ಸೀಪ್ಲೇನ್ ಸೇವೆಯ ಮಾರ್ಗ ಆರಿಸುವ ಪ್ರಕ್ರಿಯೆ ಆರಂಭಿಸಲಿರುವ ಸರ್ಕಾರ
ನವದೆಹಲಿ, ಜ 4 :ದೇಶಾದ್ಯಂತ ಕ್ಷಿಪ್ರ ಹಾಗೂ ಗೊಂದಲರಹಿತ ಸಂಚಾರಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಸಮುದ್ರವಿಮಾನ (ಸೀಪ್ಲೇನ್) ಸೇವೆಗಳಲ್ಲಿ ಮಾರ್ಗಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಸೇವೆಗಳನ್ನು ವಿಶೇಷ ಉದ್ದೇಶ ವಾಹನ (ಎಸ್ಪಿವಿ) ಅಡಿಯಲ್ಲಿ ವಿಮಾನಯಾನ ಕಾರ್ಯಾಚರಣೆಯ ಮೂಲಕ ಆರಂಭಿಸಲಾಗುವುದು. ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಾಗರಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್ (ಎಸ್ಡಿಸಿಎಲ್) ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ.ಸಪ್ಲೇನ್ ಕಾರ್ಯಾಚರಣೆಗಾಗಿ ಹಲವಾರು ತಾಣಗಳನ್ನು ಗುರುತಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಬ್ ಮತ್ತು ಸ್ಪೋಕ್ ಮಾದರಿಯಡಿಯಲ್ಲಿ ಪ್ರಸ್ತಾವಿತ ಮೂಲ-ಗಮ್ಯಸ್ಥಾನ ಜೋಡಿಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ, ಅಸ್ಸಾಂನ ಗುವಾಹಟಿ ನದಿತಟ ಮತ್ತು ಉಮ್ರಾನ್ಸೊ ಜಲಾಶಯ, ಯಮುನಾ ನದಿತಟ ,ದೆಹಲಿ (ಹಬ್ ) ಅಯೋಧ್ಯೆ, ತೆಹ್ರಿ, ಶ್ರೀನಗರ (ಉತ್ತರಾಖಂಡ್), ಚಂಡೀಗಢ, ಪಂಜಾಬ್ನ ಇತರ ಪ್ರವಾಸಿ ಸ್ಥಳಗಳು ಮತ್ತು ಹಿಮಾಚಲ ಪ್ರದೇಶ, ಮುಂಬೈ (ಹಬ್) ಶಿರಡಿ, ಲೋನವಾಲಾ, ಗಣಪತಿಪುಲೆಗೆ, ಸೂರತ್ (ಹಬ್) ದ್ವಾರಕಾ, ಮಾಂಡ್ವಿ & ಕಾಂಡ್ಲಾ, ಖಿಂಡ್ಸಿ ಅಣೆಕಟ್ಟು, ನಾಗ್ಪುರ ಮತ್ತು ಎರೈ ಅಣೆಕಟ್ಟು, ಚಂದ್ರಪುರ (ಮಹಾರಾಷ್ಟ್ರ) ಅಥವಾ ಆಪರೇಟರ್ ಸೂಚಿಸಿದ ಯಾವುದೇ ಹಬ್ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕಳೆದ ವರ್ಷ ಅ.31 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಹಮದಾಬಾದ್ನ ಕೆವಾಡಿಯಾ ಮತ್ತು ಸಬರಮತಿ ನದಿ ತಟದ ನಡುವೆ ಅಂತಹ ಒಂದು ಸೀಪ್ಲೇನ್ ಸೇವೆ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.ಕರಾವಳಿ ಪ್ರದೇಶಗಳಲ್ಲಿ ಅಥವಾ ಜಲಮೂಲಗಳ ಸಾಮೀಪ್ಯದಲ್ಲಿ ಇಂತಹ ಹೆಚ್ಚಿನ ಸೇವೆಗಳನ್ನು ನಡೆಸಲು, ಎಸ್ಡಿಸಿಎಲ್ ಆಸಕ್ತ ನಿಗದಿತ ವಿಮಾನಯಾನ ನಿರ್ವಾಹಕರೊಂದಿಗೆ ಸಂಯೋಜಿಸಲಾಗುವುದು.