ವಾಹನಗಳ ತೆರಿಗೆ ಪಾವತಿ, ಚಾಲನಾ ಪರವಾನಿಗೆ ಪಡೆಯಲು ಅವಕಾಶ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 27: ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲಯರ ಸಂಘ ಮತ್ತು ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗಾಗಿ ಜನಜಾಗೃತಿ ಮೂಡಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಡಿ.ಅನುಪಮರವರು ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಬುಧವಾರ ಏರಿ್ಡಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ನಿಮ್ಮಿತ್ತ ಅಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಯಶಸ್ಸಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ವಾಹನಗಳ ದಟ್ಟಣೆ, ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಚಾಲನಾ ಪರವಾನಿಗೆ ಪಡೆಯದೆ ಚಲಿಸುವುದು, ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲದೆ ಚಾಲನೆ ಮಾಡುವುದು ಕಾಣಬಹುದಾಗಿದೆ, ಆದ್ದರಿಂದ ಅ.28ರ ಗುರುವಾರ ಬೆಳಗ್ಗೆ 10ಗಂಟೆಗೆ ನ್ಯಾಯಾಲಯದ ಆವರಣದಲ್ಲಿ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅರಕ್ಷಕ ಠಾಣೆ ಮತ್ತು ಆರ್ಟಿಓ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಉಚಿತವಾಗಿ ಚಾಲನಾ ಪರವಾನಿಗೆ, ಮತ್ತು ರಿಯಾಯಿತಿ ವಾಹನಗಳ ತೆರಿಗೆಗಳನ್ನು ಕಟ್ಟುವ ಅವಕಾಶವಿದ್ದು, ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕರಾದ ರಾಘವೇಂದ್ರ ತಳವಾರ್, ವಕೀಲರ ಸಂಘದ ಅಧ್ಯಕ್ಷ ಬಿ.ಬಸಪ್ಪ, ಜಿ.ಗಂಗಾಧರ, ವೆಂಕಟೇಶ್ನಾಯ್ಕ್, ಎಚ್.ನರೇಂದ್ರಬಾಬು, ಸುಭಾಸ್ನಾಯ್ಕ್ ಮತ್ತಿತರರು ಇದ್ದರು. ಸಮಿತಿಯ ಸಹಾಯಕರಾದ ಕೆ.ಸತೀಶ್ ನಿರ್ವಹಿಸಿದರು.