ಶಿಗ್ಗಾವ್

ಶಿಕ್ಷಕರ ಪ್ರೀತಿ ಸದಾ ನನ್ನ ಮೇಲಿದೆ: ಬಸವರಾಜ ಹೊರಟ್ಟಿ

ಶಿಕ್ಷಕರ ಪ್ರೀತಿ ಸದಾ ನನ್ನ ಮೇಲಿದೆ: ಬಸವರಾಜ ಹೊರಟ್ಟಿ

ಲೋಕದರ್ಶನ ವರದಿ

ಶಿಗ್ಗಾವಿ 09: ಗುಲಾಮಗಿರಿಯಲ್ಲಿದ್ದ ಶಿಕ್ಷಕರನ್ನ ಹೋರಾಟ ಮಾಡಿ ಸ್ವತಂತ್ರ್ಯರನ್ನಾಗಿ ಮಾಡಿದ ತೃಪ್ತಿ ನನಗಿದ್ದು ಶಿಕ್ಷಕರ ಜೊತೆ ಪಕ್ಷಾತೀತವಾಗಿ ಇರುವುದರಿಂದ ಆ ಶಿಕ್ಷಕರ ಪ್ರೀತಿ ಸದಾ ನನ್ನ ಮೇಲಿದೆ ಎಂದು ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯಥರ್ಿ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದ ಮಾಮ್ಲೆದೇಸಾಯಿ ಶಾಲೆಯಲ್ಲಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನ ಮನೆಯಲ್ಲಿ ನನ್ನ ಹತ್ತಿರ ಬಂದವರಿಗೆ ಇಂದೇ ಸಹಾಯ ಮಾಡುತ್ತೇನೆ, ನಾಳೆ ಸಹಾಯ ಮಾಡುವ ಅವಕಾಶ ಸಿಗಲಿಕ್ಕಿಲ್ಲ ಎಂದು ಬರೆದಿದ್ದೇನೆ ಯಾಕೆಂದರೆ ನಾಳೆ ಅಧಿಕಾರ ಇರುತ್ತದೋ ಬಿಡುತ್ತದೋ ಗೊತ್ತಿಲ್ಲ ಎಂದು ಮಾಮರ್ಿಕವಾಗಿ ನುಡಿದ ಅವರು, ಏಳು ಭಾರಿ ಆಯ್ಕೆಯಾಗಲು ನನ್ನ ಮತ್ತು ಶಿಕ್ಷಕರಲ್ಲಿ ಇರುವ ಪ್ರೀತಿ, ಭಾಂಧವ್ಯ ಎಷ್ಟು ಅನ್ನೊದು ಅರಿಯಬೇಕು, ಕೇವಲ ಚುನಾವಣೆಯಲ್ಲಿ ಬರುವವನು ನಾನಲ್ಲ, ಸದಾ ಶಿಕ್ಷಕರೊಂದಿಗೆ ಒಡನಾಡಿಯಾಗಿದ್ದೇನೆ, ವಿರೋಧ ಪಕ್ಷದ ಅಭ್ಯಥರ್ಿ ಚುನಾವಣೆ ದಿನಾಂಕ ನಿಗಧಿಯಾದಾಗ ಮಾತ್ರ ಬರುತ್ತಾರೆ ಇದೇ ನನ್ನ ಮತ್ತು ವಿರೋಧಿಗಳಿಗೂ ಇರುವ ವ್ಯತ್ಯಾಸ, ಬದಲಾವಣೆಗೆ ಸಕಾಲವೆಂದು ಕಾಂಗ್ರೇಸ್ ಅಭ್ಯಥರ್ಿಗಳು ಹೇಳುತ್ತ ಹೊರಟಿದ್ದಾರೆ ಇದು ಬದಲಾವಣೆಗೆ ಸಕಾಲವೇ ಎಂದು ಶಿಕ್ಷಕರನ್ನು ಪ್ರಶ್ನಿಸಿದರು, 115 ವರ್ಷದ ವಿಧಾನಸಭಾ ಇತಿಹಾಸದಲ್ಲಿ ಮೂರು ಪಕ್ಷದವರಿಂದ ಬಹುಮತದಿಂದ ಸಭಾಪತಿ ಮಾಡಿದ ವ್ಯಕ್ತಿ ಎಂದರೇ ಅದು ಅದು ಬಸವರಾಜ ಹೊರಟ್ಟಿ, ನಾನು ಶಿಕ್ಷಣ ಮಂತ್ರಿ ಇದ್ದಾಗ ವಗರ್ಾವಣೆ ನೀತಿ ಮಾಡಿದೆ, 1039 ಸರಕಾರಿ ಪ್ರೌಢ ಶಾಲೆ ತೆರೆದೆ, 500 ಜ್ಯೂನಿಯರ್ ಕಾಲೇಜು ತೆರೆದೆ ಹೀಗೆ ಹೇಳುತ್ತ ಹೊರಟರೇ ಪಟ್ಟಿಯೇ ಇದೆ, ಮಹಿಳೆಯರು ನೌಕರಿ ಮಾಡಬಾರದು ಎಂಬ ಸ್ಥಿತಿಯಲ್ಲಿತ್ತು ಈಗ ಆ ಸ್ಥಿತಿಯಿಲ್ಲ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ 7 ಭಾರಿ ಶಿಕ್ಷಕರ ಮತಕ್ಷೇತ್ರದಿಂದ ಗೆದ್ದು ಬರೋದು ಅಂದರೇ ಅದೇ ಹೊರಟ್ಟಿಯವರ ಗೆಲುವಿನ ಕನ್ನಡಿಯಾಗಿದೆ, ಮಾತನಾಡುವ ಮಾತುಗಳು ಕೃತಿಯಲ್ಲಿ ಆದಾಗ ಮಾತ್ರ ಸತತ ಗೆಲುವಿಗೆ ಕಾರಣವಾಗುತ್ತವೆ, ದಿ. ಉದಾಸಿಯವರು ಯಾವಾಗಲೂ ಹೇಳುವಂತೆ ನಾವು ಮಾತನಾಡುವುಕ್ಕಿಂತ ನಮ್ಮ ಕೆಲಸಗಳು ಮಾತನಾಡಬೇಕು ಎಂಬಂತೆ ಹೊರಟ್ಟಿಯವರ ಕಾರ್ಯಗಳೇ ಗೆಲುವಿಗೆ ಕಾರಣವಾಗಲಿವೆ, ಜೆಡಿಎಸ್ನಿಂದ ಬಂದಿರುವ ಹೊರಟ್ಟಿಯವರು ಜೆಡಿಎಸ್ ಮತ್ತು ಬಿಜೆಪಿಯಿಂದ ಕ್ಯಾಪ್ಟನ್ ಹೊರಟ್ಟಿಯವರೇ ಎಂದರು.

ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಪರಿಹಾರವೆಂದರೆ ಹೊರಟ್ಟಿ, ಹೊರಟ್ಟಿಯೆಂದರೆ ಪರಿಹಾರ, ಹೊರಟ್ಟಿಯವರೆಂದರೆ ಶಿಕ್ಷಕರು, ಶಿಕ್ಷಕರೆದಂರೆ ಹೊರಟ್ಟಿ, ಹೊರಟ್ಟಿಯವರೆಂದರೆ ಶಿಕ್ಷಣ, ಯಾವುದೇ ಸಮಸ್ಯೆ ಇರಲಿ ಅದಕ್ಕೆ ಪರಿಹಾರ ನೀಡುವ ಶಕ್ತಿ ಅಂದರೆ ಅದು 42 ವರ್ಷದ ಅನುಭವದ ಹೊರಟ್ಟಿಯವರು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷೆ ರೂಪಾ ಬನ್ನಿಕೊಪ್ಪ, ಡಿ ಎಸ್ ಮಾಳಗಿ, ಆರ್ ಎಸ್ ಭಟ್,  ಜಿ ಎನ್ ಯಲಿಗಾರ, ಡಿ ಪಿ ಕೂರೂರ, ಜಯಣ್ಣ ಹೆಸರೂರ, ಎ ಕೆ ಅದ್ವಾನಿಮಠ, ಸುಭಾಸ್ ಚೌಹಾಣ್ ಸೇರಿದಂತೆ ಶಿಕ್ಷಕರು ಬಿಜೆಪಿ ಮುಖಂಡರು ಇದ್ದರು.

ಬಾಕ್ಸ ಸುದ್ದಿ : 42 ವರ್ಷದ ನನ್ನ ರಾಜಕಾರಣದಲ್ಲಿ ಒಂದು ರೂಪಾಯಿ ಲಂಚ ಪಡೆದಿಲ್ಲ, ಕೆಲವರು ವಿರೋಧ ಮಾಡುತ್ತಾರೆ, ಅಂಥವರು 15% ಜನ ಇರುತ್ತಾರೆ, ವಿರೋಧಿಗಳು ಇದ್ದಾಗಲೇ ನಮ್ಮ ಕಿಮ್ಮತ್ತು ಹೆಚ್ಚಾಗುತ್ತದೆ, ಪ್ರಜಾಪ್ರಭುತ್ವದಲ್ಲಿ ಅವರದೇ ಆದ ಮಾತನಾಡುವ ಹಕ್ಕು ಇರುತ್ತದೆ ಹಾಗಂತ ನಾವು ಏನೇ ಮಾಡಿದರೂ ಕೆಲವರು ಹೆಸರು ಇಡುವುದು ಸಹಜ, ಬದಲಾವಣೆ ಬಯಸುವವರು ಬಹಿರಂಗವಾಗಿ ಒಂದೇ ವೇಧಿಕೆಯ ಮೇಲೆ ಬಂದು ಕೇಳಲಿ. 

   ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಬಿಜೆಪಿ ಅಭ್ಯಥಿ 

ಸುದ್ದಿ ಓದಿ