ಆಧುನಿಕ ಶಿಕ್ಷಣ ತಂತ್ರಜ್ಞಾನಕ್ಕೆ ಟ್ಯಾಬ್ ಸಹಕಾರಿ : ಎಸ್.ಭೀಮಾನಾಯ್ಕ್
ಹಗರಿಬೊಮ್ಮನಹಳ್ಳಿ.ಜೂ.24 : ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣಕ್ಕೆ ಟ್ಯಾಬ್ ಸಹಕಾರಿಯಾಗಿದೆ ಎಂದು ಶಾಸಕ ಎಸ್.ಭಿಮಾನಾಯ್ಕ್ ಹೇಳಿದರು.
ಗುರುವಾರ ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಕೇತಿಕವಾಗಿ ಟ್ಯಾಬ್ ವಿತರಿಸುವ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಬಲತೆಗೆ ಟ್ಯಾಬ್ ಉಪಯುಕ್ತವಾಗಿದೆ,ಪ್ರಸಕ್ತ 2020-2021ನೇ ಸಾಲಿನ ಪ್ರಥಮ ವರ್ಷದ 961ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲಾಗುತ್ತದೆ ಎಂದರು.
ಬಳ್ಳಾರಿ ಅಖಂಡ ಜಿಲ್ಲೆಗೆ ತಾಲೂಕು ದ್ವಿತೀಯ ಸ್ಥಾನ ಹಾಗೂ ನೂತನ ವಿಜಯನಗರ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ಪ್ರಥಮ ಸ್ಥಾನವನ್ನು ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಶ್ಲಾಘಿಸಿದರು. ಕಾಲೇಜಿಗೆ ನೂತನ ಕಟ್ಟಡಗಳನ್ನು ನಿರ್ಮಾಣ ಮಾಡುವ ಕುರಿತು ಕ್ರಿಯಾಯೋಜನೆಯನ್ನು ಕೆಲವೇ ದಿನಗಳಲ್ಲಿ ರೂಪಿಸುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ನಂದೀಪುರ ಕ್ಷೇತ್ರದ ಮಹೇಶ್ವರ ಸ್ವಾಮಿ ಮಾತನಾಡಿ ಕ್ಷೇತ್ರದಲ್ಲಿ ಶಾಸಕ ಎಸ್.ಭಿಮಾನಾಯ್ಕ್ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಬಡವರಿಗೆ ಕರೋನಾ ಸಂಕಷ್ಟದಲ್ಲಿ ಅಹಾರ ಕಿಟ್ ನೀಡಿದ್ದು ಸ್ವಗಾತಾರ್ಹ ಕಾರ್ಯವಾಗಿದೆ,ಮಾಜಿ ಶಾಸಕರು ಕ್ಷೇತ್ರದ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವುದು ಓಳ್ಳೆಯ ಕಾರ್ಯವಲ್ಲ, ತಾಲೂಕಿನ ಆರೋಗ್ಯ ಇಲಾಖೆ ಸೇರಿದಂತೆ ಪೋಲೀಸ್ ವ್ಯೆವಸ್ಥೆ,ತಾಲೂಕಾಡಳಿತ ಉತ್ತಮ ಕಾರ್ಯ ಮಾಡುತ್ತಿದ್ದಾರೆ, ಇಂದಿನ ಆನ್ಲೈನ್ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ಕಾಲೇಜಿಗೂ,ಪಾಲಕರಿಗೂ,ತಲೂಕಿಗೂ ಉತ್ತಮ ಹೆಸರು ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಸತೀಶ್ ಪಾಟೀಲ್ ಮಾತನಾಡಿ ಕಾಲೇಜು ವಿದ್ಯಾರ್ಥಿಗಳು ಟ್ಯಾಬ್ ಶೈಕ್ಷಣಿಕ ಉದ್ದೇಶಕ್ಕೆ ಬಳಸಿ,ಇಂದಿನ ಶಿಕ್ಷಣ ವ್ಯವಸ್ಥೆ ಆಧುನಿಕ ತಂತ್ರಜ್ಞಾನದೊಂದಿಗೆ ಮುನ್ನೆಡೆಯುತ್ತಿದೆ ವಿದ್ಯಾರ್ಥಿಗಳು ಇದರ ಸೂಕ್ತ ಪ್ರಯೋಜನ ಪಡೆಯಬೇಕು ಎಂದರು.
ಈ ಸಂಧರ್ಬದಲ್ಲಿ ಹಾಲ್ದಾಳ್ ವಿಜಯಕುಮಾರ, ಕನ್ನಿಹಳ್ಳಿ ಚಂದ್ರ ಶೇಖರ್, ಬಾಲಕೃಷ್ಣ ಬಾಬು, ಡಿಶ್ ಮಂಜುನಾಥ್, ಪುರಸಭೆ ಸದಸ್ಯ ಅಲ್ಲಾಬಕ್ಷಿ, ಕಾಲೇಜು ಸಿಬ್ಬಂದಿ ಇದ್ದರು.