ಮುಂದಗೋಡ

ಅ.7 ರಂದು ತಾಲೂಕ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ

ಅ.7 ರಂದು ತಾಲೂಕ ಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ

ಮುಂಡರಗಿ 06:  ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಂಡರಗಿ ತಾಲೂಕ ಘಟಕದಿಂದ ಅ.7 ರಂದು ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಕಮ್ಮಾರ ತಿಳಿಸಿದರು. 

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ನಮ್ಮ ವಿಶ್ವಕರ್ಮ ಸಮಾಜದಿಂದ ಸಂಘವನ್ನು ಮಾಡಿದ್ದಿಲ್ಲ. ಹೀಗಾಗಿ ನಮ್ಮ ಸಮಾಜದ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬೆಳವಣಿಗೆ ದೃಷ್ಟಿಯಿಂದ ನಮ್ಮ ಸಮಾಜವನ್ನು ಒಗ್ಗೂಡಿಸುವುದರೊಂದಿಗೆ ವಿಶ್ವಕರ್ಮ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮಾಜದ ಎಲ್ಲಾ ಜನತೆ ಅ.7 ರಂದು ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗುವ ಜಯಂತ್ಯೋತ್ಸವ ಹಾಗೂ ಮೆರವಣಿಗೆ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳಬೇಕೆಂದು ವಿನಂತಿಸಿದರು. 

ಬೆಳಿಗ್ಗೆ 6 ಗಂಟೆಗೆ ಮುಂಡರಗಿ ಕೋಟೆ ಭಾಗದ ಶ್ರೀ ಕಾಳಿಕಾದೇವಿಗೆ ಪಂಚಾಮೃತ ಅಭೀಷೇಕ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗುವುದು. ನಂತರ ಬೆಳಿಗ್ಗೆ 9:30 ಕ್ಕೆ ಸಕಲ ವಾಧ್ಯಗಳೊಂದಿಗೆ ಮುಂಡರಗಿಯ ಕಾಳಿಕಾದೇವಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಸಂಚರಿಸಿ ಕೊನೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ತಲುಪಲಿದೆ. 

ನಂತರ ನವಲಗುಂದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಅಭಿನವ ಎಚ್ಚರಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮುಂಜಾನೆ 11:35 ಕ್ಕೆ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಮ್ಮಾರ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ, ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ, ರೋಣ ಶಾಸಕ ಜಿ.ಎಸ್‌.ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕುರಿ ್ಘ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್‌.ಗೌಡರ, ತಹಶಿಲ್ದಾರ ಎಂ.ದನಂಜಯ್, ಸಿಪಿಐ ಮಂಜುನಾಥ ಕುಸುಗಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್‌.ಜಾಧವ್, ಹೇಮಗೀರೀಶ ಹಾವಿನಾಳ, ದೇವೇಂದ್ರ ಆಚಾರ್ಯ, ಡಿ.ಡಿ,ಮೋರನಾಳ, ರವೀಂದ್ರ ಉಪ್ಪಿನಬೆಟಗೇರಿ, ಆನಂದಗೌಡ ಪಾಟೀಲ, ಕೆ.ವ್ಹಿ.ಹಂಚಿನಾಳ, ಕವಿತಾ ಉಳ್ಳಾಗಡ್ಡಿ, ಶಿವಪ್ಪ ಚಿಕ್ಕಣ್ಣವರ, ನಾರಾಯಣಪ್ಪ ಇಲ್ಲೂರ, ಕೊಟ್ರೇಶ ಅಂಗಡಿ, ಎಸ್‌.ಎಂ.ಕಮ್ಮಾರ, ಎಸ್‌.ಎಸ್‌.ಬಡಿಗೇರ, ಸಂಗಣ್ಣ ಲಿಂಬಿಕಾಯಿ, ಜಿ.ಕೆ.ಕೊಳ್ಳಿಮಠ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.  

ಈ ವೇಳೆ ಚಂದ್ರಹಾಸ ಕಮ್ಮಾರ, ಕಾಳಪ್ಪ ರಾಜನಾಳ, ಮಂಜುನಾಥ ಬಡಿಗೇರ, ಮಂಜುನಾಥ ಕಮ್ಮಾರ, ಎನ್‌.ಎಂ.ಬಡಿಗೇರ, ಈಶಣ್ಣ ಬಡಿಗೇರ, ಲಿಂಗರಾಜ ಕಮ್ಮಾರ, ಈರಣ್ಣ ಬಡಿಗೇರ, ಕೃಷ್ಣಾ ಬಡಿಗೇರ ಇತರರು ಇದ್ದರು. 


ಸುದ್ದಿ ಓದಿ