ತಾಲೂಕಾಡಳಿತದ ನಡೆ ಶಿವಾನಂದನಗರದ ಕಡೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 16: ತಾಲೂಕಿನ ಶಿವಾನಂದ ನಗರ ಗ್ರಾಮದಲ್ಲಿ ಸರಕಾರದ ಮಹತ್ತರ ಯೋಜನೆಯಲ್ಲೊಂದಾದ ಗ್ರಾಮವಾಸ್ತವ್ಯ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಸಿ ತಹಶಿಲ್ದಾರ್ ಶರಣಮ್ಮ ಮಾತನಾಡಿ ತಾಲೂಕಾಡಳಿತವು ನಿಮ್ಮ ಮನೆ ಮುಂದೆ ಬಂದಿದ್ದು ಗ್ರಾಮದ ಸಾರ್ವಜನಿಕ ಕುಂದುಕೊರತೆಗಳ ಅಹವಾಲುಗಳನ್ನು ಶ್ವೀಕರಿಸಿ ನಿಗದಿತ ಸಮಯದೊಳಗೆ ಪರಿಸಲೆಂದು ಇರುವ ಈ ಗ್ರಮ ವಾಸ್ತವ್ಯೆ ಕಾರ್ಯಕ್ರಮವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳವಂತೆ ತಿಳಿಸಿದರು.ತಮ್ಮ ಅಹವಾಲುಗಳನ್ನು ಸಂಭಂಧ ಪಟ್ಟ ಇಲಾಖೆಯಿಂದ ವಿಲೆಗೊಳಿಸಲಾಗುವುದು , ಪ್ರಥಮವಾಗಿ ಗ್ರಾಮದ ಮುಖ್ಯ ಸಮಸ್ಯೆಗಳಾದ ರಸ್ತೆ, ಚರಂಡಿ ವ್ಯೆವಸ್ಥೆ, ಜೆಸ್ಕಾಂಗೆ ಸಂಭಂಧ ಪಟ್ಟ ಸಮಸ್ಯೆಗಳು ಇದ್ದು , ಸಿಸಿ ರಸ್ತೆಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು ಕೆಲವೇ ದಿನಗಳಲ್ಲಿ ಕಾರ್ಯ ಪ್ರಾರಂಭವಾಗುವುದು,ಜೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ನೂತನ ಕಂಬ ಹಾಗೂ ಕಂಬ ಬದಲಾವಣೆ ಕಾರ್ಯಯಾಗಬೇಕಿದೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ ಇದಕ್ಕೆ ಸಂಭಂಧಿಸಿದ ಅಧಿಕಾರಿಗಳಾದ ಮಂಜುನಾಥ್ ಅವರಿಗೆ ನಿರ್ದೇಶನ ನೀಡಲಾಗಿದೆ ನಾಲ್ಕೈದು ದಿನಗಳಲ್ಲಿ ಜೆಸ್ಕಾಂ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವನ್ನು ವ್ಯೆಕ್ತಪಡಿಸಿದ್ದು ಕಂಬ ಬದಲಾವಣೆಗೆ ಸಮಯಾವಕಾಶ ಕೋರಿದ್ದು ಶೀಘ್ರವೇ ಪರಿಹರಿಸಲಾಗುವುದು.
ಗ್ರಾಮದಲ್ಲಿ ಆರೋಗ್ಯ ಸಮಸ್ಯೆಗಳ ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ವಿಷಯ ತಿಳಿಸಬೇಕು, ಶಿಕ್ಷಣದಿಂದ ಮಕ್ಕಳನ್ನು ವಂಚಿತರಾಗದಂತೆ ನಿಗಾವಹಿಸಲು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ಪ ಹೊರಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಮ ವಾಸ್ತವ್ಯೆದ ಮುಖಾಂತರ ನಿಮ್ಮ ಸಾರ್ವಜನಿಕ ಸಮಸ್ಯೆಗಳನ್ನು ಸಂಭಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಇದೊಂದು ಸುವರ್ಣವಕಾಶವಾಗಿದೆ ,ಇಡೀ ತಾಲೂಕು ಮಟ್ಟದ ಅಧಿಕಾರಿಗಳು ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ನೋಡಿ ಬಗೆಹರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ, ಶಾಲೆಗೆ ಸಂಭಂಧ ಪಟ್ಟಂತೆ ಎನೇ ಅಹವಾಲು ಇದ್ದರೂ ಪರೀಶೀಲಿಸಿ ಸರಿಪಡಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ನಂದೀಪುರದ ಮಹೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು.ಇಒ ಹಾಲಪ್ಪ ಪೂಜಾರ್, ಸಿಡಿಪಿಒ ಚನ್ನಪ್ಪ, ಕೃಷಿ ಅಧಿಕಾರಿ ಜೀವನ್ ಸಾಬ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ್ಪ,ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ರವಿನಾಯ್ಕ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಬ್ಯಾಸಿಗದೇರಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮಸ್ಥರು ಇದ್ದರು.
ಗ್ರಾಮ ವಾಸ್ತವ್ಯದಲ್ಲಿ ಕಂದಾಯ ಇಲಾಖೆಗೆ ಸಂಭಂಧಿಸಿದಂತೆ 20, ಪಂಚಾಯತ್ ರಾಜ್ ಇಲಾಖೆ 80, ಭೂಮಾಪನ ಇಲಾಖೆ 06,ಆಹಾರ ,ಕೃಷಿ ಶಿಕ್ಷಣ ಇಲಾಖೆಗೆ ಸಂಭಂಧಿಸಿದಂತೆ 01 ಅಹವಾಲು ಸ್ವೀಕಾರವಾಗಿದ್ದು ಮಾಸಿಕ,ವಿಧವಾ,ಸಂಧ್ಯಾ ಸುರಕ್ಷಾ ವೇತನದ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ.