ಬಳ್ಳಾರಿ

ಸ್ವಾತಂತ್ರ್ಯದ ಮುನ್ನುಡಿ ಬಲಿದಾನದ ಕಿಡಿ ಕಾರ್ಯಕ್ರಮ

ಸ್ವಾತಂತ್ರ್ಯದ ಮುನ್ನುಡಿ ಬಲಿದಾನದ ಕಿಡಿ ಕಾರ್ಯಕ್ರಮ

ಬಳ್ಳಾರಿ 26: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಳ್ಳಾರಿ ನಗರ ಶಾಖೆ ವತಿಯಿಂದ 23ನೇ, ಮಾರ್ಚ್-2021 ರಂದು ಭಗತ್‍ಸಿಂಗ್ ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ದಿ. 26ರಂದು ನಗರದ ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ (ಆರ್.ವೈ.ಎಂ.ಇ.ಸಿ) ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಮುನ್ನುಡಿ ಬಲಿದಾನದ ಕಿಡಿ’ ಎಂಬ ಕಾರ್ಯಕ್ರಮ ಮಾಡಲಾಯಿತು. 

ಎ.ಬಿ.ವಿ.ಪಿಯ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣರವರು ಮಾತನಾಡಿ ನಾವೆಲ್ಲರೂ ಒಂದು ವಸುದೇವ ಕುಟುಂಬ, ನಾವೆಲ್ಲರೂಸಮಾನರು ಎಂದು ಹೇಳುತ್ತಾ, ಭಗತ್‍ಸಿಂಗ್ ರವರು 12ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹೋರಾಡುತ್ತೇನೆ ಮತ್ತು ದೇಶಕ್ಕಾಗಿ ನನ್ನ ಜೀವವನ್ನು ಮುಡಿಪಾಗಿಡುತ್ತೇನೆ ಎಂದು ಆಣೆ ಮಾಡಿದವರು. ಭಗತ್‍ಸಿಂಗ್ ತಂದೆ ಕಿಸಾನ್‍ಸಿಂಗ್ ಹಾಗೂ ಅವರ ತಾತನವರು ದೇಶಕ್ಕೋಸ್ಕರ ಹೋರಾಡಿದರು. ಅವರನ್ನು ಜೈಲಿನಲ್ಲಿ ಹಾಕಿದರು. ಭಗತ್‍ಸಿಂಗ್ ಹುಟ್ಟಿದ ನಂತರ ಅವರನ್ನು ಬಿಡುಗಡೆ ಮಾಡಿದರು. ಆಗ ಭಗತ್‍ಸಿಂಗ್ ರವರು ನಾನು ಬದುಕಿದರೇ ದೇಶಕ್ಕೋಸ್ಕರ ಬದುಕುತ್ತೇನೆ ಎಂದು ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿದರು ಎಂದರು.

ಆದರೆ ಬ್ರಿಟೀಷ್ ಸರ್ಕಾರ ಭಗತ್‍ಸಿಂಗ್‍ರನ್ನು 23ರಂದೇ ಸಂಜೆ ನೇಣುಗಂಬಕ್ಕೆ ಏರಿಸಿದರು. ಇಂಕ್ವಿಲಾಬ್ ಜಿಂದಾಬಾದ್, ಸ್ವತಂತ್ರ್ಯ ಮುನ್ನುಡಿ ಭಾರತದ ಕಿಡಿ ಎಂದು ಹೇಳಿ ಪ್ರಾಣ ಬಿಟ್ಟರು, ಎಂದು ಹೇಳಿದರು. 

ಪ್ರಾಂತ ಸಹಕಾರ್ಯವಾಹ ಪ್ರಸನ್ನಜೀ, ಆರ್.ವೈ.ಎಂ.ಸಿ. ಕಾಲೇಜಿನ ಪ್ರಾಂಶುಪಾಲರಾದ ಹನುಮಂತರೆಡ್ಡಿ, ವಿ.ಎಸ್.ಕೆ.ಯು.ವಿ. ಸಿಂಡಿಕೇಟ್ ಸದಸ್ಯರಾದ ಮಲ್ಲಿಕಾರ್ಜುನ ಮರ್ಚೆಡ್, ಎಬಿವಿಪಿಯ ವಿಭಾಗ ವಿದ್ಯಾರ್ಥಿನಿ ಪ್ರಮುಖರಾದ ಸೃಷ್ಟಿ, ನೇಹಾ, ನಿಸರ್ಗಾ, ಪೂರ್ವಿಕಾ, ಸುಶ್ಮಿತಾ, ಅಪೂರ್ವ, ಮೇಘನಾ, ವಿನಯ್, ಪವನ್, ಯೋಗೇಶ್, ಸಚಿಚಿತಾ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ