ಮೇರಿ ದೇವಾಸಿಯಾ ಪ್ರಶಸ್ತಿಗೆ ಶಿಕ್ಷಕಿ ಚಂದ್ರಕಲಾ ಆಯ್ಕೆ
ಮೂಡಲಗಿ 19: ರಾಜ್ಯ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವತಿಯಿಂದ ನೀಡುವ ‘ ಮೇರಿ ದೇವಾಸಿಯಾ’ ಪ್ರಶಸ್ತಿಗೆ ಮೂಡಲಗಿ ವಲಯದ ಮೇಳವಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಚಂದ್ರಕಲಾ ನಾಗಪ್ಪ ದುರಗಣ್ಣವರ (ಸಣ್ಣಕ್ಕಿ) ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ. 21ರಂದು ರವಿವಾರ ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ 10-00 ಗಂಟೆಗೆ ಜರುಗಲಿದೆ ಎಂದು ಸರಕಾರಿ ನೌಕರ ಸಂಘದ ರಾಜ್ಯ ಪ್ರಧಾನ ಪ್ರದಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.