ಮಕ್ಕಳ ಚಾರಿತ್ರ್ಯ ನಿರ್ಮಾತೃ ಶಿಕ್ಷಕ
ನಮ್ಮ ದೇಶದ ಎರಡನೆಯ ರಾಷ್ಟ್ರಪತಿಗಳಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ ಇವರು ತತ್ವಜ್ಞಾನಿಗಳು, ಮಹಾ ವಿದ್ವಾಂಸರು, ಚಿಂತಕರು, ಶಿಕ್ಷಣ ತಜ್ಞರು. ರಾಷ್ಟ್ರ ನಿಮರ್ಾಣದಲ್ಲಿ, ಮತ್ತು ಮಕ್ಕಳಲ್ಲಿ ಚಾರಿತ್ರ್ಯ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂಬುದನ್ನು ಅರಿತು ತಮ್ಮ ಹುಟ್ಟಿದ ದಿನವನ್ನು ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಕರೆ ನೀಡಿದ್ದು ಸ್ತುತ್ಯ ಮತ್ತು ಸಮರ್ಥನೀಯವಾದುದು. ಅಪಾರ ಶಿಷ್ಯರ ಪ್ರೀತ್ಯಾದರಗಳಿಗೆ ಪಾತ್ರರಾದ ಇವರು ಮಕ್ಕಳ ಸವರ್ೊಮುಖದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ವತ್ತಾಗಿದೆ ಎಂಬುದನ್ನು ಅರಿತಿದ್ದರು. 1888 ಸಪ್ಟೆಂಬರ 5 ರಂದು ಇವರು ಜನಿಸಿದರು. ಭಾರತರತ್ನ ಮೊದಲಾದಉನ್ನತ ಪ್ರಶಸ್ತಿಗಳು ಇವರಿಗೆ ದೊರೆತಿವೆ. ಈ ಶಿಕ್ಷಕರ ದಿನಾಚರಣೆ ಶಿಕ್ಷಣ ವ್ಯವಸ್ಥೆಯ, ಶಿಕ್ಷಣದ ಮಹತ್ವ, ಶಿಕ್ಷಕರ ಜವಾಬ್ದಾರಿ, ಶಿಕ್ಷಕರ ಸಮಸ್ಯೆ ಮತ್ತು ಸವಾಲುಗಳನ್ನು ತಿಳಿಯುವ ಹಾಗೂ ಗುರುಕುಲಕ್ಕೆಗೌರವ ಸಲ್ಲಿಸುವ ಸುಂದರವಾದ, ಮಹತ್ವದ ದಿನವೆಂದು ಹೇಳಬಹುದಾಗಿದೆ.
ಶಿಕ್ಷಕ ಅಂದಾಗ ಪ್ರಾಥಮಿಕ ಶಿಕ್ಷಕರ ನೆನೆಪು ಮೊದಲಾಗುತ್ತದೆ. ಮಗುವಿನ ಭವ್ಯ ಭವಿತವ್ಯಕ್ಕೆ ಬುನಾದಿ ಹಾಕುವ, ನಾಳಿನ ಆದರ್ಶ ನಾಗರಿಕನನ್ನಾಗಿ ರೂಪಿಸುವ ಗುರುತರ ಹೊಣೆ ಈ ಗುರುಗಳ ಹಾಗೂ ಗುರುಮಾತೆಯರದ್ದಾಗಿರುತ್ತದೆ. 'ಶಿಕ್ಷಣ ಇರುವುದೇ ಚಾರಿತ್ರ್ಯ ನಿಮರ್ಾಣಕ್ಕಾಗಿ' ಎಂದು ಮಹಾತ್ಮಾ ಗಾಂಧೀಜಿಯವರಿ ನಂಬಿದ್ದರು. ಶಿಕ್ಷಣ ಒಂದು ಪವಿತ್ರ ವೃತ್ತಿಯಾಗಿದೆ. ಅದರಿಂದು ಶಿಕ್ಷಣ ಮಾರಾಟದ ಸರಕಾಗಿ, ವéಾಣಿಜ್ಯ ಉದ್ದಿಮೆಯಂತಾಗುತ್ತಿರುವದು. ವಿಷಾದನೀಯವಾದುದು. ಏಕರೂಪದ ಶಿಕ್ಷಣ ಇನ್ನೂಜಾರಿಗೆ ಬರುತ್ತಿಲ್ಲ. ವಿದ್ಯಾಥರ್ಿಗಳ ಮನದಲ್ಲಿ ಶಿಕ್ಷಣ ಸಂಸ್ಕಾರವನ್ನು ಬಿತ್ತುವದರೊಂದಿಗೆ ಅವರಲ್ಲಿ ದೇಶಾಭಿಮಾನ, ಸಮಾಜಸೇವೆ, ಜಾತ್ಯಾತೀತ ಭಾವ ಹೀಗೆಲ್ಲ ಉದಾತ್ತ ಗುಣಗಳನ್ನು ಅರುಹಿ ಮಕ್ಕಳ ಮನಸ್ಸು ಅರಳುವಂತೆ ಮಾಡುವ ಪುಣ್ಯದé ಮತ್ತು ಜವಾಬ್ದಾರಿಯುತವಾದ ಕೆಲಸ ಶಿಕ್ಷಕರದ್ದಾಗಿದೆ. 'ಶಿಕ್ಷಣ ಇರುವ ದೇಚಾರಿತ್ರ್ಯ ನಿಮರ್ಾಣಕ್ಕಾಗಿ' ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದನ್ನು ನೆನಪಿನಲ್ಲಿಡಬೇಕು. ಸಾಮಾನ್ಯವಾಗಿ ದೊಡ್ಡವರು ತಪ್ಪು ಮಾಡಿದಾಗ 'ಯಾವ ಮಾಸ್ತರ ನಿನಗ ಶಾಲೀ ಕಲಿಸಿದ್ದಾನೆ'ಎಂದು ಹೇಳುವ ಮಾತನ್ನು ಕೇಳಿದ್ದೇವೆ. ಅಂದರೆ ನಮ್ಮ ಬದುಕಿನ ಉದ್ದಕ್ಕೂ ನಮ್ಮನ್ನು ತಿದ್ದಿತೀಡಿ ಮನುಷ್ಯರನ್ನಾಗಿ ಮಾಡಿದ ಅಂದಿನ ಶಿಕ್ಷಕರು ಸದಾ ಸ್ಮರಣೀಯರಾಗುತ್ತಾರೆ. ಗಟ್ಟಿಯಾದ ತಳಪಾಯದ ಮೇಲೆ ಭವ್ಯವಾದ ಸೌಧವನ್ನು ನಿಮರ್ಿಸುವ ಕೆಲಸದ ನಿರ್ವಹಣೆ ಮುಂದಿನ ಶಿಕ್ಷಣ ಕ್ಷೇತ್ರದ ಪ್ರಾಧ್ಯಾಪಕರ ಮೇಲಿರುತ್ತದೆ. ಮಕ್ಕಳು ಅನುಕರಣಾಶೀಲರು ತಮಗೆ ಕಲಿಸುವ ಗುರುಗಳ ಹಾವ ಭಾವ, ಆದರ್ಶತೆ, ಆಚಾರ ವಿಚಾರ, ಉಡುವ ಬಟ್ಟೆ, ಮಾತಿನ ಶೈಲಿ, ಹಾಗೂ ಬೋಧನಾರೀತಿ ವಿದ್ಯಾಥರ್ಿಗಳ ದೃಷ್ಟಿ ಇದ್ದೇ ಇರುತ್ತದೆ.
ಕಾರಣ ಕಲಿಸುವವರು ಮೊದಲು ಆದರ್ಶತೆಯನ್ನು ಮೈಗೂಡಿಸಿಕೊಳ್ಳುವದು ಅಗತ್ಯವಾದುದು. ಶಿಕ್ಷಕರು ಕೇವಲ ಪಾಠಗಳಿಗೆ ಸೀಮಿತಗೊಳಿಸದೆ ಮಕ್ಕಳನ್ನು ಶಾಲೆಯ ನಾಲ್ಕು ಗೋಡೆಗಳಾಚೆ ಕರೆದುಕೊಂಡು ಹೋಗಬೇಕು. ಗುಡ್ಡ ಬೆಟ್ಟ, ಹರಿವ ಹೊಳೆ ಹಳ್ಳ, ಗ್ರಾಮೀಣ ಪರಿಸರ ಅಲ್ಲಿಯ ಶ್ರಮ ಸಂಸ್ಕೃತಿ, ಪರಂಪರೆ, ಮಾನವೀಯತೆ, ಐತಿಹಾಸಿಕ ಸ್ಥಳ ಹೀಗೆಲ್ಲ ಮಗುವಿಗೆ ಹೊರಜಗತ್ತಿನ ವಿದ್ಯಮಾನದ, ಅಧ್ಯಯನದ ಅರಿವು ಆಗಬೇಕು. ಮನೋರಂಜನೆಯೊಂದಿಗೆ ಹೆಚ್ಚಿನ ತಿಳುವಳಿಕೆ, ವ್ಯವಹಾರಜ್ಞಾನದ ಗಳಿಕೆ ಮಕ್ಕಳಿಗೆ ಇರುವದು ಅಗತ್ಯವಾದುದು. ಈ ದಿಸೆಯಲ್ಲಿ ಶಿಕ್ಷಕರ ಹಾಗೂ ಪಾಲಕರು ಗಮನಹರಿಸಬೇಕು. ಅಂಕ ಗಳಿಸುವದರೊಂದಿಗೆ ಹೊರ ಜಗತ್ತಿನ ಜ್ಞಾನ, ವ್ಯವಹಾರಿಕ ಬುದ್ಧಿಯ ಸಂಪಾದನೆ ಮಾಡುವದು ಪ್ರಧಾನವಾದುದು. ಮಕ್ಕಳು ಸರ್ವ ಬಗೆಯಾಗಿ ವಿಕಸಿಸಬೇಕು.
ಶಿಕ್ಷಕರ ದಿನಾಚರಣೆ ಇದೊಂದು ಶಾರದೆಯ ಆರಾಧನೆ. ಅಕ್ಷರ ಕಲಿಸಿದವರನ್ನು ಗೌರವಿಸಿ ಸದಸ್ಮರಿಸುವ ಸುದಿನ. ಶಿಕ್ಷಕ ವೃತ್ತಿಗೆ ವಿಶಿಷ್ಟ ಸ್ಥಾನ ಮಾನವಿದೆ. ಆಸಕ್ತಿ ಇರುವವರು, ಪ್ರವೃತ್ತಿ ಹೊಂದಿದವರು ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶ ಮಾಡಬೇಕು. ನೌಕರಿಗಾಗಿ, ವೇತನಕ್ಕಾಗಿ ಅಂದರೆ ಹೊಟ್ಟೆ ಹೊರೆಯುವದಕ್ಕಾಗಿ ಮಾತ್ರ ಶಿಕ್ಷಕನಾಗುವದು ಅಕ್ಷಮ್ಯ ಅಪರಾಧವಾಗುತ್ತದೆ. ಸಮರ್ಪಣಾ ಭಾವದಿಂದ ಕೂಡಿದ ವೃತ್ತಿ ಇದಾಗಿದೆ. ಅಧ್ಯಯನ ಮತ್ತು ಅಧ್ಯಾಪನ ಇದೊಂದು ನಿರಂತರವಾದ ಪ್ರಕ್ರಿಯೆಯಾಗಬೇಕು. ಶಿಕ್ಷಣ ಇರುವದು ಮುಖ್ಯವಾಗಿ ಮಕ್ಕಳ ಚಾರಿತ್ರ್ಯ ನಿಮರ್ಾಣಕ್ಕಾಗಿ, ವ್ಯಕ್ತಿತ್ವ ವಿಕಾಸಕ್ಕಾಗಿ. ಇದರಿಂದ ಸಹಜವಾಗಿ ಮಕ್ಕಳಲ್ಲಿ ಸ್ವಾಭಿಮಾನ, ಸ್ವಾವಲಂಬಿತನ ತಾನೇ ತಾನಾಗಿ ಹುಟ್ಟಿಕೊಳ್ಳುತ್ತದೆ.
ನಾಳಿನ ನಾಗರಿಕ ರನ್ನಾಗಿ ರೂಪಿಸುವ, ಅವರಲ್ಲಿ ಆತ್ಮವಿಶ್ವಾಸವನ್ನು, ಆತ್ಮಗೌರವವನ್ನು ಅಂಕುರಿಸುವಲ್ಲಿ ಶಿಕ್ಷಕರ ಪಾತ್ರ ಪ್ರಧಾನವಾಗಿದೆ. 'ಮನೆಯೇ ಮೊದಲ ಪಾಠ ಶಾಲೆ, ಜನನಿ ಮೊದಲ ಗುರು' ಎಂಬ ಮಾತು ಜನಜನಿತವಾದುದು. ಮನೆಯ ಪರಿಸರ, ಪರಿಸ್ಥಿತಿ ಮಕ್ಕಳ ಮನದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇದಕ್ಕೆ ಎರಡು ಮಾತಿಲ್ಲ. ಶಾಲೆಯೆಂಬ ವಾತಾವರಣದಲ್ಲಿ ಮಗುವು ಸ್ನೇಹ, ಸಹಕಾರ, ಹೊಂದಾಣಿಕೆ, ಹೆಚ್ಚಿನ ಅಕ್ಷಾರಾಭ್ಯಾಸವನ್ನು ಹೊಂದುತ್ತದೆ. ಸಂವೇದನಾಶೀಲತೆ, ಕುತೂಹಲತೆ ಮಗುವಿನ ಮನಸ್ಸಿನ ವಿಕಾಸಕ್ಕೆ ದೃಢವಾದ ಮೆಟ್ಟಿಲುಗಳಾಗುತ್ತವೆ. ಬ್ರಿಟನ್ ದೇಶದ ರಾಜಕೀಯ ಮುತ್ಸದ್ಧಿ ಹಾಗೂ ಕಾದಂಬರಿಕಾರ ಬೆಂಜಮಿನ್ ಡಿಸ್ರೇಲಿ ಎಂಬವರು 'ದೇಶದ ಭವಿಷ್ಯ ಅಲ್ಲಿಯ ಶಿಕ್ಷಣದ ಮೇಲೆ ಹೊಂದಿಕೊಂಡಿದೆ' ಎಂಬ ಮಾತು ಸತ್ಯವಾದುದು. ಸುಶಿಕ್ಷಿತ, ಸುಸಂಸ್ಕೃತವಾದ ದೇಶ ಉದ್ಧಾರದತ್ತ ಮುಖಮಾಡುತ್ತದೆ. 'ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ, ಇಂದಲ್ಲ ನಾಳೆ ಫಲ ಕೊಡುವದು' ಎಂದು ತಿಳಿಸಿದ ದೇವನೂರ ಮಹಾದೇವ ಇವರ ಮಾತು ಅರ್ಥಪೂರ್ಣವಾದುದು. ಅಕ್ಷರ ಎಂದರೆ ನಾಶವಿಲ್ಲದ್ದು. ಜ್ಞಾನದ ಗಳಿಕೆಯನ್ನು ಯಾರೂ ಕಳವು ಮಾಡಲಾರರು, ಬಳಸಿದಂತೆ ಇದು ಅಧಿಕಗೊಳ್ಳುತ್ತದೆ. ಇದರ ಮೇಲೆ ಯಾವ ಸುಂಕವಿರುವದಿಲ್ಲ. ಇದೊಂದು ನಿಜವಾದ ಮಹಾ ಆಸ್ತಿ. ಇದನ್ನೆಲ್ಲ ಗಮನದಲ್ಲಿರಿಸಿ ಇಂದಿನ ಶಿಕ್ಷಕ ಸಮೂಹ ತಮ್ಮ ಕರ್ತವ್ಯ ದಕ್ಷತೆಗೆ ಆದ್ಯತೆ ನೀಡಬೇಕು. ಮನಸ್ಸಿಟ್ಟು ಕಾರ್ಯನಿರ್ವಹಿಸುವ ಶಿಕ್ಷಕರು ನಮ್ಮ ಮಧ್ಯ ಅನೇಕರು ಇದ್ದಾರೆ. ತ್ಯಾಗ, ಪ್ರೀತಿ, ಕರುಣೆ, ವಿನಯ, ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ ಎಂಬ ಸ್ವಾಮಿ ವಿವೇಕಾನಂದರ ಮಾತನ್ನುಎಲ್ಲರೂ ಮನನಮಾಡಿಕೊಳ್ಳಬೇಕು.
ಆದರೆ ಪ್ರಸ್ತುತದಲ್ಲಿ ಒಳಹೊಕ್ಕು ನೋಡಿದರೆ ಸರಕಾರಿ ಶಿಕ್ಷಕರು ಇಂದುಅಕ್ಷರಶ: ಕಾರಕೂನರಾಗಿದ್ದಾರೆಂದು ಹೇಳಬಹುದಾಗಿದೆ. ಮೊದಲಿನ ಶಿಕ್ಷಣ ಕ್ರಮದಲ್ಲಿ ಗುರುಗಳಿಗೆ ಕಲಿಸುವಲ್ಲಿ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುತ್ತಿತ್ತು. ಜನಗಣತಿ, ಜಾತಿ, ಆಥರ್ಿಕ ಮೊದಲಾದ ಗಣತಿ, ಚುನಾವಣೆ ಕೆಲಸ ಇಂತೆಲ್ಲವುಗಳ ಜವಾಬ್ದಾರಿಗಳು ಇವರ ಮೇಲೆ ಹೇರಲ್ಪಡುತ್ತವೆ. ಇವರು ನೆಮ್ಮದಿಯಿಂದ ಕೆಲಸ ಮಾಡುವಂತಿಲ್ಲ. ಅಲೆಮಾರಿ, ಬಡತನದ, ಅಜ್ಞಾನ, ಮೌಢ್ಯದ ಹಿಂದುಳಿದ ಜಾತಿಜನಾಂಗದ ಮನೆಗಳ ಮಕ್ಕಳು ಸರಕಾರಿ ಶಾಲೆಗಳಲ್ಲಿ ಅಧಿಕವಾಗಿ ದಾಖಲಾಗುತ್ತಾರೆ. ಒಮ್ಮೆಮ್ಮೆ ಈ ಮಕ್ಕಳ ಮಾತೃ ಭಾಷೆ ಬೇರೆಯದ್ದಾಗಿರುತ್ತದೆ. ಇಂಥ ಪ್ರತಿಕೂಲ ಸ್ಥಿತಿಯಲ್ಲಿ ಮಕ್ಕಳಿಗೆ ಬೋಧಿಸುತ್ತಿರುವ ಶಿಕ್ಷಕರ ಸಮಸ್ಯೆಯನ್ನು ಅರಿಯಬೇಕು. ನಿರಾತಂಕವಾಗಿ, ಸಮರ್ಥವಾಗಿ ಬೋಧಿಸುವದಕ್ಕಾಗಿ ಅವಕಾಶ ನೀಡಬೇಕು. ಕೆಲ ಶಾಲೆಗಳಲ್ಲಿ ಪ್ರವಾಹದ ವಿರುದ್ಧ ಈಸಿ ಯಶಸ್ಸು ಪಡೆಯುವ ಸಾಹಸದ ಕೆಲಸ ಇಲ್ಲಿಯ ಬೋಧಕರಾಗಿರುತ್ತದೆ. ಇದನನ್ನು ಸರಕಾರ ಹಾಗೂ ಅಧಿಕಾರಿ ವರ್ಗ ಅರಿಯುವದು ಅಗತ್ಯವಾದುದು. ಯೋಗ್ಯರನ್ನು ಆರಿಸಿ ಅವರಿಗೆ ಶಿಕ್ಷಕ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಪ್ರಶಸ್ತಿಗಾಗಿ ಅಜರ್ಿ ಸಲ್ಲಿಸುವ ಪದ್ಧತಿ ಸಲ್ಲದು. ಈ ದಿಸೆಯಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕತೆಇರಲಿ.
ಸಂಬಳ ಏರಿಕೆ, ಭತ್ಯ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಹೋರಾಡುವ ಶಿಕ್ಷಕ ಶಿಕ್ಷಕಿಯ ಸಮೂಹ ಮಕ್ಕಳ ಉಜ್ವಲ ಭವಿತವ್ಯಕ್ಕಾಗಿಅವರಚಾರಿತ್ರ್ಯ ನಿಮರ್ಾಣಕ್ಕಾಗಿ ಲವಲವಿಕೆಯನ್ನುತೋರಬೇಕು. ತಮ್ಮ ಹಕ್ಕುಗಳನ್ನು ಕೇಳುವ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ತಿಳಿಯಬೇಕು.
ಆರು ದಶಕಗಳ ಹಿಂದೆ ಗುರುಗಳು ಎಂದರೆ ಮಕ್ಕಳಲ್ಲಿ ಅಷ್ಟೇ ಏಕೆ ಸಮಾಜದಲ್ಲಿ ಅವರಿಗೆ ಹೆಚ್ಚಿನಗೌರವ ಸಲ್ಲುತ್ತಿತ್ತು. ಮಕ್ಕಳ ಸವರ್ಾಂಗೀಣ ಪ್ರಗತಿಯೊಂದಿಗೆ ಅವರು ಸಮಾಜ ಸುಧಾರಣೆಯಲ್ಲೂ ಪಾಲ್ಗೊಳ್ಳುತ್ತಿದ್ದರು. ನಮ್ಮ ಆದರ್ಶ ಬದುಕಿಗೆ ಬುನಾದಿ ಹಾಕಿದ ಅಂದಿನ ಗುರುಗಳನ್ನು ಇಂದಿಗೂ ನಾವು ಮರೆತಿಲ್ಲ. ಅವರಲ್ಲಿ ಸಮರ್ಪಣಾ ಭಾವ ಇರುತ್ತಿತ್ತು. ಮಕ್ಕಳು ಜಾಣರಾದರೆ ಅವರಲ್ಲಿ ಸಂತೃಪ್ತತೆ, ಸಾರ್ಥಕತೆ ನೆಲೆಯೂರುತ್ತಿತ್ತು. ಹಣದ ಹಿಂದೆ ಇವರು ಎಂದೂ ಬೀಳಲಿಲ್ಲ. ರಜಾದಿನಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠಗಳನ್ನು ಉಚಿತವಾಗಿ ಇವರು ಹೇಳಿಕೊಡುತ್ತಿದ್ದರು. ಇಂದು ಬೀದಿ ಬೀದಿಗೂ ಟ್ಯುಶನ್ ಕ್ಲಾಸಗಳು ಹಣ ಗಳಿಸಲು ಮುಂದಾಗಿವೆ. ಶಿಕ್ಷಣ ಕ್ಷೇತ್ರ ವಾಣೀಜ್ಯೀಕರಣಗೊಳ್ಳುತ್ತಿರುವದು ಕಳವಳಕಾರಿಯಾಗಿದೆ. ಈ ಕ್ಷೇತ್ರಜಾತಿ ಮತ ಹಾಗೂ ಯಾವದೇ ಪ್ರಲೋಭನೆಗಳಿಂದ ದೂರವಾಗಿರಬೇಕು. "ತ್ಯಾಗ, ಪ್ರೀತಿ, ಕರುಣೆ, ವಿನಯ, ಪ್ರಾಮಾಣಿಕತೆಗಳೇ ನಿಜವಾದ ಶಿಕ್ಷಣ' - ಸ್ವಾಮೀ ವಿವೇಕಾನಂದರ ನುಡಿ ಮನನೀಯವಾಗಿದೆ. ಶಿಕ್ಷಕ ದಿನಾಚರಣೆಯಂದು ಶಿಕ್ಷಕರು, ಸಮಾಜ, ಸರಕಾರ, ಸಂಘ ಸಂಸ್ಥೆಗಳು ಈ ಕೆಳಗಿನ ಸಂಕಲ್ಪಗಳನ್ನು ಮಾಡಿ ಸಾಕಾರರೂಪಕ್ಕಿಳಿಸಬೇಕು. ಆದರ್ಶವಾದ ತಳಹದಿಯ ಮೇಲೆ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು. ನಿರಪೇಕ್ಷಾಭಾವ ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರಲ್ಲಿ ಮೂಡಬೇಕು. ಈ ರಂಗಜಾತಿ ಮತ ಪಂಥದ ತಾರತಮ್ಯದಿಂದ ದೂರವಿರಬೇಕು. ಶಿಕ್ಷಕರು ತಮ್ಮ ಹಕ್ಕುಗಳೊಂದಿಗೆ ತಮ್ಮ ಗುರು ತರವಾದ ಜವಾಬ್ದಾರಿಯನ್ನು ಅರಿಯಬೇಕು. ಸುಂದರವಾದ, ಸಮೃದ್ಧವಾದ, ಶಾಂತಿ ಸುವ್ಯವಸ್ಥಿತ ಸಮಾಜ ಕಟ್ಟುವಲ್ಲಿ ಶಿಕ್ಷಕರು ಸಂಕಲ್ಪಿಸಲಿ. ಈ ದಿಸೆಯಲ್ಲಿ ಮಕ್ಕಳಿಗೆ ಬೋಧಿಸುವಲ್ಲಿ ಸಮರ್ಥತೆಯನ್ನು ತೋರಲಿ.
- ಶಿವಯೋಗಿ ಕುಸುಗಲ್ಲ
ಬೆಳಗಾವಿ
ಮೊ.827733415