ಸರ್ಕಾರದ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಿ
ಬಳ್ಳಾರಿ 04: ನಗರದ ವಿಜಯನಗರ ಕಾಲೋನಿಯ ನಲಂದ ಕಾಲೇಜಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬಳ್ಳಾರಿ ಜಿಲ್ಲಾ ವ್ಯವಸ್ಥಾಪಕ ಮೆಹಬೂಬ್ ಬಾಷಾರವರು ಮಾತನಾಡುತ್ತಾ ರಾಜ್ಯದ ಅಲ್ಪಸಂಖ್ಯಾತರ ಜನಾಂಗ ಅಭಿವೃದ್ಧಿಗಾಗಿ, ರಾಜ್ಯ ಸರ್ಕಾರ ಪ್ರತಿವರ್ಷದಂತೆ ಈ ವರ್ಷವೂ ಸಹ ಅನುಷ್ಠಾನಗೊಳಿಸುತ್ತಿರುವ ಸಾಲ ಯೋಜನೆಗಳನ್ನು ಅರ್ಹತೆ ಕುಟುಂಬದವರು ಸದುಪಯೋಗ ಪಡೆಯಲು , ಅರ್ಜಿ ಸಲ್ಲಿಸಬಹುದೆಂದು ಮನವಿ ಮಾಡಿದರು.
ಅಲ್ಪಸಂಖ್ಯಾತರು ಅಭಿವೃದ್ಧಿ ನಿಗಮದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸ್ಗಳು ಆನ್ಲೈನ್ ಮೂಲಕ ಶ್ರಮಶಕ್ತಿ, ಕ್ರಮಶಕ್ತಿ ವಿಶೇಷ ಮಹಿಳಾ ಯೋಜನೆ, ಅರಿವು ಯೋಜನೆ, ಶಿಕ್ಷಣಕ್ಕೆ ಸಾಲ ಸೌಲಭ್ಯಗಳು, ತರಬೇತಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಮತ್ತು ವಿದೇಶಿ ವ್ಯಾಸಂಗಕ್ಕೆ ಸದಾ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದರು.
ಅರ್ಜಿ ಗಳನ್ನು ಸಲ್ಲಿಸಲು ಕೊನೆಯ ಸೆ. 25 ತಾರೀಕು ನಿಗದಿ ಮಾಡಲಾಗಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಕಾಲೋನಿಯಲ್ಲಿ ನಲಂದ ಕಾಲೇಜು ಪಕ್ಕದಲ್ಲಿ ಇರುವ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಕಾರ್ಯಾ ಲಯವನ್ನು ನೇರವಾಗಿ ಆಗಲಿ, 08392--294370/-- ಮೊಬೈಲ್ ನಂಬರ್,8277944207. ಮುಖಾಂತರ ಸಾಲ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ನಿ ವಿ. ಮೆಹಬೂಬ್ ಬಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ