ಬಳ್ಳಾರಿ

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ: ಗೋಡೆ ಬರಹ ಸ್ಪರ್ಧೆ

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ: ಗೋಡೆ ಬರಹ ಸ್ಪರ್ಧೆ

ಬಳ್ಳಾರಿ 19:  ಬಳ್ಳಾರಿ ಮಹಾನಗರ ಪಾಲಿಕೆಯು ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನವನ್ನು ಕೈಗೊಂಡಿದ್ದು, ಸಾರ್ವಜನಿಕರು ಸಹ ಈ ಅಭಿಯಾನದಲ್ಲಿ ಭಾಗವಹಿಸಿ ನಗರವನ್ನು ಸ್ವಚ್ಚತೆ ದೃಷ್ಟಿಯಿಂದ ಉತ್ತಮಗೊಳಿಸುವ ದೃಷ್ಟಿಯಿಂದ "ಗೋಡೆ ಬರಹ" ಸ್ಪರ್ಧೆ  ಏರ್ಪಡಿಸಿದೆ. ಆಸಕ್ತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಡೆ ಬರಹ ಸ್ಪರ್ಧೆಗೆ ಮಾ. 20ರಿಂದ 23ರ ವರೆಗೆ ಸ್ವಯಂ ನೋಂದಣಿ ಮಾಡಬಹುದಾಗಿದ್ದು, ನೋಂದಾಯಿಸಿದವರು ಮಾ. 28ರಂದು ಗಾಂಧಿನಗರದ ವಾಟರ್ ಬೂಸ್ಟರ್ ಪಾರ್ಕ್‍ನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನೋಂದಾಯಿತ ಸ್ಪರ್ಧಿಗರು ತಮಗೆ ಬೇಕಾದ ಬಣ್ಣವನ್ನು ತಾವೇ ತರಬೇಕಾಗಿದೆ. ಮಾ. 28ರಂದು  ವಿಜೇತರನ್ನು ಘೋಷಿಸಿ ಬಹುಮಾನವನ್ನು ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಗೋಡೆ ಬರಹದ ವಿಷಯಗಳು: ಸ್ವಚ್ಚ ಮತ್ತು ಹಸಿರು ಬಳ್ಳಾರಿ,  ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ,  ತ್ಯಾಜ್ಯ ವಿಭಜನೆ, ಮಲವಿಸರ್ಜನೆ ಮುಕ್ತ (ಒಡಿಎಫ್) ನಗರ ವಿಷಯಗಳ ಬಗ್ಗೆ ಗೋಡೆ ಬರಹವನ್ನು ಬಿಡಿಸಬೇಕು.

ಮೊದಲ ಬಹುಮಾನ   6 ಸಾವಿರ ರೂ. ದ್ವಿತೀಯ ಬಹುಮಾನ   4 ಸಾವಿರ ರೂಗಳಾಗಿರುತ್ತದೆ.    12 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸ್ಪರ್ಧಿಸಬಹುದಾಗಿದೆ. ಮತ್ತು  ಗುರುತಿನ ಚೀಟಿ ತರಬೇಕು, ಸ್ಪರ್ಧಿಗಳು ತಮ್ಮದೇ ಆದ ಪೇಂಟ್ ಟೂಲ್ ಅನ್ನು ಅವರೇ  ತರಬೇಕು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವವರು ಮಾ.23 ರೊಳಗೆ ಗೋಡೆ ಬರಹದ ವಿಷಯ ಮತ್ತು  ವಿಸ್ತರಿಸುವ ವರ್ಣಚಿತ್ರದ ಸಣ್ಣ ವಿವರಣೆಯನ್ನು 1 ಪ್ಯಾರಾ ಅಥವಾ  100 ಪದಗಳಿಗೆ ಮೀರದಂತೆ ಇಮೇಲ್ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8660863752, 6362363259, 7352308139 ಗೆ ಸಂಪರ್ಕಿಸಲು ಕೋರಿದೆ.

ಸುದ್ದಿ ಓದಿ