ಗೋಕಾಕ್

ಸ್ವರ ಸಂಗೀತ ಗೀತ ನಮನ ಕಾರ್ಯಕ್ರಮ

ಸ್ವರ ಸಂಗೀತ ಗೀತ ನಮನ ಕಾರ್ಯಕ್ರಮ

ಘಟಪ್ರಭಾ 30:ಕನರ್ಾಟಕ ರತ್ನ,ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಘಟಪ್ರಭಾ ಪಟ್ಟಣದ ಗಾಂಧಿ ನಗರದಲ್ಲಿ ಸ್ವರ ಸಂಗೀತ ಗೀತ ನಮನ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಎಲ್ಲರೂ ಕ್ಯಾಂಡೆಲ್ ಹಚ್ಚಿ ಮೌನಚಾರಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.ನಂತರ ಪುನೀತ್ ನಟಿಸಿರುವ ಚಿತ್ರದ ಹಾಡುಗಳಿಗೆ ನೃತ್ಯ ಹಾಗೂ ಗಾಯನ ಸ್ಪರ್ಧೆ  ನಡೆಯಿತು.ವೇದಿಕೆ ಮೇಲೆ ಇದ್ದ ಗಣ್ಯರು ಪುನೀತ್ ಅವರ ವ್ಯಕ್ತಿತ್ವ,ಅವರ ಸಾಮಾಜಿಕ ಕೆಲಸಗಳ ಕಳಕಳಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ನಾವೆಲ್ಲರೂ ಅವರ ಹಾದಿಯಲ್ಲಿ ಸಾಗೋಣ ಎಂದು ಕರೆ ನೀಡಿದರು.      

      ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದ್ಯಸ ಸುಧೀರ ಜೋಡಟ್ಟಿ, ಕನರ್ಾಟಕ ರಕ್ಷಣಾ ವೇದಿಕೆ(ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕನ್ನಡ ಸೇನೆ ಗೋಕಾಕ ತಾಲೂಕ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪುಟ್ಟು ಖಾನಾಪುರೆ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ದೊಡ್ಡಮನಿ, ಭಾರತೀಯ ಕೃಷಿಕ ಸಮಾಜದ  ಉಪಾಧ್ಯಕ್ಷ ಕೋಟ್ರೇಶ್ ಪಟ್ಟಣಶೆಟ್ಟೆ, ನಾಗರಾಜ ಜಂಬ್ರಿ, ಶಿಕ್ಷಕಿ ಚಂದ್ರಕಲಾ ಪತ್ತಾರ, ನಿವೇದಿತಾ ಕಾಳೆ, ಪುಷ್ಪಾ ಅರಳಿ ಸೇರಿದಂತೆ ಅನೇಕರು ಉಪಸ್ಥಿತಿದ್ದರು.ಈ ಕಾರ್ಯಕ್ರಮ ಆಯೋಜಿಸಿದ ಸಮಾಜ ಸೇವಕಿ ಸವಿತಾ ಪಟ್ಟಣಶೆಟ್ಟೆ ಅವರು ನಿರೂಪಣೆ ಮಾಡಿದ್ದರು 

ಸುದ್ದಿ ಓದಿ