ಮನರಂಜನೆ

ತಮಿಳು ಹಾಸ್ಯನಟ ವಿವೇಕ್ ಗೆ ಹೃದಯಾಘಾತ

ತಮಿಳು  ಹಾಸ್ಯನಟ ವಿವೇಕ್ ಗೆ ಹೃದಯಾಘಾತ

ಚೆನ್ನೈ, ಏ 16 :ತಮಿಳು ಚಿತ್ರರಂಗದಲ್ಲಿ ಹಾಸ್ಯನಟನಾಗಿ  ಗುರುತಿಸಿಕೊಂಡ ನಟ ವಿವೇಕ್ ಅವರಿಗೆ  ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರೆಸಿರುವಂತ ವೈದ್ಯರು, ಆಂಜಿಯೋಗ್ರಾಫ್ ಚಿಕಿತ್ಸೆಗೆ ಒಳಪಡಿಸಲಿದ್ದಾರೆ  ಎನ್ನಲಾಗುತ್ತಿದೆ. ನಟ ವಿವೇಕ್ ಗುರುವಾರ ಕೊರೋನ ಲಸಿಕೆ ಪಡೆದು ಬಳಿಕ ಮಾತನಾಡಿ, ಎಲ್ಲರೂ , ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಎಲ್ಲರು  ತಪ್ಪದೆ  ಮುಖಗವಸು  ಧರಿಸಬೇಕು,  ಕೈ ತೊಳೆಯುವುದು ಮತ್ತು ಸಾಕಷ್ಟು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು. ನಮ್ಮನ್ನು ರಕ್ಷಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ  ಲಸಿಕೆ. ಹೀಗಾಗಿ ಪ್ರತಿಯೊಬ್ಬರು  ಲಸಿಕೆ ಪಡೆಯಬೇಕು ಎಂದು  ಅವರು ಮನವಿ ಮಾಡಿದ್ದರು . 


ಸುದ್ದಿ ಓದಿ