ರೈತರ ಪ್ರತಿಭಟನೆಗೆ ಪಾದಯಾತ್ರೆ ಮೂಲಕ ಬೆಂಬಲ
ಹಗರಿಬೊಮ್ಮನಹಳ್ಳಿ 08: ಕೇಂದ್ರ ಸರಕಾರದ ನೂತನ 3 ಕಾಯದೆಗಳನ್ನು ವಿರೋಧಿಸಿ , ಎಂಎಸ್ಪಿ ಕಾನೂನು ಚೌಕಟ್ಟಿನಲ್ಲಿ ರೋಪಿಸುವಂತೆ ದೆಹಲಿ ಗಡಿಭಾದಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ವ್ಯೆಕ್ತಪಡಿಸಿ ಬಾಗಲಕೋಟೆ ಜಿಲ್ಲಾ ಹುನುಗುಂದ ತಾಲೂಕಿನ ಎಂಟೆಕ್ ಇಂಜಿಯರ್ ನಾಗರಾಜ್ ಕಲಕುಟಿಗೆಯವರು ಜಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ದೆಹಲಿವರೆಗೆ ಪಾತಯಾತ್ರೆ ಹಮ್ಮಿಕೊಂಡು ಭಾನುವಾರ ಹಗರಿಬೊಮ್ಮನಹಳ್ಳಿಗೆ ಆಗಮಿಸಿದರು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರವು ದೇಶದ ಬೆನ್ನೆಲುಬಾದ ರೈತರ ಬೇಡಿಕಗಳನ್ನು ಈಡೇರಿಸಬೇಕಿದೆ,ಎಂಎಸ್ಪಿ ಬೇಡಿಕೆಯು ನ್ಯಾಯಯುತವಾಗಿದೆ, ಈ ಬೇಡಿಕೆಯಿಂದ ಕುಟುಂಬ ಭದ್ರವಾಗುತ್ತದೆ ಇದರಿಂದ ಗ್ರಾಮ , ಹೋಬಳಿ, ತಾಲೂಕು ದೇಶ ಸುಭದ್ರ ಪರಿಸ್ಥಿತಿ ತಲುಪುತ್ತದೆ ಹಾಗಾಗಿ ಪ್ರತಭಟನಾ ನಿರತ ರೈತರಿಗೆ ಬೆಂಬಲಕ್ಕಾಗಿ ಈ ಪಾದಯಾತ್ರೆ ಪ್ರಾರಂಭಿಸಿದ್ದು ಇದು ಫೆಬ್ರುವರಿ 11ರಂದು ್ರ ಪ್ರಾರಂಭಿಸಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಕರೋನಾ ಎರಡನೆ ಲಾಕ್ಡ್ನ್ ಅಗಿದೆ , ಜುಲೈ 3ರಂದು ಮತ್ತೆ ಪ್ರಾರಂಭಿಸಿ ಇವರೆಗೆ 24ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಬಂದಿದ್ದು ಉಳಿದ ಜಿಲ್ಲೆಗೂ ಪಾದಯಾತ್ರೆ ಮಾಡಿ ಸುಮಾರು 7000 ಕಿ.ಮೀ ಪಾದಯಾತ್ರೆಯಾಗಿದ್ದು , ಸದ್ಯ2620 ಕಿ.ಮಿ ಮುಗಿಸಿದ್ದು ಉಳಿದ ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಯಾದಗಿರಿ, ಕಲ್ಬುರಗಿ, ಬೀದರ, ಬಾಗಲಕೋಟ, ಬಿಜಾಪುರದಿಂದ ಮುಂದೆ ಸಾಗಲಾಗುವುದು, ಪಾದಯಾತ್ರೆಗೆ ಹತ್ತಾರು ಹಿತ ಚಿಂತಕರು, ರೈತ ಸಂಘಟನೆಗಳು ಸ್ವಾಗತ ಕೋರಿದ್ದು ಅತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಹಗರಿಬೊಮ್ಮನಹಳ್ಳಿಯ ಹಸಿರು ಸೇನೆ ತಾಲೂಕಾಧ್ಯಕ್ಷ ಮಾಬು ಸಾಬ್ ಹಗರಿಬೊಮ್ಮನಹಳ್ಳಿಯಿಂದ ಕೂಡ್ಲಗಿವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಮುಖಂಡರು ಇದ್ದರು.