ಆದರ್ಶ ವಿದ್ಯಾಲಯದಲ್ಲಿ ಟಿ.ವಿ.ಕಳವು, ಕೇಸು ದಾಖಲು: ಆಂಜನೇಯುಲು
ಬಳ್ಳಾರಿ 20. ಬಳ್ಳಾರಿ ನಗರದ ಈದ್ಗಾ ರಸ್ತೆಯಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಟಿ.ವಿ ಕಳುವಾಗಿದೆ ಎಂದು ಕೌಲ್ಬಜಾರ್ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಕೋವಿಡ್ ಇರುವುದರಿಂದ ಶಾಲೆಗಳಿಗೆ ಸರಕಾರ ರಜೆ ಗೋಷಿಸಿದೆ. ಈಹಿನ್ನಲೆಯಲ್ಲಿ ಶಾಲೆಯಲ್ಲಿ ಯಾರು ಇರುವುದಿಲ್ಲ ಎಂದು ಗಮನಿಸಿದ,ಕದೀಮರು ಶಾಲೆಯಲ್ಲಿರುವ 42 ಇಂಚಸ್ ಟಿವಿಯನ್ನು ಕಳುವು ಮಾಡಿದ್ದಾರೆ. ಹಾಕಿರುವ ಬೀಗ ಹಾಗೇನೆ ಇದೇ ಆದರೇ ಕಳುವಾಗಿದೆ!!! ಇದೆಂತಹ ವಿಚಿತ್ರ ಅಲ್ಲವೇ ?? ಅಚ್ಚರಿ ಬೀಳುವ ವಿಷಯವೇ ಹೌದು. ಬೀಗವನ್ನು ಮುರಿಯದೇ ಅದು ಹೇಗೆ ಕಳುವಾಗಿದೆ ಎನ್ನುವ ವಿಷಯ ಪೋಲಿಸರನ್ನು ಕೂಡ ತಲೆ ಕೆಡಿಸಿಬಿಟ್ಟಿದೆ. ಅದೇ ರೂಮಿನಲ್ಲಿ ಕಂಪ್ಯೂಟರ್, ಜೆರಾಕ್ಸ್ ಮಿಷನ್ ಇದ್ದರೂ ಸಹಾ ಟಿವಿಯನ್ನು ಮಾತ್ರವೇ ಕಳುವು ಮಾಡಿದ್ದಾರೆಂದು ಪ್ರಿನ್ಸಿಪಲ್ ಆಚಿಜನೇಯುಲು ತಿಳಿಸಿದ್ದಾರೆ.ಕೌಲ್ಬಜಾರ್ ಪೋಲೀಸ್ ಅಧಿಕಾರಿಗಳು ಬಂದು ಪರೀಶೀಲಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾಪಂಚಾಯತ್ ಕಛೇರಿ ಎದುರು ಇರುವ ಆಜಾದ್ ಫ್ರೌಡ ಶಾಲೆಯಲ್ಲಿ ಕೂಡ ಕಳುವು ಮಾಡಿ ಕಂಪ್ಯೂಟರ್ ಮತ್ತಿತರ ಬೆಲೆ ಬಾಳುವ ವಸ್ತುವುಗಳನ್ನು ಧ್ವಂಸ ಮಾಡಿ ಹೋಗಿದ್ದಾರೆಂದು ವರದಿಯಾಗಿತ್ತು, ಇದು ಆಗಿ ಕೇವಲ 5-6 ದಿನಗಳಲ್ಲಿ ಮತ್ತೊಂದು ಪ್ರಕರಣ ದಾಖಲಾಗಿರುವುದು ಅಚ್ಚರಿಯಾಗಿದೆ. ಅಂತೂ ಇಂತೂ ಶಾಲೆಗಳನ್ನು ಕೋಟಿಗಟ್ಟಲೇ ಖರ್ಚುಮಾಡಿ ಸರಕಾರ ನಿರ್ಮಿಸಿ ಕೊಡುತ್ತೇ ಆದರೇ ಆಶಾಲೆಗಳಿಗೆ ವಾಚ್ಮ್ಯಾನ್ ಗಳನ್ನು ನಿಯಮಿಸುವುದಿಲ್ಲ. ಒಟ್ಟಾರೆ ಶಾಲೆಗಳಿಗೆ ಭದ್ರತೆ ಕಲ್ಪಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಹೇಳಬಹುದು.