ಬಳ್ಳಾರಿ

ಬಳ್ಳಾರಿಯಲ್ಲಿ ’ಸ್ವರಗಳ ಸಂಗಮ - ಸ್ನೇಹದ ಸಂಭ್ರಮ’ ಸಂಗೀತ ಕಾರ್ಯಕ್ರಮ ; ಪ್ರೇಕ್ಷಕರ ಮನಗೆದ್ದ ಗಾಯಕರು

ಬಳ್ಳಾರಿಯಲ್ಲಿ ’ಸ್ವರಗಳ ಸಂಗಮ - ಸ್ನೇಹದ ಸಂಭ್ರಮ’ ಸಂಗೀತ ಕಾರ್ಯಕ್ರಮ ; ಪ್ರೇಕ್ಷಕರ ಮನಗೆದ್ದ  ಗಾಯಕರು

           ಬಳ್ಳಾರಿ, ನ.23 : ನಗರದ ’ರಾಕ್ ವಿಲ್ಲಾ’ ಫಂಕ್ಷನ್ ಹಾಲ್ನಲ್ಲಿ ಭಾನುವಾರ ’ಸ್ವರಗಳ ಸಂಗಮ’ ಸಂಗೀತ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು  ಈ ಕಾರ್ಯಕ್ರಮದಲ್ಲಿ ಅನೇಕ ಉದಯೋನ್ಮುಖ ಗಾಯಕರು ಭಾಗವಹಿಸಿ, ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ, ಗಾಯಕರು ಕನ್ನಡ ಚಲನಚಿತ್ರಗಳ ವೈವಿಧ್ಯಮಯ ಹಾಗೂ ಮಧುರ ಗೀತೆಗಳನ್ನು ಏಕವ್ಯಕ್ತಿ ಮತ್ತು ಯುಗಳ ಗಾಯನದ ಮೂಲಕ ಪ್ರಸ್ತುತಪಡಿಸಿ, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.

            ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ’ಕರೋಕೆ’ ಮಂಜುನಾಥ್ ಆರ್‌.ಐ., ಸಂಗೀತದಲ್ಲಿರುವ ಮಾಧುರ್ಯಕ್ಕೆ ಬೇರೆ ಯಾವುದೇ ಕ್ಷೇತ್ರವೂ ಸಾಟಿಯಿಲ್ಲ ಗಾನಕೆ ಸೋಲುವ ಮನಸೇ ಇಲ್ಲ ಎನ್ನುವಂತೆ ಹಲವು ಮನೋರೋಗಗಳನ್ನು ಸಹ ಸಂಗೀತದಿಂದ ಗುಣಪಡಿಸಬಹುದು  ಎಂದು ಅಭಿಪ್ರಾಯಪಟ್ಟರು.

             ಉದಯೋನ್ಮುಖ ಗಾಯಕರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು, ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ’ಸ್ವರಗಳ ಸಂಗಮ’ ವೇದಿಕೆಯನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು. ಗಾಯಕರಿಗೆ ಬೆಂಬಲ ನೀಡಲು ಈ ವೇದಿಕೆ ಸದಾ ಸಿದ್ಧವಾಗಿದೆ ಎಂದು ತಿಳಿಸಿದ ಅವರು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಹ್ವಾನಿಸಿದರು. ಈ ಕಾರ್ಯಕ್ರಮದಲ್ಲಿ ಮಂಜುನಾಥ್, ಶ್ರೀಕಾಂತ್, ಉಷಾ, ಶಿಲ್ಪಾ, ಮಧುಮತಿ, ಶಿವರಾಜ್, ಬಸವರಾಜ್,

             ಅನಿತಾ, ಓಬಣ್ಣ, ಗಿರಿಜಾ, ನಟರಾಜ್, ತಿಪ್ಪೇಸ್ವಾಮಿ, ಲಕ್ಷ್ಮಿ, ಸೋಮಶೇಖರ್, ರಾಜು ಇಸ್ರಾನಿ, ಭಾಗ್ಯ, ತಿರುಮಲ, ಪರಿಮಳ, ಮೂರ್ತಿ ಹಾಗೂ ಇತರರು ಭಾಗವಹಿಸಿದ್ದರು. ಇವರು ಕನ್ನಡ ಚಿತ್ರರಂಗದ ಅತ್ಯುತ್ತಮ ಮತ್ತು ಮಧುರ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿದರು.ಕಾರ್ಯಕ್ರಮದಲ್ಲಿ  ಭಾಗವಹಿಸಿದ ಗಾಯಕರನ್ನು ಸನ್ಮಾನಿಸಿ,  ಸ್ಮರಣಿಕೆಗಳನ್ನು ನೀಡಿ ಗೌರವಿಸಿಲಾಯಿತು. 


ಸುದ್ದಿ ಓದಿ