ಪ್ರತಿಭಾ ಪೋಷಕ ಕಾರ್ಯಕ್ರಮ
ಜಮಖಂಡಿ: 24: ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಪ್ರತಿವರ್ಷ ಪ್ರತಿಭಾವಂತ ಮಕ್ಕಳಿಗೆ ವಿನೂತನ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಗಳಿಗೆ ಅವಶ್ಯಕತೆವಿರುವ ಉಪಕರಣಗಳನ್ನು ನೀಡಯತ್ತಿದೆ. ಇಂತಹ ಸಂಸ್ಥೆಗಳು ಇನ್ನಷ್ಟು ಹೆಚ್ಚಿಗೆ ಬೆಳೆದು ಆರ್ಥಿಕವಾಗಿ ಹಿಂದುಳಿದ ಬಡ ಪ್ರತಿಭಾವಂತ ಮಕ್ಕಳಿಗೆ ಬೆನ್ನೆಲುಬುವಾಗಿ ನಿಲ್ಲಬೇಕೆಂದು ಬೆಳಗಾವಿ ಸಹ ನಿರ್ದೇಶಕ ಹಾಗೂ ಸಿಟಿಈ ಪ್ರಾಂಶುಪಾಲ ಎಂ.ಎಂ.ಸಿಂಧೂರ ಹೇಳಿದರು.
ನಗರದ ಕಡಪಟ್ಟಿ ಬಸವೇಶ್ವರ ಪ್ರೌಢಶಾಲೆ ಸಭಾಭವನದಲ್ಲಿ ಬೆಳಗಾವಿ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಿಂದ ಪ್ರತಿಭಾ ಪೋಷಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರ್ತಿಸಿ ಅವರು ಶೈಕ್ಷಣಿಕವಾಗಿ ಇನ್ನಷ್ಟು ಪ್ರತಿಭಾವಂತರಾಗಲು ಶ್ರಮಿಸಬೇಕು. ಪ್ರತಿಭಾ ಪೋಷಕದಂತಹ ಅನೇಕ ಕಾರ್ಯಕ್ರಮಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲ ಆಗಲಿದೆ. ವಿವಿಧ ಸಂಘ ಸಂಸ್ಥೆಗಳು ಶಿಕ್ಷಣ ಇಲಾಖೆಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಸಹಕಾರ ಮಾಡಬೇಕು. ಸಂಸ್ಥೆಗಳ ಸೇವೆ ನಿರಂತರವಾಗಿರಬೇಕು ಎಂದರು.
ಸಂಸ್ಥೆ ಸಂಸ್ಥಾಪಕ ಡಾ.ಶಶಿಕಾಂತ ಕುಲಗೋಡ ಮಾತನಾಡಿ, ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ದ ಗುರಿ ಮತ್ತು ಉದ್ದೇಶ ಕುರಿತು ಮಾಹಿತಿ ನೀಡಿದ ನಂತರ ಸಕರ್ಾರಿ ಶಾಲೆಗಳಿಗೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದರು.
ಬಿಈಓ ಅಶೋಕ ಬಸಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಡಾ.ರವೀಂದ್ರ ಗುರಣ್ಣವರ, ಸಿ.ಎಂ ನೇಮಗೌಡ, ಬಿಆರ್ಪಿ ವಿಜಯಕುಮಾರ ವಂದಾಲ, ಸಮೀನಾ ಕೌಸರ, ಕೀರ್ತಿ ಶಿವಕುಮಾರ ಸಹಿತ ಹಲವರು ಇದ್ದರು.
ಇದೇ ಸಂದರ್ಭದಲ್ಲಿ 119 ಮಕ್ಕಳಿಗೆ ಉತ್ತಮ ಗುಣಮಟ್ಟದ ಶಾಲಾ ಬ್ಯಾಗ ನೀಡಲಾಯಿತು. ಮುಖ್ಯಶಿಕ್ಷಕ ರವೀಂದ್ರ ತಳ್ಳಿ ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲವ್ಯಕ್ತಿ ಶಿವು ಯಾದವಾಡ ನಿರೂಪಿಸಿದರು. ಎಸ್.ಎಸ್.ಪೆಂಡಾರಿ ವಂದಿಸಿದರು.