ಬಳ್ಳಾರಿ

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಿರುಚಿತ್ರ ಬಿಡುಗಡೆ

ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಕಿರುಚಿತ್ರ ಬಿಡುಗಡೆ

ಬಳ್ಳಾರಿ 05: ಬಳ್ಳಾರಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗಿರುವ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ(ನಗರ ಘನತೆಗಾಗಿ ಮತ್ತು ಆರೋಗ್ಯಕ್ಕಾಗಿ ಸ್ವಚ್ಛತೆಗೆ ಸಹಕರಿಸೋಣ) ಕಿರುಚಿತ್ರವನ್ನು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮತ್ತು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬಿಡುಗಡೆ ಮಾಡಿದರು. 

ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳ್ಳಾರಿ ನಗರ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ವಹಿಸುತ್ತಿರುವ ಪರಿಶ್ರಮ ಮತ್ತು ನಗರದ ನಾಗರಿಕರ ಜವಾಬ್ದಾರಿ, ಹಾಕಿಕೊಂಡಿರುವ ವಿವಿಧ ಯೋಜನೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಸೇರಿದಂತೆ ಸ್ವಚ್ಛ ಮತ್ತು ಸ್ವಸ್ಥ ಸಂಬಂಧಿತ ವಿವಿಧ ವಿಷಯಗಳನ್ನು ಈ ಕಿರುಚಿತ್ರ ಒಳಗೊಂಡಿದೆ. 

ಈ ಕಿರುಚಿತ್ರವು ಘನತ್ಯಾಜ್ಯ ಸಂಗ್ರಹಣೆ, ನಗರದ ಸ್ವಚ್ಛತೆಗೆ ಕೈಗೊಂಡ ಕ್ರಮಗಳು, ಪ್ರತಿದಿನ ಉತ್ಪತ್ತಿಯಾಗುವ ಕಸದ ವಿಲೇವಾರಿ, ಪೌರಕಾರ್ಮಿಕರ ದಿನಿತ್ಯದ ಜೀವನ, ಅವರು ನಿರ್ವಹಿಸುವ ಕಾರ್ಯದ ಕುರಿತು ಪರಿಚಯಿಸಿತು. 

ಕಿರುಚಿತ್ರ ಬಿಡುಗಡೆ ಮಾಡಿದ ಶಾಸಕದ್ವಯರು ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪ್ರೀತಿ ಗೆಹ್ಲೋಟ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಮತ್ತಿತರರು ಇದ್ದರು. 


ಸುದ್ದಿ ಓದಿ