ಹೋರಾಟಗಾರರ ಪುತ್ಥಳಿ ಪ್ರತಿಷ್ಠಾಪನೆಗೆ ಬೆಂಬಲ
ಶಿಗ್ಗಾವಿ 31: ಪಟ್ಟಣದ ಹಳೆ ಬಸ ನಿಲ್ದಾಣ ಜನತಾ ಬಜಾರ ಎದುರಿಗೆ ಮೂರ್ತಿ ಪ್ರತಿಷ್ಠಾಪನೆಗೆ ನ್ಯಾಯವಾದಿ ಹನುಮಂತ ಬಂಡಿವಡ್ಡರ ಹಾಗೂ ಸಮಾಜ ಸೇವಕಿ ಬಾಬಕ್ಕಾ ಬಳ್ಳಾರಿ ನೆಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕೆಂದು ಬಹುದಿನಗಳ ಹೋರಾಟ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ತಾಲೂಕ ಕೇಂದ್ರಗಳಲ್ಲಿ ಅಂಬೇಡ್ಕರವರ ಮೂರ್ತಿಗಳಿವೆ ಆದರೆ ಶಿಗ್ಗಾವಿಯಲ್ಲಿ ಮಾತ್ರವಿಲ್ಲ. ಇದನ್ನು ಹೋರಾಟ ಮೂಲಕ ಮೂರ್ತಿ ಪ್ರತಿಷ್ಠಾಪನೆ ಆಗ್ರಹಿಸುವುದು ದುರದೃಷ್ಟಕರ ಅಂತಹ ಮಹಾನ ವ್ಯಕ್ತಿಯ ಮೂರ್ತಿಯನ್ನು ಸರಕಾರವೇ ಪ್ರತಿಷ್ಠಾಪನೆ ಮಾಡಬೇಕಾಗಿತ್ತು ಎಂದು ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರೀಫ ಮಾಕಪ್ಪನವರ, ವಿಶಾಲ ಮರಾಠೆ, ಸುನೀಲ ಬಂಡಿವಡ್ಡರ, ಬಸನಗೌಡ ಸಣ್ಣಗೌಡ್ರ, ಅಶೋಕ ಜವಳಗಟ್ಟಿ, ನವೀನ ಬಂಡಿವಡ್ಡರ, ಬಸವರಾಜ ಗುಂಡಣ್ಣವರ, ಉಪಸ್ಥಿತರಿದ್ದರು.