ಸನ್ನಿ ಲಿಯೋನ್ ಹೆಸರಿನಲ್ಲಿ ಸಾಲ, ಸಿಬಿಲ್ ಸ್ಕೋರ್ ಹಾಳುಮಾಡಿದ್ದಾರೆಂದು ಸನ್ನಿ ಟ್ವೀಟ್
ಮುಂಬೈ: ಫೆಬ್ರವರಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ ಪಾನ್ ಕಾರ್ಡ್ ಸಹಾಯದಿಂದ ಅಪರಿಚಿತರು ಸಾಲ ಪಡೆದಿದ್ದಾರೆ ಎಂದು ದೂರಿದ್ದಾರೆ. ಯಾರೋ ಮೂರ್ಖರು ನನ್ನ ಪಾನ್ ಕಾರ್ಡ್ ಸಹಾಯದಿಂದ 2,000 ರೂಪಾಯಿ ಸಾಲ ತೆಗೆದುಕೊಂಡಿದ್ದಾರೆ. ಇದರಿಂದಾಗಿ ನನ್ನ ಸಿಬಿಲ್ ಸ್ಕೋರ್ ಹಾಳಾಗಿದೆ. ಐವಿಎಲ್ ಸೆಕ್ಯುರಿಟೀಸ್ (ಧನಿ ಸ್ಟಾಕ್ಸ್) (ಇಂಡಿಯಾ ಬುಲ್ಸ್ ಸೆಕ್ಯುರಿಟೀಸ್) ಈ ವಿಷಯದಲ್ಲಿ ನನಗೆ ಸಹಾಯ ಮಾಡಲಿಲ್ಲ. ಇಂಡಿಯಾ ಬುಲ್ಸ್ ಇದನ್ನು ಹೇಗೆ ಅನುಮತಿಸುತ್ತದೆ, ”ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.
ವಾಸ್ತವವಾಗಿ ಇದಕ್ಕೆ ಸನ್ನಿ ಲಿಯೋನ್ ಮಾತ್ರ ಬಲಿಪಶು ಅಗಿಲ್ಲ. ಪ್ರತಿನಿತ್ಯ ನೂರಾರು ಪ್ರಕರಣಗಳು ನಡೆಯುತ್ತಿವೆ. ವಂಚಕರು ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಗುರಿಯಾಗಿಟ್ಟುಕೊಂಡು ಡಿಜಿಟಲ್ ವಂಚನೆ ಅದರಲ್ಲೂ ವಿಶೇಷವಾಗಿ ಐವಿಎಲ್ ಸೆಕ್ಯುರಿಟೀಸ್ ನಂತಹ ಆ್ಯಪ್ ಗಳನ್ನ ಬಳಸುತ್ತಿದ್ದಾರೆ.
ಸನ್ನಿ ಲಿಯೋನ್ ನಂತರ ತಮ್ಮ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಅನ್ನು ಅಳಿಸಿದ್ದಾರೆ,ಅಳಿಸಿ ಹಾಕಿದನ್ನ ಕೆಲವು ಬಳಕೆದಾರರಿಂದ ವಿಮರ್ಶೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಲ್ಲಿ ಲಿಯೋನ್ ತನ್ನ ಸಮಸ್ಯೆ ಬಗೆಹರಿಸಿದಕ್ಕೆ ಹಿಂದಿನ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. “ಐವಿಎಲ್ ಸೆಕ್ಯುರಿಟೀಸ್, ಐಬಿ ಹೋಮ್ ಲೋನ್ಸ್, ಸಿಬಿಲ್‌ಗೆ ಧನ್ಯವಾದಗಳು. ನನ್ನ ಸಮಸ್ಯೆಯನ್ನು ವೇಗವಾಗಿ ಪರಿಹರಿಸಿದ್ದಕ್ಕಾಗಿ ಧನ್ಯವಾದಗಳು ಮತ್ತೊಮ್ಮೆ ಅದು ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇದೇ ರೀತಿಯ ಸಮಸ್ಯೆ ಇತರರಿಗೆ ಎದುರಾಗದಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಸನ್ನಿ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.