ನಗರಸಭೆ ಅಧ್ಯಕ್ಷರಾಗಿ ಸುಶೀಲಮ್ಮ ವೆಂಕಟರಾಮರೆಡ್ಡಿ ಆಯ್ಕೆ
ಲೋಕದರ್ಶನ ವರದಿ
ಸಿರುಗುಪ್ಪ 27: ನಗರಸಭೆ ಅಧ್ಯಕ್ಷರಾಗಿ ಕೆ ಸುಶೀಲಮ್ಮ ಕೆ ವೆಂಕಟರಾಮರೆಡ್ಡಿ ಅವರು ಆಯ್ಕೆಯಾಗಿದ್ದಕ್ಕೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ನಗರದ ಈದ್ಗಾ ಮತ್ತು ಖಬರಸ್ಥಾನ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಜಿ ಹಂಡಿ ಹುಸೇನ್ ಬಾಷಾ ಮುಖಂಡರಾದ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಖತೀಬ್ ಜಹಿರುದ್ದಿನ್ ಬಾಬು ಅಬ್ದುಲ್ ನಬಿ ಮೊಹಮ್ಮದ್ ಕಲೀಲ್ ಬಿ.ಕೆ.ಅಲ್ಲಾಭಕ್ಷಿ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮಹಮ್ಮದ್ ನೌಶಾದ್ ಅಲಿ ಮೊದಲಾದ ಗಣ್ಯರು ಅಭಿನಂದಿಸಿದ್ದಾರೆ.