ತಡವಲಗಾ ಪಿಕೆಪಿಎಸ್ ಚುನಾವಣೆ ಶೇ 71.96ಅ ರಷ್ಟು ಮತದಾನ
ಇಂಡಿ 21: ಬಾರಿ ತ್ರೀವ ಕುತುಹಲ ಕೆರಳಿಸಿರುವ ತಡವಲಗಾ ಗ್ರಾಮದ ಪಿಕೆಪಿಎಸ್ ಚುನಾವಣೆ ಇಂದು ಬಾರಿ ಬೀಗಿ ಬಂದು ಬಸ್ತ ನೊಂದಿಗೆ ಶಾಂತಿಯುತವಾಗಿ ನಡೆಯಿತು.ಬೆಳಗ್ಗೆ ಒಂಬತ್ತು ಗಂಟೆಗೆ ಯಿಂದಲ್ಲೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು.ಈ ಬಾರಿ ಒಟ್ಟು 1648 ಮತದಾರರು ಇದ್ದು.ಅದರಲ್ಲಿ 1181 ಜನ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು.350 ರಂತೆ 3 ಹಾಗೂ 300 ರಂತೆ 2 ಹಾಗೂ 108 ಬೀನ್ ಸಾಲಗಾರ ಮತದಾರಗೆ 1 ರಂತೆ ಒಟ್ಟು 6 ಮತಗಟ್ಟೆಗನ್ನು ತೆಗೆಯಲಾಗಿದೆ ಹಾಗೂ ಮತದಾನದ ಕೊಣೆಯಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಒಟ್ಟಿನಲ್ಲಿ ಸುಸಜ್ಜಿತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಗುರುತಿಸಲ್ಪಟ್ಟ ಚುನಾವಣಾ ರಿಟರ್ನಂಗ್ ಅಧಿಕಾರಿ ವಿಜಯಕುಮಾರ ಪಿ ನಾಯಕ ತಿಳಿಸಿದರು.
ಈ ಬಾರಿ ಚುನಾವಣೆ ಶಾಂತಿಯುತವಾಗಿ ನಡೆಯಲು ಹೋರ್ತಿ ಪಿಎಸ್ಐ ಮೀನಾಕ್ಷೀ ವಿ ಕುಲಕರ್ಣಿ ಹಾಗೂ ಎಎಸ್ಐ ವಿ ಪಿ ಕಂಬಾರ ಬಿ ವಾಯ್ ಇಂಗಳೆ ಹಾಗೂ ಡಿ ಎಸ್ ಗಾಯಕವಾಡ ಎಮ್ ಎನ್ ಹೊನ್ನಕಟ್ಟೆ ಬಾಬು ಗಿರಿಸಾಗರ ಎಸ್ ಡಿ ವಸ್ತ್ರದ ಎಚ್ ಜಿ ಬಬಲಾದ ಪ್ರಕಾಶ್ ಹಕ್ಕೆ ಅಶೋಕ ನಾವದಗಿ ಎಸ್ ಎಲ್ ತೆನ್ನಹಳ್ಳಿ ಎಸ್ ಸಿ ಹದನೂರ ಅಶ್ವಿನಿ ಅಂಜುಟಗಿ ಪ್ರಶಾಂತ ರಾಠೋಡ ನೇತೃತ್ವದಲ್ಲಿ ಬಾರಿ ಪೋಲಿಸ್ ಬಂದು ಬಸ್ತ ಕೈಗೊಳ್ಳಲಾಯಿತು.ಈ ಬಾರಿ ಸಾಮಾನ್ಯ ಸ್ಥಾನಕ್ಕೆ 05 ಮಹಿಳಾ ಮೀಸಲು 02 ಹಿಂದುಳಿದ ವರ್ಗ ಅ ಮೀಸಲು 01 ಹಿಂದುಳಿದ ವರ್ಗ ಬ ಮೀಸಲು 01 ಪರಿಶಿಷ್ಟ ಜಾತಿ 01ಮತ್ತು ಪರಿಶಿಷ್ಟ ಪಂಗಡದ ಮೀಸಲು 01 ಹಾಗೂ ಬಿನ್ ಸಾಲಗಾರರ 1 ಸ್ಥಾನಗಳಿಗೆ ಒಟ್ಟು 12 ಸ್ಥಾನಗಳಿಗಾಗಿ ಒಟ್ಟು 23 ಜನ ಕಣದಲ್ಲಿ ಇದ್ದಾರೆ ಎಂದು ತಡವಲಗಾ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ರಫಿಕ್ ತಾಂಬೂಳಿ ತಿಳಿಸಿದ್ದರು.