ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಪೂಜೆ ಸಲ್ಲಿಕೆ
ತಿರುಮಲ,
ಡಿಸೆಂಬರ್ 26: ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಶನಿವಾರ
ವೈಕುಂಠ ದ್ವಾರಶಿಯ ಶುಭದಿನದಂದು ವೈಕುಂಠ ದ್ವಾರ ದರ್ಶನ ಪಡೆದರು.
ಇದಕ್ಕೂ ಮುನ್ನ, ನ್ಯಾಯಾಧೀಶರನ್ನು ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಡಾ.ಜವಾಹರ್ ರೆಡ್ಡಿ ದೇವಾಲಯದ ಮುಖ್ಯ ದ್ವಾರದಲ್ಲಿ ಬರಮಾಡಿಕೊಂಡರು.
ನಂತರ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದರು. ಆ ಬಳಿಕ ವೇದ ವಿದ್ವಾಂಸರ ತಂಡ ರಂಗನಾಯಕುಲ ಮಂಟಪದಲ್ಲಿ ಅವರಿಗೆ ವೇದಾಶೀರ್ವಚನ ಪಠಿಸಿದರು.
ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಾಧೀಶರಿಗೆ ಡಾ ಜವಾಹರ್ ರೆಡ್ಡಿ ಅವರು ಪ್ರಸಾದ, ದೇವರ ಫೋಟೋ ನೀಡಿದರು.