ಬಳ್ಳಾರಿ

ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಕಪ್ಪು ಪಟ್ಟಿ ಧರಿಸಿ ಧರಣಿ

ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಕಪ್ಪು ಪಟ್ಟಿ ಧರಿಸಿ ಧರಣಿ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 22: ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಘಟಕವು ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಎದುರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. 

ತಾಲೂಕಾಧ್ಯಕ್ಷ ಹೆಚ್‌.ಲೋಕಪ್ಪ ಮಾತನಾಡಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ವತಿಯಿಂದ 29ರಂದು ಬೆಳಗಾವಿಯಲ್ಲಿ ಹಾಗೂ ದಿ. 16ರಂದು ತುಮಕೂರಿನಲ್ಲಿ ನಡೆದ ಮಹತ್ವದ ಹಾಗೂ ತುರ್ತು ಕೇಂದ್ರ ಕಾರ್ಯಾಕಾರಿ ಸಮಿತಿಯ ಸಭೆಯ ತೀರ್ಮಾನದಂತೆ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹೋರಾಟದ ಕರೆಯ ಮೇರೆಗೆ ಅಕ್ಟೋಬರ್ 21 ರಿಂದ 29 ರವರೆಗೆ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಶಾಲಾ ಕರ್ತವ್ಯದ ಅವಧಿಯಲ್ಲಿ ಕಪ್ಪು ಬಟ್ಟೆ ಪಟ್ಟಿಯನ್ನು ಧರಿಸಿ ಕಾರ್ಯನಿರ್ವಹಿಸಲಾಗುವುದು. 

ಶಿಕ್ಷಕರ ವಿವಿಧ ಬೇಡಿಕೆಗಳಾದ ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆಒಂದು ಬಾರಿ ವರ್ಗಾವಣೆ, ಮುಖ್ಯ ಗುರುಗಳಿಗೆ 15, 20, 25 ವರ್ಷಗ ವೇತನ ಬಡ್ತಿ, ನೂತನ ಪಿಂಚಣಿ ಯೋಜನೆ ರದ್ದುಗೊಳಿಸುವುದು, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಆಗ್ರಹಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸನ್ಮಾನ್ಯ ಬಿ.ಸಿ.ನಾಗೇಶ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು, ಮಾನ್ಯ ಆಯುಕ್ತರು, ಬೆಂಗಳೂರು, ಮತ್ತು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಇವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ  ಮನವಿ ಸಲ್ಲಿಸಲಾಯಿತು.  


ತಾಲೂಕು ಘಟಕದ ಗೌರವ ಅಧ್ಯಕ್ಷರಾದ ವಿ.ನಾಗೇಂದ್ರ​‍್ಪ, ಉಪಾಧ್ಯಕ್ಷರಾದ ಜೆ.ಹನುಮರೆಡ್ಡಿ, ದಾದೀಬಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೊಟ್ರ​‍್ಪ, ಖಜಾಂಚಿ ಟಿ.ಸೋಮಶೇಖರ್, ಸಹ ಕಾರ್ಯದರ್ಶಿ ಇಟಿಗಿ ಮಂಜುನಾಥ, ಯು.ಎಂ.ಶಾಂತಕುಮಾರಿ, ಸಂಘಟನಾ ಕಾರ್ಯದರ್ಶಿ ಇಟಿಗಿ ಪ್ರಭಾಕರ, ಕೆ.ಎಂ.ನಿರ್ಮಲಾ, ಜಿಲ್ಲಾ ಖಜಾಂಚಿ ಎಲ್‌.ಎಸ್‌.ಹೀರಾ​‍್ಯನಾಯ್ಕ, ಚುನಾಯಿತ ಪ್ರತಿನಿಧಿ ಎಲ್‌.ಮಹಾಂತೇಶ್ ನಾಯ್ಕ, ಬಡ್ತಿ ಮುಖ್ಯ ಗುರುಗಳಾದ ಹೆಚ್‌.ದೇವಪ್ಪ, ತುಕಾರಾಂ ನಾಯ್ಕ, ಸಹ ಶಿಕ್ಷಕ ಜೆ.ಎಂ.ರಮೇಶ, ಮೋರಾ​‍್ನಳ್, ಬಿ.ಆರ್‌.ಪಿ. ಗೋಣಿಬಸಪ್ಪ, ಹನುಮಕ್ಕ, ಫೈಜುಲ್ಲಾ, ಉಡುಚಪ್ಪ, ಮಲ್ಲಪ್ಪ, ಇನ್ನು ಮುಂತಾದವರು ಇದ್ದರು. 


ಸುದ್ದಿ ಓದಿ