ಆಕ್ಸಿಜನ್ ಮತ್ತು ಐಸಿಯು, ವೆಂಟಿಲೇಟರ್ಸ್ ಹಾಸಿಗೆ ಒದಗಿಸಲು ತಂಡ ರಚನೆ
ಬಳ್ಳಾರಿ 22: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದು,ಗಂಭೀರ ಪ್ರಕರಣಗಳನ್ನು ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಇಂತಹ ಉಸಿರಾಟದ ತೊಂದರೆ ಇರುವ ಗಂಭೀರ ಪ್ರಕರಣಗಳಿಗೆ ಆಮ್ಲಜನಕ ನೀಡುವುದು ಅತಿ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇಟರ್ಸ್ ಇರುವ ಹಾಸಿಗೆಗಳನ್ನು ಒದಗಿಸಲು ತಂಡವೊಂದನ್ನು ರಚಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವಿವಿಧ ಕೋವಿಡ್ 19 ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇಟರ್ಸ್ವುಳ್ಳ ಹಾಸಿಗೆಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಲು ಈ ವೈದ್ಯರ ತಂಡವೊಂದನ್ನು ರಚಿಸಲಾಗಿದೆ.
ಕೋವಿಡ್ 19 ಗಂಭಿರ ಪ್ರಕರಣಗಳಿಗೆ ನಿಗದಿತ ಸಮಯದಲ್ಲಿ ವಿವಿಧ ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಹೆಲ್ತ್ ಕೇರ್ ಸೆಂಟರ್ಗಳಲ್ಲಿ ವ್ಯವಸ್ಥೆ ಮಾಡಲಾಗಿರುವ ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇಟರ್ಸ್ವುಳ್ಳ ಹಾಸಿಗೆಯನ್ನು ಒದಗಿಸಲು ಸಂಬಂಧಪಟ್ಟ ಆಸ್ಪತ್ರೆಯ ನೋಡೆಲ್ ಅಧಿಕಾರಿಯವರನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ. ಗಂಭೀರ ಪ್ರಕರಣಗಳಿಗೆ ಸಂಬಂಧಟ್ಟಂತೆ ತಂಡದೊಂದಿಗೆ ಚರ್ಚಿಸಿ ಅನುಮತಿ ಪಡೆದು ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇಟರ್ವುಳ್ಳ ಹಾಸಿಗೆಗಳನ್ನು ಒದಗಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ(8277220274) ಅವರು ತಂಡದ ಮುಖ್ಯಸ್ಥರಾಗಿದ್ದಾರೆ. ಬಳ್ಳಾರಿ ಟ್ರಾಮಾಕೇರ್ ಸೆಂಟರ್ನ ಡಾ.ಶ್ರೀನಿವಾಸುಲು(9845224880), ಜಿಲ್ಲಾ ಆಸ್ಪತ್ರೆಯ ಡಾ.ಅನಿಲ್ ರೆಡ್ಡಿ(9916349360), ಹಳೆಯ ಮೆಡಿಕಲ್ ಕಾಲೇಜಿನ ಡಾ.ಕೊಟ್ರೆಶ್(9448968707) ಅವರು ಈ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಉಸಿರಾಟದ ತೊಂದರೆ ಇರುವವರಿಗೆ ಆಮ್ಲಜನಕ ನೀಡುವುದು ಅತೀ ಅವಶ್ಯಕವಾಗಿದೆ.ಸೂಪರ್ ಸ್ಪೆಷಾಲಿಟಿ ಟ್ರಾಮಾಕೇರ್ ಸೆಂಟರ್, ಜಿಲ್ಲಾಆಸ್ಪತ್ರೆ, ಹಳೆಯ ಡೆಂಟಲ್ ಕಾಲೇಜು ಮತ್ತು ಹೊಸಡೆಂಟಲ್ ಕಾಲೇಜು ಹಾಗೂ ವಿಮ್ಸ್ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಗಂಭೀರ ಪ್ರಕರಣಗಳಿಗೆ ಅವಶ್ಯವಿರುವ ಆಕ್ಸಿಜನ್ ಮತ್ತು ವೆಂಟಿಲೇಟರ್ಗಳ ವ್ಯವಸ್ಥೆ ಮಾಡಿದ್ದು ಅದನ್ನು ಮುಂದುವರೆಸಲಾಗುತ್ತದೆ.
ಪ್ರಸ್ತುತ ದಾಖಲಾಗಿರುವ ಪ್ರಕರಣಗಳು ಅಂತ ಗಂಭೀರವಾಗದೇ ಇದ್ದರೂ ಕೆಲವೊಂದು ವೈದ್ಯರ ವೈಯಕ್ತಿಕ ನಿರ್ಧಾರಗಳಿಂದ, ಇತರೆ ವ್ಯಕ್ತಿಗಳ ಪ್ರಭಾವದಿಂದ ದಾಖಲಾಗುತ್ತಿರುವುದು ಕಂಡು ಬಂದಿದೆ. ಇದರಿಂದ ನಿಜವಾಗಿ ಗಂಭೀರ ಪ್ರಕರಣಗಳಿಗೆ ಆಕ್ಸಿಜನ್ ಮತ್ತು ವೆಂಟಿಲೇಟರ್ಸ್ಗಳ ಹಾಸಿಗೆಗಳು ಸಿಗುವುದು ಕಷ್ಟವಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಗಂಭೀರ ಪ್ರಕರಣಗಳಿಗೆ ಆಕ್ಸಿಜನ್ ಪೂರೈಸುವ ಸಲುವಾಗಿ ಈ ತಂಡÀ ರಚಿಸಲಾಗಿದೆ. ತಂಡದ ಅನುಮತಿ ಪಡೆದ ನಂತರವಷ್ಟೇ ಆಕ್ಸಿಜನ್ ಮತ್ತು ಐಸಿಯು/ವೆಂಟಿಲೇಟರ್ ಹಾಸಿಗೆಗಳನ್ನು ಒದಗಿಸಬೇಕು ಎಂದು ಅವರು ಸೂಚಿಸಿದ್ದಾರೆ.