ಕಿಸಾನ್ ಸಮ್ಮಾನ್ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಲೋಕದರ್ಶನವರದಿ
ಕಂಪ್ಲಿ25: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ರೈತರ ಖಾತೆಗೆ ಕಿಸಾನ್ ಸಮ್ಮಾನ ಯೋಜನೆಡಿಯಲ್ಲಿ 2000 ಸಾವಿರ ರೂ. ರೈತರ ಖಾತೆಗೆ ಜಮ ಮಾಡಿದ್ದಾರೆ. ಇದರ ಸದುಪಯೋಗವನ್ನು ಪಡೆದು ಕೊಳ್ಳಬೆಕೇಂದು ಕಂಪ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಹೇಳಿದರು.
ಎಪಿಎಂಸಿ ಆವರಣದಲ್ಲಿ ಶುಕ್ರವಾರ ಸ್ಥಳಿಯ ಬಿಜೆಪಿ ಮಂಡಲದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಾಗೂ ಅಂತರಾಷ್ಟ್ರೀಯ ರೈತ ದಿನಾಚರಣೆ ಸಮಾರಂಭ ಜರುಗಿತು.
ಪ್ರತಿಯೊಂದು ಕಾಯ್ದೆಗಳು ರೈತರ ಪರವಾಗಿವೆ ರಾಜ್ಯ ಮತ್ತು ಕೇಂದ್ರ ಸಕರ್ಾರಗಳು ರೈತಪರ ಆಡಳಿತ ನಡೆಸುತ್ತಿದ್ದು, ರೈತರ ದಾರಿ ತಪ್ಪಿಸುವಲ್ಲಿ ವಿರೋಧ ಪಕ್ಷಗಳು ಪಾತ್ರವಹಿಸಿವೆ . ಯಾವ ರೈತರು ಇವರ ಮಾತಿಗೆ ಕಿವಿಗೋಡಬಾರದು ಎಂದು ರೈತರಲ್ಲಿ ಮನವಿ ಮಾಡಿದರು ರಾಜ್ಯದ 58ಲಕ್ಷ ರೈತರು ಸೇರಿದಂತೆ ದೇಶದ 9ಕೋಟಿ ರೈತರ ಖಾತೆಗೆ ತಲಾ 2000ರೂ.ಗಳಂತೆ ಜಮೆ ಮಾಡುವ ಮೂಲಕ ಪ್ರಧಾನಿ ಮೋದಿ ರೈತರ ಕಾಳಜಿ ಎಂದರು.ಬಿಜೆಪಿ ರೈತ ಮೋಚರ್ಾ ಜಿಲ್ಲಾ ಉಪಾಧ್ಯಕ್ಷ ಎನ್.ಚಂದ್ರಕಾಂತರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ನೂತನ ಮೂರು ಕೃಷಿ ತಿದ್ದುಪಡಿಗಳು ರೈತರ ಪರವಾಗಿವೆ ಎಂದರು. ರೈತ ದಿನಾಚರಣೆ ಪ್ರಯುಕ್ತ ಪ್ರಗತಿಪರ ರೈತರಾದ ರಾಘವರೆಡ್ಡಿ, ಪಾಂಡುರಂಗರೆಡ್ಡಿ, ಕುರುಬರ ಮಲ್ಲಪ್ಪ, ಕೆ.ವೈ.ತಿಪ್ಪೆಸ್ವಾಮಿ, ಕೋನೇರು ರಂಗಯ್ಯ, ವೆಂಕಟೇಶ್, ನರಸಮ್ಮ ಇವರನ್ನು ಗೌರವಿಸಲಾಯಿತು. ಬಿಜೆಪಿ ಪ್ರಮುಖರಾದ ಜಿ.ಸುಧಾಕರ, ಕೆ.ಹೂವಣ್ಣ, ಕೃಷ್ಣಂರಾಜು, ಪಿ.ಬ್ರಹ್ಮಯ್ಯ, ಬಿ.ಸಿದ್ದಪ್ಪ, ಕೊಡಿದಲರಾಜು, ಶಶಿಧರಗೌಡ, ಕೆ.ವಸಂತಕುಮಾರ್, ಹರಿಪ್ರಸಾದ್, ಸಂತೋಷ್, ವೈ.ಮಲ್ಲಿಕಾಜರ್ುನ, ಕೆ.ರಮೇಶ್, ಪುರಸಭೆ ಸದಸ್ಯರು, ನಾನಾ ಮೋರ್ಚಗಳ ಪದಾಧಿಕಾರಿಗಳಿದ್ದರು.