ಬಳ್ಳಾರಿ

ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿ: ಗಣೇಶ್

ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿ: ಗಣೇಶ್

ಲೋಕದರ್ಶನ ವರದಿ 

ಕಂಪ್ಲಿ 26: ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಶಾಸಕ ಜೆ.ಎನ್‌.ಗಣೇಶ್ ಹೇಳಿದರು. 

ತಾಲೂಕಿನ ದೇವಲಾಪುರ ಮತ್ತು ಹೊಸ ದೇವಲಾಪುರ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, 2020-21ನೇಸಾಲಿನ ಲೋಕೋಪಯೋಗಿ ಇಲಾಖೆಯ ನಬಾರ್ಡ್‌ ಯೋಜನಡಿಯಲ್ಲಿ ತಲಾ 33ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ಮೂರು ಹೆಚ್ಚುವರಿ ಕೊಠಡಿಗಳನ್ನು ಸೋಮವಾರ ಶಾಸಕ ಜೆ.ಎನ್‌.ಗಣೇಶ್ ಉದ್ಘಾಟಿಸಿದರು. ಪಾಲಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಸರ್ಕಾರಿ ಉದ್ಯೋಗ ಪಡೆಯಬಹುದು ಸರ್ಕಾರದ ಸೌಲಭ್ಯ ಪಡೆಯಬಹುದು ಗ್ರಾಪಂ ಉಪಾಧ್ಯಕ್ಷೆ ಪೂಜಾರಿ ಈರಮ್ಮ, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಮಾಜಿ ಅಧ್ಯಕ್ಷೆ ಕೆ.ಉಮಾದೇವಿ, ಎಸ್‌ಡಿಎಂಸಿ ಅಧ್ಯಕ್ಷರಾದ ಷಣ್ಮುಖಪ್ಪ, ದುಖಾನಿ ರುದ್ರಯ್ಯ, ಗ್ರಾಪಂ ಮಾಜಿ ಅಧ್ಯಕ್ಷರಾದ ಗೌಡ್ರು ಉಮೇಶಗೌಡ್ರು, ಗೌಡ್ರು ಬುಡಗನಗೌಡ್ರು, ಗೌಡ್ರು ಸುರೇಶಗೌಡ್ರು, ಪ್ರಮುಖರಾದ ಮರೇಗೌಡ್ರು, ಗೌಡ್ರು ಅಂಜಿನಪ್ಪ, ಗುರುಲಿಂಗಯ್ಯ, ಗೌಡ್ರು ಸಿದ್ದಯ್ಯ, ಸಿಆರ್‌ಪಿ ಸುರೇಶ್ ಪೂಜಾರ್, ಮುಖ್ಯಗುರುಗಳಾದ ಎಚ್‌.ಪಿ.ಸೋಮಶೇಖರ್, ಜಿಲಾನಿ ಸುಂಕದ್, ಗೋದಾವರಿ, ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಪಿಡಿಒ ಶಶಿಕಾಂತ್ ಸೇರಿ ಇತರರಿದ್ದರು. 


ಸುದ್ದಿ ಓದಿ