ಹಗರಿಬೊಮ್ಮನಹಳ್ಳಿ

ಫುಡ್ ಕಿಟ್ ವಿತರಣೆಗೆ ತಹಶೀಲ್ದಾರ ಶರಣಮ್ಮ ಚಾಲನೆ

ಫುಡ್ ಕಿಟ್ ವಿತರಣೆಗೆ ತಹಶೀಲ್ದಾರ ಶರಣಮ್ಮ ಚಾಲನೆ

ಹಗರಿಬೊಮ್ಮನಹಳ್ಳಿ 03: ಕರೋನಾ ಹೊಡೆತಕ್ಕೆ ತತ್ತರಿಸಿದ ಬಡ ಕುಟುಂಬಗಳಿಗೆ ಪಟ್ಟಣದ 17ನೆ ವಾಡರ್್ನ ಪುರಸಭೆ ಸದಸ್ಯ ಅಲ್ಲಾಭಕ್ಷಿ ಅವರು ಗುರುವಾರ ಫುಡ್ ಕಿಟ್ ವಿತರಣೆ ಮಾಡಿದರು. ತಹಶಿಲ್ದಾರ್ ಶರಣಮ್ಮ ಚಾಲನೆ ನೀಡಿದರು.

ತಹಶಿಲ್ದಾರ್ ಶರಣಮ್ಮ ಮಾತನಾಡಿ ಕರೋನಾ ಅಲೆಯ ಆರ್ಭಟಕ್ಕೆ ಸಾಮಾನ್ಯ ಜನರ ಜೀವನ ದುಸ್ತರಗೊಂಡಿದೆ, ಅವರ ಜೀವನದ ಬವಣೆಗೆ ಅಲ್ಪ ಮಟ್ಟದಲ್ಲಿಯೇ ಆಗಲಿ ಆರ್ಥ ಕಲ್ಪಿಸುವಲ್ಲಿ ಮುಂದಾಗುತ್ತಿರುವ ಅಲ್ಲಾಬಕ್ಷಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಸದೃಢ ಭಾರತ ನಿಮರ್ಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶದನ್ವಯ ಸಾರ್ವಜನಿಕರು ಸಹಕಾರ ನೀಡಬೆಕು, ಮುಂದಿನ ಕರೋನಾ 3ನೇ ಅಲೆಯು ಮಕ್ಕಳ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚಾಗಿರುತ್ತದೆ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಎಂದು ನೆರೆದ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಪುರಸಭೆ ಸದಸ್ಯ ಅಲ್ಲಾಬಕ್ಷಿ ಮಾತನಾಡಿ ಕರೋನಾ ಎರಡನೇ ಅಲೆಯಿಂದ ದಿನದ ಬಾಳ ಬಂಡಿ ತಳ್ಳುವ ಕಡುವಡವರ ಸ್ಥಿತಿ ಚಿಂತಾಜನಕವಾಗಿದೆ, ಮುಂಬರುವ 3ನೇ ಅಲೆಯಿಂದ ಬಚಾವಾಗಲು ಮಕ್ಕಳ ಮೆಲೆ ನಿಗಾ ವಿರಲಿ, ವಾಡರ್್ ವ್ಯಾಪ್ತಿ ಸೇರಿದಂತೆ ತಹಶಿಲ್ದಾರ್ ಶರಣಮ್ಮ ಅವರು ನೀಡಿದ ಮಾಹಿತಿ ಪ್ರಕಾರ ಚಮ್ಮಾರರಿಗೂ ಕಿಟ್ಗಳನ್ನು ನೀಡುವ ವ್ಯೆವಸ್ಥೆ ಮಾಡಲಾಗಿದೆ ಎಂದರು.ಮುಖಂಡರಾದ ನಿವೃತ್ತ ಶಿಕ್ಷಕ ಬಾಷಾ ಸಹೇಬ್, ಬುಡೇನ್ ಸಾಹೇಬ್, ಶಬ್ಬೀರ್, ರಫಿ, ಗುಲ್ಜಾರ್ ಅಹಮ್ಮದ್ ಸೇರಿದಂತೆ ವಾಡರ್್ನ ಮುಖಂಡರು ಭಾಗವಹಿಸಿದ್ದರು.

 

ಸುದ್ದಿ ಓದಿ