ತಾಳಿಕೋಟಿ

ಸಶಸ್ತ್ರ ಮೀಸಲು ಪಡೆ ಪಥಸಂಚಲನಕ್ಕೆ ತಹಶೀಲ್ದಾರ ಚಾಲನೆ

ಸಶಸ್ತ್ರ ಮೀಸಲು ಪಡೆ ಪಥಸಂಚಲನಕ್ಕೆ ತಹಶೀಲ್ದಾರ ಚಾಲನೆ

ತಾಳಿಕೋಟಿ: ಮುಕ್ತ ನ್ಯಾಯ ಸಮ್ಮತ ಚುನಾವಣೆ ಹಾಗೂ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇಂದ್ರ ಸಶಸ್ತ್ರ ಮೀಸಲು ಪಡೆಯ ಯೋಧರು ಹಾಗೂ ಪೊಲೀಸರ ಆಕರ್ಷಕ ಪಥಸಂಚಲನ ಪಟ್ಟಣದಲ್ಲಿ ಜರುಗಿತು.

ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಪಥ ಸಂಚಲನಕ್ಕೆ ತಹಶೀಲ್ದಾರ ಕೀರ್ತಿ  ಚಾಲಕ್ ಅವರು ಹಸಿರು ನಿಶಾನೆ ತೊರಿಸುವ ಮೂಲಕ ಚಾಲನೆ ನೀಡಿದರು.

ಪಟ್ಟಣದ ಪೊಲೀಸ  ಠಾಣೆಯಿಂದ ಆರಂಭಗೊಂಡ ಪಥಸಂಚಲನ ಅಂಬೇಡ್ಕರ್ ವೃತ್ತ, ಕತ್ರಿ ಬಜಾರ, ಮಹಲ್ಗಲ್ಲಿ, ವಡ್ಡರ ಓಣಿ, ಪಂಚಶಹೀದ ದಗರ್ಾ, ಶಿವಾಜಿ ವೃತ್ತ, ಬಸ್ ನಿಲ್ದಾಣ ಮಾರ್ಘವಾಗಿ ಸಂಚರಿಸಿ ಮತದಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು.

ಈ ವೇಳೆ ತಹಶೀಲ್ದಾರ ಕೀರ್ತಿ  ಚಾಲಕ್ ಅವರು ಮಾತನಾಡಿ ಮತದಾರರು ಯಾವುದೇ ಆತಂಕವಿಲ್ಲದೆ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಬಾರದು. ಈ ನಿಟ್ಟಿನಲ್ಲಿ ತಾಲೂಕಾಡಳಿತ ಮುಕ್ತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಂಡಿದ್ದು ಯಾವುದೇ ಅರ್ಹ ಮತದಾರರು ಮತದಾನದಿಂದ ವಂಚಿತರಾಗದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಡಿವೈಎಸ್ಪಿ ಕರುಣಾಕರ ಶೆಟ್ಟಿ, ಸಿಪಿಐ ಮಲ್ಲಿಕಾಜರ್ುನ ತುಳಸಿಗೇರಿ, ಪಿಎಸ್ಐಗಳಾದ ಆರೀಫ್ ಮುಶಾಪುರಿ, ಸುರೇಶ ಮಂಟೂರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು 

ಸುದ್ದಿ ಓದಿ