ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ
ಬಳ್ಳಾರಿ 10: ಮಹಾನಗರ ಪಾಲಿಕೆ, ಬಳ್ಳಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ನೊಪಾಸನಾ ಇವರ ಸಂಯುಕ್ತಾಶ್ರಯದಲ್ಲಿ ಮಾ. 08ರಂದು ಸಂಜೆ 05ಗಂಟೆಗೆ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ತ ಸ್ವಚ್ಛ ಬಳ್ಳಾರಿ ಮೇಳದಲ್ಲಿ ಹಸಿ ಕಸ ಮತ್ತು ವಣ ಕಸ ಕಾಂಪೋಸ್ಟಿಂಗ್ ಬಗ್ಗೆ ಕಾರ್ಯಕ್ರಮವನ್ನು ನಡೆಸಲಾಯಿತು.
ಬಳ್ಳಾರಿ ಒಂದು ಸ್ವಚ್ಛ ಮತ್ತು ಸುಂದರ ನಗರವನ್ನು ಮಾಡಿಸುವ ಕನಸಲ್ಲಿ ಈ ದಿನ ಹಸಿ ಕಸ ಮತ್ತು ವಣ ಕಸ ಕಾಂಪೋಸ್ಟಿಂಗ್ ಮಾಡುವುದರಿಂದ ಅನುಕುಲವಾಗುತ್ತದೆ ಎಂದು ಬಿಎಸ್ಎನ್ಎಲ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಆಟದ ವಾತಾವರಣವನ್ನು ಏರ್ಪಡಿಸಲಾಯಿತು. ಮಹಿಳೆಯರಿಗೆ ಹಸಿ ಕಸ ಮತ್ತು ವಣ ಕಸ ಕಾಂಪೋಸಿಂಗ್ ಮಾಡುವ ವಿಧಾನವನ್ನು ತೋರಿಸಲಾಯಿತು. ಈ ಕಾಂಪೋಸಿಂಗ್ವನ್ನು ತಯಾರುವ ಗೊಬ್ಬರವನ್ನು ತಮ್ಮ ತೋಟಕ್ಕೆ ಉಪಯೋಗಿಸಬಹುದುವೆಂದು ತಿಳಿಸಿವೆಂದು ತಿಳಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರೀತಿ ಗಿಲೋಟ್, ಆಯುಕ್ತರು, ಬಳ್ಳಾರಿ ಮಹಾನಗರ ಪಾಲಿಕೆ ಇವರು ಬಿಎಸ್ಎನ್ಎಲ್ ಕಾಲೋನಿಯ ಜನತೆಗೆ ಸ್ವಚ್ಛತಾ ಬಗ್ಗೆ ಅರಿವು ಮೂಡಿಸಿ ತಮ್ಮ ಸುತ್ತಮುತ್ತಲಿನ ತೋಟ ಮತ್ತು ಪ್ರದೇಶದ ಸ್ವಚ್ಛತೆಯನ್ನು ಕಾಪಾಡಬೇಕೆಂದು ಕೋರಿದ್ದರು. ಲೊಕೇಶ್ ನಾಯ್ಕ್, ಡಿ.ಜಿ.ಎಂ, ಬಿ.ಎಸ್.ಎನ್.ಎಲ್, ಬಳ್ಳಾರಿ. ಡಾ. ಹನುಮಂತಪ್ಪ, ಆರೋಗ್ಯ ಅಧಿಕಾರಿಗಳು, ಮಹಾನಗರ ಪಾಲಿಕೆ, ಎಂ.ಎ.ಷಕೀಬ್, ಕಾಯಾದರ್ಶಿಗಳು, ಐ.ಆರ.ಸಿ.ಎಸ್ ಮತ್ತು ನೋಡಲ್ ಅಧಿಕಾರಿ (ಸ್ವಚ್ಛ ಬಳ್ಳಾರಿ ಅಭಿಯಾನ), ಮತ್ತು ನಿರ್ದೇಶಕರು, ನೊಪಾಸನಾ, ಬಳ್ಳಾರಿ. ಉಪಸ್ಥಿತರಿದ್ದರು.