ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭ
ಕೊಲ್ಹಾರ ಸೆ. 4 : ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಸೆ. 5ರಂದು ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ್ ನಾಯಕ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ವಿರಕ್ತ ಮಠ, ಬಸವನಬಾಗೇವಾಡಿಯ ಮ.ನ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಉಪಸ್ಥಿತರಿರುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ, ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಜ್ಯೋತಿ ಬೆಳಗಿಸುವರು.
ರವಿ ಕುಮಾರ್ ಎನ್., ಪ್ರಕಾಶ ಹುಕ್ಕೇರಿ, ಸಿ.ಎಸ್. ನಾಡಗೌಡ, ಸುಧಾ ಮೂರ್ತಿ, ಕಾಂತಾ ನಾಯಕ, ಸುನೀಲಗೌಡ ಪಾಟೀಲ, ಹನುಮಂತ ನಿರಾಣಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಕೆ.ಎಸ್. ದೇಸಾಯಿ, ಆರಿ್ಬ. ಪಕಾಲಿ ಹಾಗೂ ಪಿ.ಕೆ. ಗಿರಗಾವಿ ಗೌರವ ಉಪಸ್ಥಿತರಿರುವರು. ಚಂದ್ರಶೇಖರ ನುಗ್ಲಿ, ಅಶೋಕ ಗಿಡ್ಡಪ್ಪಗೋಳ ಹಾಗೂ ಎಂ.ಆರ್. ಮಕಾನದಾರ ಅತಿಥಿಗಳಾಗಿ ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ವಿ.ಎಚ್. ಪುರೋಹಿತ್, ಎಂ.ಎಚ್. ಜಮುನ, ಕೆ.ಎಸ್. ಬಾಲಗೊಂಡ, ಎಚ್.ಬಿ. ಪಕಾಲಿ, ಟಿ.ಪಿ. ದಳವಾಯಿ, ಕೃಷ್ಣ ರಾಜಪೂತ, ಜಗದೀಶ ಕಾಂಬಳೆ, ಎನ್.ಎ. ಬನಸೋಡೆ, ಸಂಗಮೇಶ ಜಂಗಮಶೆಟ್ಟಿ, ಶಿವಶರಣ ತಡಲಗಿ, ಗಂಗಾಧರ ಆಸಂಗಿ, ಆನಂದ ಗಣಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು.