ಮಧುಮೇಹ ಕುರಿತು ಮುಂಜಾಗೃತೆ ವಹಿಸಿ: ಡಾ. ಪಾಟೀಲ
ತಾಳಿಕೋಟಿ 14: ಮಧುಮೇಹ(ಸಕ್ಕರೆ ಕಾಯಿಲೆ) ರೋಗಿಗಳ ಸಂಖ್ಯೆ ನಮ್ಮ ದೇಶದಲ್ಲಿ ದಿನದಿಂದ ದಿನೇ ಹೆಚ್ಚಾಗುತ್ತಲಿದೆ ಒಂದು ವರದಿಯ ಪ್ರಕಾರ ಪ್ರತಿ ಐವರಲ್ಲಿ ಒಬ್ಬರಿಗೆ ಈ ರೋಗವು ಬಾಧಿಸುತ್ತಿದೆ. ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸುವ ಈ ರೋಗದ ಕುರಿತು ಸೂಕ್ತವಾದ ಮುಂಜಾಗೃತಾ ಕ್ರಮಗಳನ್ನು ವಹಿಸುವ ಅಗತ್ಯೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎಸ್. ಬಿ. ಪಾಟೀಲ ಹೇಳಿದರು.
ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪೂರ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯ ಎನ.ಸಿ.ಡಿ ಘಟಕ ವಿಜಯಪೂರ ಮತ್ತು ಸಮುದಾಯ ಆರೋಗ್ಯ ಕೇಂದ್ರ ತಾಳಿಕೋಟಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಾರಕ ರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಆ ರೋಗಕ್ಕೆ ಮದ್ದು ಕಂಡು ಹಿಡಿದ ಮಾಹಾನುಭಾವರ ಸಂಶೋಧನಾ ಶ್ರಮವನ್ನು ಸ್ಮರಿಸಲು ವಿಶೇಷ ದಿನಾಚರಣೆಗಳನ್ನು ಆರೋಗ್ಯ ಇಲಾಖೆಯಿಂದ ಆಚರಿಸಲಾಗುತ್ತಿದೆ ನವಂಬರ 14ರಂದು ಸಕ್ಕರೆ ರೋಗಕ್ಕೆ ಇನ್ಸೂಲಿನ್ ಕಂಡು ಹಿಡಿದ ಸಂಶೋಧಕ ಪೆಡ್ರಿಕ್ ಬಂಟಿಕ್ರನ್ನು ಸ್ಮರಿಸಲು ಹಾಗೂ ಈ ರೋಗದ ಕುರಿತು ಜಾಗೃತೆ ಮೂಡಿಸಲು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಎನ್.ಸಿ.ಡಿ ವೈದ್ಯಾಧಿಕಾರಿ ಲಿಂಗರಾಜ ದ್ಯಾಪೂರ, ಡಾ. ಆಕಾಶ ಸಜ್ಜನ, ಆರೋಗ್ಯ ನಿರಿಕ್ಷಣಾಧಿಕಾರಿ ಡಾ. ಬಿ. ಎಸ್. ಶಿವಯೋಗಿಮಠ, ಎನ್.ಸಿ.ಡಿ. ಆಪ್ತ ಸಮಾಲೋಚಕರಾದ ಸಿದ್ದಮ್ಮ ಬ್ಯಾಲ್ಯಾಳ, ಕಲ್ಪನಾ ಹೂಗಾರ, ಬಸವರಾಜ ಅಸ್ಕಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಕನ್ನೂರ, ಪ್ರಶಾಂತ ಜೋಳದ, ವಿಜಲಕ್ಷ್ಮೀ ಬಳವಾಡ, ಕಾಂಚನಾ ಪಾಟೀಲ, ರವಿ ಕಲ್ಮನಿ, ನಂದಬಸಯ್ಯ ಕೆ, ಜಾಂಗೀರ ಬಿಳಗಿ, ವಿಜಯಲಕ್ಷ್ಮೀ ಹಜೇರಿ, ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.