ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರ ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ26: ವಿದ್ಯಾರ್ಥಿ, ಶಿಕ್ಷಕವೃಂದದರನ್ನು ಕುರಿತು ಮಾತನಾಡುತ್ತಾ "ವಿದ್ಯಾರ್ಥಿಗಳೆಂದರೆ ಕೇವಲ ಪಠ್ಯಪುಸ್ತಕಗಳನ್ನೋದಿ ಪದವಿಗಳಿಸುವುದಲ್ಲ, ಶಿಕ್ಷಣ ವೆಂದರೆ ನಾಗರಿಕತೆ, ಮಾನವೀಯತೆ, ಕಲಿತಿರುವ ಮನುಷ್ಯರಾಬೇಕು, ಅವಿದ್ಯವಂತರಾದರೆ ಅಹಂಕಾರಿಗಳಾಗಿ, ಸಮಾಜ ಅಹಿತಕರವಾಗುವ ಸಂಭವವಾಗುವುದು, ಹಿಂದಿನ ದಿನಗಳಲ್ಲಿ ಅರವತ್ತು ನಾಲಕ್ಕು ವಿದ್ಯೆಗಳಿಂದ ಪರಿಪೂರ್ಣ ಜ್ಞಾನವಾದವರಿದ್ದರು, ಅಂತವರನ್ನು ಜಗತ್ತಗೆ ನೀಡಿದವರು ನಮ್ಮ ಮೇಷ್ಟ್ರು ನಮ್ಮಗುರುಗಳು, ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಇಂಜೀನೀರಿಂಗ್ ಸೀಮಿತ ವಾಗದೆ, ಇನ್ನಿತರ ವಿಷಯಗಳ ಬಗ್ಗೆ ಅರಿವುಮೂಡಿಸಲು ಒತ್ತು ನಿಡುತ್ತಲಿದೆ. ಆತ್ಮ ವಿಶ್ವಾಶವನ್ನು ಹೊಂದಿದರೆ ಮಾತ್ರ ಪೂರ್ಣ ವಿಧ್ಯಾಭ್ಯಾಸ ಮುಗಿದಂತಾಗುತ್ತದೆ.ನಿಮ್ಮ ಜೀವನವು ಸಾರ್ಥಕತೆಯನ್ನು ಹೊಂದಬೇಕಾದರೆ, ನೀವು ಚರಿತ್ರೆಯನ್ನು ಅರಿತವರಾಗಬೇಕು ಎಂದು ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡಮಿ, ಪ್ರಾಧ್ಯಾಪಕರು, ಖ್ಯಾತ ವಾಗ್ಮಿ ಡಾ.ಬಿ.ವಿ.ವಸಂತಕುಮಾರ್ ಹೇಳೀದರು.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆ.25ರಂದು ವಿವೇಕತೋರಣ, ಬಳ್ಳಾರಿ, ಆರ್ವೈಎಂಇಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ, ಬಳ್ಳಾರಿ, ಹಾಗೂ ಮಹಾವಿದ್ಯಾಲಯದ ವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಲ್ಲಿ" ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರು" ಉಪನ್ಯಾಸ ಕಾರ್ಯಕ್ರಮವು ಜರುಗಿತು.
ಉದಾಹರಣಗೆ ಹಿಂದಿನ ಎರಡನೇಯ ಶತಮಾನದಲ್ಲಿನ ತಕ್ಷಶಿಲ ವಿಶ್ವವಿದ್ಯಾಲಯದಲ್ಲಿ ದೇಶವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂಟರೂ್ವ ಮಾಡುವವರು, ಅಲ್ಲ್ಲಿನ ಸಾಮಾನ್ಯ ಕೆಲಸ ಮಾಡುವವರು ಹಾಗು ಅವರ ನಡುವಡಿಕೆ ಮೇಲೆ ಆಧಾರಿತ ಪ್ರಮಾಣಪತ್ರ ನೀಡುವರು, ಅಂತಹ ಹೆಮ್ಮೆಯ ಶಿಕ್ಷಣಶೈಲಿ ನಮ್ಮಭಾರತದೇಶದು, ರಸವಿದ್ಯೆ ತೋರಿಸಿದ ನಾಗರಾಜರು, ಪಂತಂಜಲಿ, ಹಾಗು ತರಂಗ ವಿಜ್ಙಾನ ನೀಡಿರುವಅತ್ಯದ್ಭುತ ವಿಜ್ಙಾನದತವರು ನಮ್ಮ ಭಾರತ ದೇಶ, ನಿಮ್ಮ ಜೀವನವು ಸಾರ್ಥಕತೆಯನ್ನು ಹೊಂದಬೇಕಾದರೆ, ವಿದ್ಯೆಯನ್ನು ಕಷ್ಟದಿಂದ ಕಲಿಯುವುದಲ್ಲ, ಇಷ್ಟದಿಂದ ಕಲೆಯಬೇಕೆಂದರು. ಸಮಾಜದ ಹಿತ ಬಯಸುವುವ ಮನುಜಕುಲವ ಮಾಡುವುದು, ಅದು ಸಂಸತ್ತಿನಲ್ಲಿ, ಇಂಡಸ್ಟ್ರೀನಲ್ಲಿ, ಮಾರುಕಟ್ಟೆಯಲ್ಲಿ, ತಯಾರಾಗುವುದಿಲ್ಲ, ತರಗತಿಯ ನಾಲ್ಕು ಗೋಡೆಗಲ್ಲಿನಿಂದತಯಾರಾಗಿ ಬರುತ್ತದೆ, ಇಂದು ಅಧ್ಯಾಪಕ ವೃಂದದವರಿಂದ ಉತ್ತಮ ಕೊಡುಗೆ ಸಮಾಜಕ್ಕಿದೆ ಹಾಗೂ ಅವರು ಕೇವಲ ಒಂದು ತಿಂಗಳದ ಸಂಬಳದ ಮೇಲೆ ಆಧಾರ ಪಡದೇ, ಮನುಜತ್ವ, ವಿಶ್ವಪಥ, ಸಮನ್ವಯ, ಸರೋ್ವದಯ ಎಂಬುವ ಪರಂಪರೆಯನ್ನು ವಿದ್ಯಾರ್ಥಿವೃಂದದವರಿಂದ ಸಮಾಜವನ್ನುಕಟ್ಟುತ್ತಿದ್ದಾರೆ" ಎಂದು ವಿವರಿಸಿದರು.
ಆರ್ ವೈಎಂಇಸಿ ಪ್ರಾಂಶುಪಾಲ ಡಾ. ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲ ಡಾ. ಸವಿತಾ ಸೊನೋಳಿ, ವೀ.ವಿ.ಸಂಘದ ಹಾನಗಲ್ಲು ಕುಮಾರಸ್ವಾಮಿ ಪಾಲಿಟೆಕ್ನಿಕ್ ಅಧ್ಯಕ್ಷ ಶ್ರೀಕಿರಣ್ ಕುಮಾರ್, ವಿವೇಕತೋರಣ, ಬಳ್ಳಾರಿ , ವತಿಯಿಂದಗಣ್ಯರು ಆರ್ವೈಎಂಇಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ವಿವಿದೋದ್ಧೇಶ ಸಹಕಾರ ಸಂಘ,ಬಳ್ಳಾರಿ , ವತಿಯಿಂದ ಅಧ್ಯಕ್ಷರು ಡಾ. ದೊಡ್ಡಬಸವನ ಗೌಡರು, ಹಾಗು ಮಹಾವಿದ್ಯಾಲಯದವೃತ್ತಿ ನೈತಿಕತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ಕೇಂದ್ರದಡಿಯಿಂದ ಡಾ ಎ.ತಿಮ್ಮನಗೌಡರು,ಇ ನ್ನಿತರು, ಭಾಗವಹಿಸಿದ್ದರು. ಹಾಗೂ ತಮ್ಮ ಅನಿಸಿಕೆಗಳು "ವಿದ್ಯಾರ್ಥಿ ಹಂತವು ಬಹಳ ಮುಖ್ಯವಾಗಿದೆ. ಎಲ್ಲಾ ಸಂಪತ್ತನ್ನು ಪಾಲು ಕೊಂಡಾಗಕಡಿಮೆಯಾಗುತ್ತದೆ, ಆದರೆ ವಿದ್ಯಾ ಸಂಪತ್ತು ಹಂಚಿಕೊಂಡಹಾಗೆಲ್ಲಾಅದು ವೃದ್ಧಿಸುವುದಲ್ಲಿ ಸಂದೇಹವಿಲ್ಲ. ವಿದ್ಯಾಥಿಗಳು ಬರೀತಮ್ಮಷ್ಟಕ್ಕೆತಾವುಇದ್ದುಜೀವಿಸುವುದಲ್ಲ. ಸಮಾಜದಲ್ಲಿತಮ್ಮ ನೆಲೆಯೊಂದನ್ನು ಸ್ಥಾಪಿಸಿ, ನೀವಿಲ್ಲದಿದ್ದರೂ ನಿಮ್ಮ ಹೆಸರುಚಿರಸ್ಥಾಯಿಯಾಗಬೇಕೆಂದರು. ವ್ಯಕ್ತಿತ್ವ ವಿಕಸನ ಎಂದರೆ, ಅಜ್ಞಾನದಿಂದ ಸುಜ್ಞಾನದಕಡೆಗೆ, ಕತ್ತಲಿನಿಂದ ಬೆಳಕಿನಡೆಗೆ, ವಾಮಾಚಾರದಿಂದ ರಾಜಮಾರ್ಗದೆಡೆಗೆ ಹೋಗುವುದು" ಎಂದರು.
ಕಾರ್ಯಕ್ರಮದಲ್ಲಿ ವಿವೇಕ ತೋರಣ, ಬಳ್ಳಾರಿ, ವತಿಯಿಂದ ಗಣ್ಯರು ಪ್ರಭುದೇವ ಕಪ್ಪಗಲ್, ವಿಕಾಶ್ಅಕಾಡಮಿ ವತಿಯಿಂದ ಡಾ.ಜಿ.ಆರ್.ವಸ್ತ್ರದ್, ಡಾ.ಕೃಸ್ಣ, ಮುಖ್ಯಸ್ಥರು ವಿಮ್ಸ್-ಮೈಕ್ರೋಬಯಾಲಜಿ, ಪ್ರಭು.ಕೆ. ಸದಸ್ಯರುಕರ್ನಾಟಕ ನಾಟಕ ಅಕಾಡಮಿ, ಇನ್ನೀತರರು ವತ್ಸಾ, ಸದಸ್ಯರು, ಜಾನಪದ ಅಕಾಡಮಿ, ಪ್ರವಿಣ್ ನಾಯ್ಕ್, ಅಡವಿಸ್ವಾಮಿ, ಸಿಬ್ಬಂದಿ ವರ್ಗದವರು, ಭಾಗವಹಿಸಿದ್ದರು.