ತಹಶೀಲ್ದಾರ ಶಂಕರ ಗೌಡಿ ಅಧಿಕಾರ ಸ್ವೀಕಾರ
ಮುಂಡಗೋಡ:ಇಲ್ಲಿನ ನೂತನ ತಹಶೀಲ್ದಾರರಾಗಿ ಶಂಕರ ಗೌಡಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಈ ಮೊದಲು ಬಾಗಲಕೋಟೆಯ ಬೀಳಗಿ ತಾಲೂಕಿನ ತಹಶೀಲ್ದಾರರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು. ತಹಶೀಲ್ದಾರ ಶ್ರೀಧರ ಮುಂದಲಮನಿ ಅವರಿಂದ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಂತರ ಮಿನಿ ವಿಧಾನಸೌಧದ ಆವರಣದಲ್ಲಿ ಸಸಿ ನೆಡಲಾಯಿತು. ಗ್ರೇಡ್-2 ತಹಶೀಲ್ದಾರ ಜಿ.ಬಿ.ಭಟ್ಟ, ಗ್ರಾಮ ಲೆಕ್ಕಾಧಿಕಾರಿ ಗೋಣಿಬಸಪ್ಪ ಕೆ. ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.