ಶಿಗ್ಗಾವ್

ಅನ್ನದಾನ ಹಸಿವನ್ನು ನಿಗಿಸಿದರೆ ಅಕ್ಷರ ಜ್ಞಾನ ಅಜ್ಞಾನವನ್ನು ನಿವಾರಿಸುತ್ತದೆ: ಹಾವೇರಿ

ಅನ್ನದಾನ ಹಸಿವನ್ನು ನಿಗಿಸಿದರೆ ಅಕ್ಷರ ಜ್ಞಾನ ಅಜ್ಞಾನವನ್ನು ನಿವಾರಿಸುತ್ತದೆ: ಹಾವೇರಿ

ಶಿಗ್ಗಾವಿ : ವ್ಯಕ್ತಿಯಲ್ಲಿ ಅಂಧಕಾರ ತೊಲಗಿಸಿ ಸುಜ್ಞಾನದ ಬೆಳಕು ಚೆಲ್ಲುವಲ್ಲಿ ಗುರುವಿನ ಸ್ಥಾನಮಾನ ನಿಜಕ್ಕೂ ಊಹೆಗೂ ನಿಲುಕದು, ಅನ್ನದಾನ ಹಸಿವನ್ನು ನಿಗಿಸಿದರೆ ಅಕ್ಷರ ಜ್ಞಾನವು ಅಜ್ಞಾನವನ್ನು ನಿವಾರಿಸುತ್ತದೆ ಎಂದು ಮುಖ್ಯೋಪಾಧ್ಯಾಯ ಶಿವಪ್ಪ ಹಾವೇರಿ ಹೇಳಿದರು.

ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರು ತನ್ನ ವೃತ್ತಿಯ ಪಾವಿತ್ರ್ಯತೆಯನ್ನು ಅರಿತಿರಬೇಕು, ಗೌರವದಿಂದ ಕಾಣಬೇಕು. ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಸೃಜನಾತ್ಮಕ ಚಿಂತನೆಯೊಂದಿಗೆ ಆಸಕ್ತಿದಾಯಕ ಕಲಿಕೆಯನ್ನು ಕಲಿಸಲು ಹಲವಾರು ಆಧುನಿಕ ತಂತ್ರಜ್ಞಾನ ಮೂಲಕ ಕಲಿಸಲು ಜ್ಞಾನವನ್ನು ಹೊಂದಿರಬೇಕು, ಧನಾತ್ಮಕ ಭಾವನೆ ಹೊಂದಿರಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಕುಮಾರಿ ವಿನೂತಾ ಮಾತನಾಡಿ ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಅಲ್ಲದೇ ಜವಾಬ್ದಾರಿ ಬಹಳಷ್ಟು ಇದೆ ಎಂದರು.

ಕುಮಾರಿ ವಿಧ್ಯಾಗಾಜಿಗೌಡ್ರ ಮಾತನಾಡಿ ಮಕ್ಕಳ ಭವ್ಯ ಭವಿಷ್ಯವನ್ನು ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಕುಮಾರ ಕಾರ್ತಿಕ ಮಾತನಾಡಿ ಕಣ್ಣಿಗೆ ಕಾಣುವ ದೇವರಲ್ಲಿ ತಂದೆ ತಾಯಿ ಬಿಟ್ಟರೇ ನಂತರ ಶಿಕ್ಷಕರು ಆದ್ದರಿಂದ ಭಾರತದೇಶದಲ್ಲಿ ಗುರುಗಳಿಗೆ ಇರುವ ಗೌರವ ಬೇರೆಯಾರಿಗೂ ಇಲ್ಲ ಎಂದರು.

ಕುಮಾರ ಪವನ ಮಾತನಾಡಿ ಶಿಕ್ಷಕರ ದಿನಾಚರಣೆ ಶಾರಧೆಯ ಆರಾಧನೆ ದಿನ ಅಕ್ಷರ ಕಲಿಸಿದವರನ್ನು ಗೌರವಿಸಿ ಸನ್ಮಾನಿಸುವ ಸುದೀನ ಎಂದರು.

ಕುಮಾರಿಅಂಜಲಿ ಮಾತನಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಕಾಯಕ ಯೋಗಿಯೇ ನಿಜವಾದ ಶಿಕ್ಷಕ ಎಂದರು.

ಅಂಜು ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ನಾವು ಸ್ವಾವಲಂಬಿಯಾಗಿ ಬದುಕಲು ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

ಕರಿಸಿದ್ದೇಶ್ವರ ಮಠದ ಸ್ವಾಮೀಜಿಯವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಸುಮಂಗಲಾ, ಅಂಬಿಕಾ, ತ್ರಿಷಾ, ವಾಣಿಶ್ರೀ ಮಾತನಾಡಿದರು. ಶಾಲೆಯಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕರಾದ ಮಾರುತಿ ಲಮಾಣಿ, ಮುದಾಸರಜಮಾಖಾನ, ಶೇಖರ ಕುರ್ಸಾಪೂರ, ಮಂಜುಳಾ ಪಾಟೀಲ, ಗಾಯತ್ರಿ ದೈವಜ್ಞ,  ದೀಪಾ ಯಲಿಗಾರ, ವಿಧ್ಯಾ ಹೆಸರೂರ, ಆಸ್ಮಾಅಕ್ತಾರ, ರೇಣುಕಾ ಪಲ್ಯೇದ ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾಗತ ಸಂಜನಾ ಕುಂಬಾರ, ನಿರೂಪಣೆ ರೇಣುಕಾ ಗಾಣಿಗೇರ, ಸಹನಾ ಪಾಟೀಲ ವಂದಿಸಿದರು.

ಸುದ್ದಿ ಓದಿ