ತಾಳಿಕೋಟಿ

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ತಾಳಿಕೋಟಿ ಜೆಡಿಎಸ್ ಘಟಕದ ಕಾರ್ಯಕರ್ತರ ಸಭೆ : ಕಾರ್ಯಕರ್ತರೆ ಪಕ್ಷದ ನಿಜವಾದ ಆಸ್ತಿ: ಡಾ. ಸೋಲಾಪೂರ

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ತಾಳಿಕೋಟಿ ಜೆಡಿಎಸ್ ಘಟಕದ ಕಾರ್ಯಕರ್ತರ ಸಭೆ : ಕಾರ್ಯಕರ್ತರೆ ಪಕ್ಷದ ನಿಜವಾದ ಆಸ್ತಿ: ಡಾ. ಸೋಲಾಪೂರ


ತಾಳಿಕೋಟಿ: ಜಾತ್ಯಾತೀತ ಜನತಾದಳ(ಜೆಡಿಎಸ್) ಪಕ್ಷದ ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿ. ಅವರ ತ್ಯಾಗ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಲೇ ಪಕ್ಷ ಹಾಗೂ ನಾಯಕರು ಬೆಳೆಯಲು ಸಾಧ್ಯ ಎಂದು ಮುದ್ದೇಬಿಹಾಳ ವಿಧಾನಸಭೆ ಪಕ್ಷದ ಉಸ್ತುವಾರಿ ಡಾ. ಸಿ ಎಸ್ ಸೋಲಾಪೂರ ತಿಳಿಸಿದರು. 

ಪಟ್ಟಣದ ಶ್ರೀ ಕಾಳಿಕಾದೇವಿ ಮಂಗಲ ಭವನದಲ್ಲಿ ಹಮ್ಮಿಕೊಂಡ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ತಾಳಿಕೋಟಿ ಘಟಕದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 

ಕಳೆದ ಒಂದು ಅವಧಿಯಿಂದ ಪಕ್ಷಕ್ಕೆ ಸ್ವಲ್ಪ ಮಟ್ಟದ ಹಿನ್ನಡೆಯಾಗಿರುವುದು ನಿಜವಾದರೂ ಪಕ್ಷಕ್ಕಾಗಿ ದುಡಿಯಲು ಸಿದ್ಧರಿರುವ ಸಾವಿರಾರು ಕಾರ್ಯಕರ್ತರು ಈ ಕ್ಷೇತ್ರದಲ್ಲಿದ್ದಾರೆ ಅವರನ್ನು ಒಗ್ಗೂಡಿಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ನಾಯಕರಿಲ್ಲವೆಂಬ ಚಿಂತೆ ಬೇಡ ನಾನು ನಿಮ್ಮ ಜೊತೆಯಲ್ಲಿದ್ದು ಹಗಲು ರಾತ್ರಿಯನ್ನದೇ ದುಡಿಯುತ್ತೇನೆ ನಾನೂ ಒಬ್ಬ ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದರೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿ ಕೆಲಸ ಮಾಡುತ್ತೇನೆ. 2023ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನಾವೆಲ್ಲರೂ ಕೂಡಿಕೊಂಡು ಪ್ರಯತ್ನಿಸೋಣ ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ವಿಜಯಪೂರ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಉಜ್ವಲಭವಿಷ್ಯ ಇದೆ. ಸಾವಿರಾರೂ ಕಾರ್ಯಕರ್ತರು ಇಂದು ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಸನ್ಮಾನ್ಯ ಕುಮಾರಣ್ಣನವರು ಮಾಡಿದ ಕೆಲಸಗಳೇ ನಮಗೆ ಶ್ರೀರಕ್ಷೇಯಾಗಲಿವೆ. ಮುದ್ದೇಬಿಹಾಳ ಮತಕ್ಷೇತ್ರಕ್ಕೆ ದೇಶಮುಖ ಅಮ್ಮನವರ ಕೊಡುಗೆ ಅಪಾರವಾಗಿದೆ ಇಂದು ತಾಳಿಕೋಟಿ ಪಟ್ಟಣದ ಜನರು ಕುಡಿಯುವ ಸಿಹೀನೀರು ಅವರ ಮಹತ್ವಾಕಾರ್ಯ, ಬಸ್‌ಡಿಪೊ ಹಾಗೂ ಬಡವರಿಗೆ ಹಂಚಿದ 700 ಆಶ್ರಯ ಮನೆಗಳನ್ನು ಜನ ಇನ್ನೂ ಮರೆತಿಲ್ಲ. ಇಂಥಹ ಮಹಾನ್ ನಾಯಕಿಯ ಮನೆತನದ ಹೆಸರಿನಲ್ಲಿ ಗೆಜೆಟ್‌ದಲ್ಲಿ ಇನ್ನೂ ದೇಶಮುಖ ಸರ್ಕಲ್, ಎಂದೇ ಇರುವ ಸರ್ಕಲ್‌ನ್ನು ಅವರಿಂದ ವಯಕ್ತಿಕವಾಗಿ ಲಾಭ ಪಡೆದವರೇ ಮುಂಚೂಣಿಯಲ್ಲಿ ನಿಂತು ಬಸವೇಶ್ವರ ಸರ್ಕಲ್ ಮಾಡಿಸಲು ಹೊರಟಿರುವುದು ನೋವಿನ ಸಂಗತಿಯಾಗಿದೆ. ಬಸವಣ್ಣ ನಮಗೆಲ್ಲರಿಗೂ ಗೌರವಪುರುಷ ಅದನ್ನು ಬೇರಡೆ ಮಾಡಬಹುದಾಗಿದೆ. ಅದಕ್ಕೆ ನಮ್ಮ ಬೆಂಬಲವೂ       



ಇದೆ. ನಮ್ಮ ಕಾರ್ಯಕರ್ತರು ಇಂದು ಎಚ್ಚೆತ್ತುಕೊಂಡು ಕೆಲಸಮಾಡುವ ಅಗತ್ಯ ಇದೆ. ನನಗೆ ಜಿಲ್ಲೆಯ ಜವಾಬ್ದಾರಿ  ಹೊರಿಸಲಾಗಿದ್ದರು ನಾನು ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಸದಾ ಸಿದ್ಧನಾಗಿದ್ದೇನೆ ಎಂದರು. 

ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರಾದ ಅಶೋಕಗೌಡ ಪಾಟೀಲ, ಕಾಶಿನಾಥ ಪರಂಪೂರ, ನದೀಂ ಕಡು, ರಾಜೇಸಾಬ ಚಿತ್ತರಗಿ ಹಿತೈಷಿಗಳಾದ ಜಾಕೀರ ಚಿತ್ತರಗಿ(ವಕೀಲರು) ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು. 

ವೇದಿಕೆಯಲ್ಲಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಬಿ. ಎಸ್‌. ಇಸಾಂಪೂರ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಮಾದೇವಿ ಪಾಟೀಲ, ನಗರ ಉಪಾದ್ಯಕ್ಷ ಶರಣಗೌಡ ಪಾಟೀಲ, ಮುದೇಬಿಹಾಳ ತಾಲೂಕಾ ಅಧ್ಯಕ್ಷ ನಿಂಗನಗೌಡ ಪಾಟೀಲ, ಪುರಸಭೆ ಸದಸ್ಯೆ ಸೈದಾಬಿ ಚಿತ್ತರಗಿ, ಶ್ರೀಶೈಲ ಬಿಕ್ಷಾವತಿಮಠ, ರಫೀಕ ಕೊಡಗಲಿ, ಕಾರ್ಯದರ್ಶಿ ವಿಠ್ಠಲಸಿಂಗ ಹಜೇರಿ ಇದ್ದರು. 


ಸುದ್ದಿ ಓದಿ