ಕುರಿತು ಸೂಚನೆಯನ್ನು ನೀಡಿದರು. ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಪಂಚಾಯತ ಕಚೇರಿ ಮುಂದೆ, ಅಂಬೇಡ್ಕರ ವೃತ್ತದಲ್ಲಿ, ಶರಣ ಮುತ್ಯಾನ ದೇವಸ್ಥಾನ ಮುಂದೆ, ರಾಜವಾಡೆಯ ಅಗಸಿ ಮುಂದೆ, ಮಾಲಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಚತೆ ಮಾಹಿತಿಯನ್ನು ಪಡೆದುಕೊಂಡರು. ಅಂಬೇಡ್ಕರ ವೃತ್ತದಲ್ಲಿ ಸ್ವಚ್ಚತೆ ಕೈಕೊಳ್ಳದ ಚಹಾದ ಅಂಗಡಿ ಮಾಲೀಕನ ವಿರುದ್ಧ ಗರಂ ಆದ ತಹಶೀಲ್ದಾರ ಸ್ವಚ್ಚತೆ ಪುರಸಭೆ ಮಾಡಬೇಕು ಅಂತಾ ಅಲ್ಲಾ, ನೀವು ಸ್ವಚ್ಚತೆಯನ್ನು ಕಾಯ್ದುಕೊಳ್ಳಬೇಕು. ಬೇಕಾ ಬಿಟ್ಟಿಯಾಗಿ ಕಸ ಚೆಲ್ಲಿದರೆ ಹೇಗೆ, ಎರಡು ದಿನದಲ್ಲಿ ಅಂಗಡಿ ಮುಂದೆ ಸ್ವಚ್ಚ ಇರದಿದ್ದಲ್ಲಿ ಅಂಗಡಿಯನ್ನು ಬಂದ್ ಮಾಡಿಸುವದಾಗಿ ಎಚ್ಚರಿಕೆ ನೀಡಿದರು.
ಮಳೆಗಾಲ ಆರಂಭವಾಗಿರುವದರಿಂದ ಸ್ವಚ್ಚತೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಮಳೆ ಆಗಿ ಎಲ್ಲೆಂದರಲ್ಲಿ ನೀರು ನಿಂತರೆ ಸೋಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಸಾಧ್ಯತೆ ಇದೆ. ಇದರಿಂದ ಪ್ರತಿಯೊಬ್ಬರು ಸ್ವಚ್ಚತೆಗೆ ಆಧ್ಯತೆ ನೀಡಬೇಕು. ನಮ್ಮ ಮನೆಯಿಂದಲೇ ಸ್ವಚ್ಚತೆ ಬಗ್ಗೆ ಅರಿವು ಹೆಚ್ಚಾಗಬೇಕು. ಶಾಲಾ ಕಾಲೇಜುಗಳು, ಆಸ್ಪತ್ರೆ, ಸರಕಾರಿ ಕಚೇರಿಗಳಿಗೆ ಸ್ವಚ್ಚತೆ ಕೈಕೊಳ್ಳುವ ಕುರಿತು ತಿಳುವಳಿಕೆಯನ್ನು ನೀಡಲಾಗುವದು. ಸ್ವಚ್ಚತೆ ಬಗ್ಗೆ ಹೆಚ್ಚಿನ ಆಧ್ಯತೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಎಸೈ ಸುರೇಶ ಮಂಟೂರ, ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ, ಶ್ರೀಪಾದ ಜೋಶಿ, ಸಿದ್ದು ಕೊಳ್ಳಿ, ಕಂದಾಯ ನೀರಿಕ್ಷಕ ಜಗದೀಶ ಹಾರಿವಾಳ, ಗ್ರಾಮ ಆಡಳಿತಾಧಿಕಾರಿಗಳಾದ ಶಿವಾನಂದ ಅಂಗಡಿ, ಪ್ರಕಾಸ ಹೊಸಕೇರಿ, ಪ್ರಶಾಂತ ಶಾಂತಗೀರಿ, ಮುತ್ತಪ್ಪ ಸಂಗೋಗಿ, ಉಮಾಪತಿ ರಾಠೋಡ, ಮುನ್ನಾ ಅತ್ತಾರ, ಶಬ್ಬಿರ ಮುಲ್ಲಾ ಸೇರಿದಂತೆ ಇತರರು ಇದ್ದರು