ಅಗ್ನಿ ಅವಘಡ ಮುನ್ನೆಚ್ಚರಿಕೆ ಕ್ರಮಗಳ ತರಬೇತಿ
ಅಗ್ನಿಶಾಮಕ ಠಾಣೆ ಬಳ್ಳಾರಿಯಲ್ಲಿ ಪೌರರಕ್ಷಣಾ ಸದಸ್ಯರಿಗೆ ಅಗ್ನಿ ಅವಘಡ, ಅಗ್ನಿಶಮನ ಮತ್ತು ಅಗ್ನಿ ಅವಘಡ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಅಗ್ನಿ ಅನಾಹುತ ಸಂಭವಿಸಿದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿಯನ್ನು ಫೆ.28ರಂದು ಬೆಳಿಗ್ಗೆ 08ಗಂಟೆಗೆ ಅಗ್ನಿಶಾಮಕ ಸಿಬ್ಬಂದಿಯವರಿಂದ ನೀಡಲಾಯಿತು. ಜಿ.ಬಸವರಾಜ್, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿಗಳು ಬಳ್ಳಾರಿ, ಎನ್.ಎಸ್.ಲಕ್ಷ್ಮೀನರಸಿಂಹ, ಸಹಾಯಕ ಮುಖ್ಯವಾರ್ಡನ್, ಪೌರರಕ್ಷಣಾ ದಳ ಬಳ್ಳಾರಿ, ಪಿ.ಗೋವಿಂದರಾಜುಲು, ಡಿವಿಸನಲ್ ವಾರ್ಡನ್ ಬಳ್ಳಾರಿ, ಕಚೇರಿ ಸಿಬ್ಬಂದಿ ಹೊಸಪೇಟೆ ಜಡೆಪ್ಪ, ಮತ್ತು 30 ಜನ ಪೌರರಕ್ಷಣಾ ಸದಸ್ಯರು ಭಾಗವಹಿಸಿದ್ದರು.