ಶಿಗ್ಗಾವ್

ತಾಲೂಕ ಮಟ್ಟದ ಪೋಷಣ ಮಾಸಚಾರಣೆ ಸಮಾರೋಪ

ತಾಲೂಕ ಮಟ್ಟದ ಪೋಷಣ ಮಾಸಚಾರಣೆ ಸಮಾರೋಪ

ಶಿಗ್ಗಾವಿ 01: ಗರ್ಭೀಣಿ, ಬಾಣಂತಿಯರು ಹೆಚ್ಚು ಪೌಷ್ಠಿಕ ಆಹಾರವುಳ್ಳ ಪದಾರ್ಥಗಳನ್ನು ಹಾಗೂ ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣುಗಳನ್ನು ಸೇವನೆ ಮಾಡಬೇಕು ಹೊರತು ಜಂಕ ಪದಾರ್ಥಗಳಿಗೆ ಮಾರು ಹೋಗಬಾರದು ಎಂದು ಹಾವೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ ಹೇಳಿದರು. 

ಶಿಶು ಅಭಿವೃದ್ಧಿ ಯೋಜನೆ ಶಿಗ್ಗಾವಿ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕ ಮಟ್ಟದ ಪೋಷಣ ಮಾಸಚಾರಣೆಯ ಸಮಾರೋಪ ಸಮಾರಂಭವು ಚಾಕಾಪೂರ ಗ್ರಾಮದಲ್ಲಿ ನೆರವೆರಿಸಲಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗರ್ಭೀಣಿ, ಬಾಣಂತಿಯರು ಪೌಷ್ಠಿಕತೆಯ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕುಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ಹನುಮರಹಳ್ಳಿ ಗ್ರಾಮ ಪಂಚಾಯತಿ ಆಡಿನ ವಹಿಸಿದ್ದರು. ಶಿಶು ಅಭಿವೃದ್ದಿಯೋಜನಾಧಿಕಾರಿ ನೀತಾ ವಾಡಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮತೋಲವಾದ ಪೌಷ್ಠಿಕ ಆಹಾರದಕುರಿತು ಹಾಗೂ ರಕ್ತಹೀನತೆ, ತಾಯಿ ಮರಣ ಹಾಗೂ ಶಿಶು ಮರಣಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶವಾಗಿರುವ ಕುರಿತು ಮಾಹಿತಿ ನೀಡಿದರು. ಹಾಗೂ ಎದೆ ಹಾಲಿನ ಮಹ್ವತ ಕುರಿತು ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಸ್ವಚ್ಚತಾ ಹೀ ಸೇವಾ ಆಂದೋಲನದ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. 

ಪೌಷ್ಠಿಕ ಆಹಾರದ ಪ್ರಾತ್ಯಕ್ಷತೆ, ಸಿಮಂತ ಕಾರ್ಯಕ್ರಮ, ಅನ್ನಪ್ರಾಶನ ಹಾಗೂ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯಿತು. ವಲಯದ ಮೇಲ್ವಿಚಾರಕಿ ಸುಜಾತಾ ಜವಳಗೇರಿ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪಂಚಾಯತಿಯ ಸರ್ವ ಸದಸ್ಯರು, ಇಲಾಖೆಯ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಬಾಲ ವಿಕಾಸ ಸಮಿತಿಅಧ್ಯಕ್ಷರು, ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹಾಜರಿದ್ದರು. 


ಸುದ್ದಿ ಓದಿ