ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ: ದಡೇಸೂಗುರ
ಲೋಕದರ್ಶನ ವರದಿ
ಕನಕಗಿರಿ 21: ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಬಸವರಾಜ ದಡೇಸೂಗುರ ಹೇಳಿದರು.
ಅವರು ತಹಸಿಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ಬುದವಾರ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ 6ಯಂತ್ರಚಾಲಿತ ತ್ರಿಚಕ್ರವಾಹನ ವಿತರಣೆ ಕಾರ್ಯಾಕ್ರಮದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು ನಮ್ಮ ಸರ್ಕಾರ ಅಂಗವಿಕಲರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಅವರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.
ನಂತರ ಅಂಗವಿಕಲರ ರಾಜ್ಯ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ವಸ್ಕೆರ ಮಾತನಾಡಿ ಬಹಳಷ್ಟು ಜನ ಅಂಗವಿಕಲರಿದ್ದು ಮುಂದಿನ ದಿನಮಾನದಲ್ಲಿ ಕಡು ಬಡವರನ್ನು ಗುರುತಿಸಿ ಶಾಸಕರು ತಮ್ಮ ಅನುದಾನದಲ್ಲಿ ಯಂತ್ರಚಾಲಿತ ತ್ರಿಚಕ್ರವಾಹನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಧನಂಜಯ ಮಾಲಗಿತ್ತಿ, ಪ್ರಮುಖರಾದ ಮಾಂತೇಶ್ ಸಜ್ಜನ್,ವಾಗೇಶ ಹಿರೇಮಠ,ವೀರೇಶ ಸಾಲೋಣಿ, ಹಾಗೂ ವಿಕಲಚೇತನ ಪಲಾನುಭವಿಗಳು ಭಾಗವಹಿಸಿದ್ದರು.