ಬಳ್ಳಾರಿ

ಕರ್ನಾಟಕ ಒನ್ ಸೇವಾ ಕೇಂದ್ರ ಸದುಪಯೋಗಿಸಿಕೊಳ್ಳಿ: ಜಿ.ಸೋಮಶೇಖರ ರೆಡ್ಡಿ

ಕರ್ನಾಟಕ ಒನ್ ಸೇವಾ ಕೇಂದ್ರ ಸದುಪಯೋಗಿಸಿಕೊಳ್ಳಿ: ಜಿ.ಸೋಮಶೇಖರ ರೆಡ್ಡಿ

ಬಳ್ಳಾರಿ 16: ನಗರದಲ್ಲಿ ಸಾರ್ವಜನಿಕರು ಕರ್ನಾಟಕ ಒನ್ ಸೇವಾ ಕೇಂದ್ರದ ಸದುಪಯೋಗ ಪಡೆದುಕೊಂಡು ಸರ್ಕಾರದ ವಿವಿಧ ಸೇವೆಗಳ ಲಾಭ ಪಡೆಯಬೇಕೆಂದು ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ಶಾಸಕರು ನಗರದ ಕಪ್ಪಗಲ್ ರಸ್ತೆಯ 22ನೇ ವಾರ್ಡನಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತಾಡಿದರು. ಕರ್ನಾಟಕ ಒನ್ ಕೇದ್ರದಲ್ಲಿ ವಿದ್ಯುತ್, ನೀರು, ಪೋನ್ಬಿಲ್, ವೃದ್ಯಾಪ ವೇತನ, ಈ ಸ್ಟ್ಯಾಂಪ್, ನಾಗರಿಕರ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ ಅಪ್ ಡೇಟ್, ಪೋಲಿಸ್ ಜಾಬ್ ವೆರಿಫಿಕೇಶನ, ಜಾತಿ ಆದಾಯ ಪ್ರಮಾಣ ಪತ್ರ, ಹೈದ್ರಾಬಾದ್ ಕರ್ನಾಟಕ ಪ್ರಮಾಣ ಪತ್ರ ಸೇರಿದಂತೆ ಸೇವಾ ಸಿಂಧು ಅಡಿಯಲ್ಲಿರುವ ಎಲ್ಲಾ ಸೇವೆಗಳು ಲಭ್ಯವಿರುತ್ತವೆ. ಸಾರ್ವಜನಿಕರು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ನಗರದ ತಹಸಿಲ್ದಾರ, ಹೆಚ್ ವಿಶ್ವನಾಥ, ಹನುಮಂತಪ್ಪ, ಮಲ್ಲನಗೌಡ, ವೇಮಣ್ಣ, ಇಆಅಖ ಅಧಿಕಾರಿಗಳಾದ ಮಂಜುನಾಥ ಪಾಟೇಲ್, ಮಂಜುನಾಥ,ಹಾಗೂ ಮಲ್ಲಿಕಾರ್ಜುನ ಕೆ, ಎಮ್ ಗೋನಾಳ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ