ಇಂಡಿ

ಹಾಸಿಂಪೀರ ವಾಲೀಕಾರಗೆ ಬೆಂಬಲಿಸಿ: ಬಗಲಿ

ಹಾಸಿಂಪೀರ ವಾಲೀಕಾರಗೆ ಬೆಂಬಲಿಸಿ:  ಬಗಲಿ
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹಾಸಿಂಪೀರ ವಾಲೀಕಾರ ಅವರ ಪರ ಕಾರ್ಯಕರ್ತರು ಮತಯಾಚನೆ ಮ

ಇಂಡಿ: ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಜ್ಞಾನ ಮತ್ತು ಕಾಳಜಿ  ಹೊಂದಿದ ಹಾಸಿಂಪೀರ ವಾಲೀಕಾರ ಅವರಿಗೆ ಬೆಂಬಲಿಸಿ ಎಂದು  ಯುವ ಕಾಂಗ್ರೆಸ್ ಅಧ್ಯಕ್ಷ ಅವಿನಾಶ ಬಗಲಿ ಹೇಳಿದರು. 

ಗುರುವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು-2021 ರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಹಾಸಿಂಪೀರ ವಾಲೀಕಾರ ಅವರ ಪರ ಮತಯಾಚನೆ ಮಾಡಿದರು. 

ವಾಲೀಕಾರ ಅವರು ಸರ್ವ ಜನಾಂಗದೊಂದಿಗೆ ಅನ್ಯೋನ್ಯವಾಗಿದ್ದಾರೆ. ಅಲ್ಲದೆ ಎಲ್ಲ ಸಮುದಾಯದವರೊಂದಿಗೆ ಸ್ವಾರಸದ್ಯದಿಂದಿದ್ದಾರೆ. ನಾಡು, ನುಡಿಯ ಬಗ್ಗೆ ಕಾಳಜಿ ಹೊಂದಿದ್ದಾರೆ ಹೀಗಾಗಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. 

ಜಾವೀದ ಮೊಮಿನ ಮಾತನಾಡಿ ಹಾಸೀಂಪೀರ ವಾಲೀಕಾರ ಅವರನ್ನು ಬೆಂಬಲಿಸಿದರೆ ಜಿಲ್ಲೆಗೆ ಲಾಭವಾಗಲಿದೆ. ಅವರು ಪ್ರತೀ ತಾಲೂಕಿನಲ್ಲಿಯೂ ಕನ್ನಡ ಭವನಗಳನ್ನು ಕಟ್ಟಲು ಬಧ್ಧರಿದ್ದಾರೆ. ಹೀಗಾಗಿ ಅವರಿಗೆ ಸಂಪೂರ್ಣವಾಗಿ ಬೆಂಬಲಿಸಿ ಅತೀ ಹೆಚ್ಚಿನ ಮತಗಳ ಅಂತರದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು. 

ಉಮೇಶ ದೇಗಿನಾಳ, ಎಚ್‌.ಎಮ್‌. ತಾಂಬೆ, ಮಹೇಶ ಹೊನ್ನಬಿಂದಗಿ, ಪುಂಡಲಿಕ ಹೂಗಾರ, ಪ್ರಮೋದ ಮೂರಮನ, ಪುಟ್ಟು ಬಾವಿಮನಿ, ಶಾಂತು ಹದಗಲ್, ಸತೀಶ ಗವಳಿ, ಇಬ್ರಾಹಿಮ್ ಮಕಾಂದರ, ಸಂಕೇತ ಜೋಷಿ, ಮಾಳಪ್ಪ ಪೂಜಾರಿ ಮತ್ತಿತರರು ಇದ್ದರು. 

ಸುದ್ದಿ ಓದಿ