ಧಾರವಾಡ - ಹುಬ್ಬಳ್ಳಿ

ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಕಲಿಸಿಸುವುದು ಅನಿವಾರ್ಯವಾಗಿದೆ - ಸಾಹಿತಿ ಮಾರ್ತಾಂಡಪ್ಪ ಕತ್ತಿ

ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಕಲಿಸಿಸುವುದು ಅನಿವಾರ್ಯವಾಗಿದೆ - ಸಾಹಿತಿ  ಮಾರ್ತಾಂಡಪ್ಪ ಕತ್ತಿ
Teaching life values ​​along with education is essential - Literary writer Martandappa Katti


ಧಾರವಾಡ 22: ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸುವುದು ಪ್ರತಿ ಶಿಕ್ಷಣ ಸಂಸ್ಥೆಗಳ ಪ್ರಮುಖ ಗುರಿಯಾಗಿರಬೇಕು. ಅಂತಹ ಸಂಸ್ಥೆಗಳಲ್ಲಿ ಶ್ರೀ ಚೆನ್ನಕೇಶವ ಶಿಕ್ಷಣ ಸಂಸ್ಥೆಯು ಒಂದಾಗಿದೆ. ಈ ಸಂಸ್ಥೆಗೆ ಪಾಲಕರ ಸಹಕಾರವೂ ಸಹ ಅಷ್ಟೇ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಮಹಾತ್ಮರ ಮತ್ತು ಸಾಧಕರ ಜೀವನದ ಶಿಸ್ತು, ಪ್ರಾಮಾಣಿಕಪ್ರಯತ್ನ, ಶ್ರದ್ದೆ, ಆತ್ಮವಿಶ್ವಾಸ, ಶಿಕ್ಷಣದ ಮೌಲ್ಯಗಳನ್ನು ಅಳವಡಿಸಿಕೊಂಡು ಯಸ್ಸಶಿನ ದಾರಿಯತ್ತ ಪ್ರಯತ್ನಿಸಬೇಕು ಎಂದು ಸಾಹಿತಿ ಮಾರ್ತಾಂಡಪ್ಪ ಕತ್ತಿ ಹೇಳಿದರು. 

ಅವರು ನಗರದ ಮದಿಹಾಳದಲ್ಲಿ ಶ್ರೀ ಚನ್ನಕೇಶವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವತಿಯಿಂದ ಜೋಶಿ ಮಂಗಲ ಕಾರ್ಯಾಲಯದಲ್ಲಿ “ಚಿಗುರು ಹಬ್ಬ” ವಾರ್ಷಿಕ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ “ನನ್ನ ಮಗು ಮುಂದೆ ಹೋಗಬೇಕು” ಎಂಬ ಆಸೆ ಎಲ್ಲರಲ್ಲೂ ಇದೆ. ಆದರೆ ಮುಖ್ಯವಾಗಿ ಮುಂದೆ ಹೋಗುವ ಮಗುವಿಗಿಂತ, ಒಳ್ಳೆಯ ಮನುಷ್ಯನಾಗುವ ಮಗು ಸಮಾಜಕ್ಕೆ ಹೆಚ್ಚು ಬೇಕು. ಇದಕ್ಕೆ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಸಹಕಾರತತ್ವದಡಿಯಲ್ಲಿ ತ್ರೀಕೋನವಾಗಿ ಕಾರ್ಯ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು. 

ಚಿಗುರು ಹಬ್ಬದ ಸಮಾರಂಭಕ್ಕೆ ಸಿವಿಲ್ ಇಂಜಿನಿಯರ್ ಶ್ರೀ ಅಶೋಕ್ ಕೌಜಗೇರಿ ಅವರು ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಕೇಶವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎಂ. ವೈ. ರಾಯನಗೌಡರ್ ಅವರು ವಹಿಸಿ   ಕಸ್ತೂರಿ ರಾಯನಗೌಡರ್ ಮಾತನಾಡಿ ಸಂಸ್ಥೆಯ ಶಿಕ್ಷಕ ವರ್ಗದವರ ಸಹಕಾರದಿಂದ ಉತ್ತಮ ಶಾಲೆಯಾಗಿ ರೂಪಗೊಂಡಿದೆ ಎಂದು ಹೇಳಿದರು.  

ಶಾಲೆಯ ಪ್ರಾಂಶುಪಾಲರಾದ ಶ್ರೀ ಅಲ್ಲಮಪ್ರಭು ಮಟ್ಟಿ ನಿರೂಪಿಸಿದರು. ಆಡಳಿತಾಧಿಕಾರಿಗಳಾದ ಶ್ರೀಮತಿ ಸವಿತಾ ಕರಾಣಿ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳ "ಚಿಗುರು ಹಬ್ಬ"ದಲ್ಲಿ ನೃತ್ಯ, ಜಾನಪದ ವೈಭವದ ಸಂಭ್ರಮ, ಕಿರುನಾಟಕ ಪ್ರದರ್ಶನ, ಭರತನಾಟ್ಯ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೋರೆಗೊಳಿಸಿದವು. 


ಸುದ್ದಿ ಓದಿ